ಟೆಹ್ರಾನ್: ಕುವೈತ್ನ ವಿದ್ಯುತ್ ಸ್ಥಾವರ ಮತ್ತು ನಿರ್ಲವಣೀಕರಣ ಘಟಕದ ಮೇಲೆ ಇರಾನ್ ದಾಳಿಯಲ್ಲಿ ಭಾರತೀಯ ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ. ದಾಳಿಯಿಂದ ವಿದ್ಯುತ್ ಘಟಕದ ಕಟ್ಟಡವೊಂದಕ್ಕೆ ಭಾರೀ ಹಾನಿಯಾಗಿದೆ.
ಭಾನುವಾರ ಸಂಜೆ ಈ ಘಟನೆ ಸಂಭವಿಸಿದ್ದು, ಇದು ದೇಶದ ಮೇಲೆ ಇರಾನ್ ನಡೆಸಿದ ಅತಿದೊಡ್ಡ ಆಕ್ರಮಣಗಳಲ್ಲಿ ಒಂದಾಗಿದೆ ಎಂದು ಕುವೈತ್ನ ವಿದ್ಯುತ್, ನೀರು ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ತಿಳಿಸಿದೆ.
ಇಸ್ರೇಲ್ನತ್ತ ಉಡಾಯಿಸಲಾದ ಕ್ಷಿಪಣಿಗಳ ಮೂಲಕ ಭಾರತದ ಜನರಿಗೆ ಧನ್ಯವಾದಗಳು ಎಂದು ಇರಾನ್ ಹೇಳಿದ ಮರುದಿನವೇ ಈ ಘಟನೆ ನಡೆದಿದೆ. ಘಟನೆಯ ಬಗ್ಗೆ ಕುವೈತ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಥವಾ ವಿದೇಶಾಂಗ ಸಚಿವಾಲಯ ತಕ್ಷಣದ ಪ್ರತಿಕ್ರಿಯೆ ನೀಡಿಲ್ಲ.
ಕುವೈತ್ನ ವಿದ್ಯುತ್ ಸ್ಥಾವರ ಮೇಲೆ ಇರಾನ್ ದಾಳಿ ಭಾರತೀಯ ಕಾರ್ಮಿಕ ಸಾವು



