ಬೆಂಗಳೂರು: ಭಾರತದ ಅಗ್ರಮಾನ್ಯ ಬಿಲ್ಲುಗಾರ್ತಿ ಜ್ಯೋತಿ ಸುರೇಖಾ ವೆನ್ನಂ ಅವರು ತಮ್ಮ ವೃತ್ತಿಜೀವನಕ್ಕೆ ಮತ್ತೊಂದು ಐತಿಹಾಸಿಕ ಗರಿ ಸೇರಿಸಿದ್ದಾರೆ. ಶನಿವಾರ ನಡೆದ ಆರ್ಚರಿ ವಿಶ್ವಕಪ್ ಫೈನಲ್ನಲ್ಲಿ ಅವರು ಕಂಚಿನ ಪದಕವನ್ನು ಮುಡಿಗೇರಿಸಿಕೊಳ್ಳುವ ಮೂಲಕ, ಈ ಪ್ರತಿಷ್ಠಿತ ಸ್ಪರ್ಧೆಯಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳಾ ಕಾಂಪೌAಡ್ ಬಿಲ್ಲುಗಾರ್ತಿ ಎಂಬ ಇತಿಹಾಸವನ್ನು ಬರೆದಿದ್ದಾರೆ. ಭಾರತದ ಕಾಂಪೌAಡ್ ಜ್ಯೋತಿ ಸುರೇಖಾ ವೆಂಕಣ್ಣA ಅವರು ಚೀನಾದ ನಾನ್ಜಿಂಗ್ನಲ್ಲಿ ನಡೆದ ವಿಶ್ವಕಪ್ ಫೈನಲ್ನಲ್ಲಿ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಶನಿವಾರ ನಡೆದ ಪಂದ್ಯದಲ್ಲಿ ವಿಶ್ವದ ನಂ.೨
ಆಟಗಾರ್ತಿ ಗ್ರೇಟ್ ಬ್ರಿಟನ್ನ ಎಲಾ ಗಿಬ್ಸನ್ ಅವರನ್ನು ೧೫೦-೧೪೫ ಅಂಕಗಳ ಅಂತರದಿAದ ಸೋಲಿಸಿ ಈ ಸಾಧನೆಗೈದರು. ಇದು ವಿಶ್ವಕಪ್
ಫೈನಲ್ನಲ್ಲಿ ಜ್ಯೋತಿ ಅವರ ಮೊದಲ ಪದಕವಾಗಿದೆ.
ಏಷ್ಯನ್ ಗೇಮ್ಸ್ ಚಾಂಪಿಯನ್ ಆಗಿರುವ ೨೯ ವರ್ಷದ ಜ್ಯೋತಿ, ಕಂಚಿನ ಪದಕದ ಪಂದ್ಯದಲ್ಲಿ ಸತತ ೧೫ ಪರಿಪೂರ್ಣ ಬಾಣಗಳನ್ನು ಹೊಡೆದು ಗಿಬ್ಸನ್ ಅವರನ್ನು ಮಣಿಸಿದರು. ಎಂಟು ಬಿಲ್ಲುಗಾರ್ತಿಯರು ಭಾಗವಹಿಸಿದ್ದ ಈ ಫೈನಲ್ ಟೂರ್ನಿಯಲ್ಲಿ, ಜ್ಯೋತಿ ಕ್ವಾರ್ಟರ್ಫೈನಲ್ನಲ್ಲಿ ಅಮೆರಿಕದ ಅಲೆಕ್ಸಿಸ್ ರೂಯಿಜ್ ವಿರುದ್ಧ ೧೪೩-೧೪೦ ಅಂತರದಿAದ ಗೆದ್ದು ಉತ್ತಮ ಆರಂಭ ಪಡೆದಿದ್ದರು. ಆದರೆ, ಸೆಮಿಫೈನಲ್ನಲ್ಲಿ ಮೆಕ್ಸಿಕೋದ ವಿಶ್ವದ ನಂ.೧ ಆಟಗಾರ್ತಿ ಆಂಡ್ರಿಯಾ ಬೆಸೆರಾ ವಿರುದ್ಧ ೧೪೩- ೧೪೫ ಅಂತರದಿAದ ಕೇವಲ ಎರಡು ಅಂಕಗಳ ಅAತರದಲ್ಲಿ ಸೋಲನುಭವಿಸಿದರು.
ಮೂರನೇ ಎಂಡ್ನಲ್ಲಿ ೮೭-೮೬ ಅಂತರದಿAದ ಮುನ್ನಡೆ ಸಾಧಿಸಿದ್ದರೂ, ನಾಲ್ಕನೇ ಎಂಡ್ನಲ್ಲಿ ಬೆಸೆರಾ ಮೂರು ೧೦ ಅಂಕಗಳನ್ನು ಗಳಿಸಿ ೧೧೬-೧೧೫ ಅಂತರದಿAದ ಮುನ್ನಡೆ ಸಾಧಿಸಿ, ಅಂತಿಮವಾಗಿ ಐದನೇ ಮಎಂಡ್ನಲ್ಲಿ ೨೯-೨೮ ಅಂತರದಿAದ ಗೆದ್ದು ಫೈನಲ್ಗೆ ತಲುಪಿದರು. ಈ ಗೆಲುವು ಜ್ಯೋತಿ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ. ಏಕೆಂದರೆ ೨೦೨೨ರಲ್ಲಿ ಟ್ಲಾಕ್ಸಲಾ ಮತ್ತು ೨೦೨೩ರಲ್ಲಿ ಹೆರ್ಮೋಸಿಲೊದಲ್ಲಿ ನಡೆದ ವಿಶ್ವಕಪ್ ಫೈನಲ್ನಲ್ಲಿ ಆರಂಭಿಕ ಸುತ್ತುಗಳಲ್ಲೇ ಹೊರಬಿದ್ದಿದ್ದ ಜ್ಯೋತಿ, ಈ ಬಾರಿ ತಮ್ಮ ಪ್ರದರ್ಶನವನ್ನು ಗಣನೀಯವಾಗಿ ಸುಧಾರಿಸಿಕೊಂಡಿದ್ದಾರೆ.