ವೇಗಿ ಜೋಶ್ ಹೇಜಲ್ವುಡ್ ಅವರ ಮಾರಕ ಬೌಲಿಂಗ್ ದಾಳಿಗೆ ನಡುಗಿದ ಭಾರತ ತಂಡ ಆಸ್ಟೆçÃಲಿಯಾ ವಿರುದ್ಧ ೨ನೇ ಟಿ೨೦ ಪಂದ್ಯದಲ್ಲಿ ೪ ವಿಕೆಟ್ ಗಳಿಂದ ಪರಾಭವಗೊಂಡಿದೆ. ಹೀಗಾಗಿ ೫ ಪಂದ್ಯಗಳ ಟಿ೨೦ ಸರಣಿಯಲ್ಲಿ ಆತಿಥೇಯ ಮಿಚೆಲ್ ಮಾರ್ಷ್ ಬಳಗ ಇದೀಗ ೧-೦ ಅಂತರದಿAದ ಮುನ್ನಡೆ ಸ್ಥಾಪಿಸಿದೆ. ಮೆಲ್ಬರ್ನ್ ನಲ್ಲಿ ನಡೆದ ೨ನೇ ಟಿ೨೦ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ೧೮.೪ ಓವರ್ ಗಳಲ್ಲಿ ೧೨೫ ರನ್ ಗಳಿಗೆ ಆಲೌಟ್ ಆಯಿತು. ಈ ಅಲ್ಪಮೊತ್ತವನ್ನು ಆಸ್ಟೆçÃಲಿಯಾ ತಂಡ ೬ ವಿಕೆಟ್ ಗಳನ್ನು ಕಳೆದುಕೊಂಡು ಇನ್ನೂ ೪೦ ಎಸೆತಗಳು ಬಾಕಿ ಉಳಿದಿರುವಂತೆ ಗುರಿ ತಲುಪಿತು. ನಾಯಕ ಮಿಚೆಲ್ ಮಾರ್ಷ್ ಮತ್ತು ಟ್ರಾವಿಸ್ ಹೆಡ್ ಅ ವರು ಕೇವಲ ೪.೧ ಓವರ್ ಗಳಲ್ಲಿ ಮೊದಲ ವಿಕೆಟ್ ಗೆ ೫೧ ರನ್ ಗಳ ಜೊತೆಯಾಟ ಆಡುವ ಮೂಲಕ ಆತಿಥೇಯರ ಜಯ ಖಚಿತಪಡಿಸಿದರು.
ಆ ಬಳಿಕ ಭಾರತ ತಂಡ ತಂಡ ನಿರAತರವಾಗಿ ವಿಕೆಟ್ ಕೀಳುತ್ತಾ ಹೋಯಿತು. ಜಸ್ಪಿçÃತ್ ಬುಮ್ರಾ ಅವರಂತೂ ಮಿಚೆಲ್ ಓವನ್ ಮತ್ತು ಮ್ಯಾಥ್ಯೂ ಶಾರ್ಟ್ ಅವರ ವಿಕೆಟ್ ಕಿತ್ತು ಹ್ಯಾಟ್ರಿಕ್ ಚಾನ್ಸ್ ನಲ್ಲಿದ್ದರು. ಆದರೆ ಬೇಕಾಗಿದ್ದ ಮೊತ್ತ ಬಹಳ ಕಡಿಮೆ ಇದ್ದ ಕಾರಣ ಯಾವ ಪ್ರಯೋಜನವೂ ಆಗಲಿಲ್ಲ. ಜುಮ್ರಾ ಜೊತಗೆ ವರುಣ್ ಚಕ್ರವರ್ತಿ ಮತ್ತು ಕುಲ್ದೀಪ್
ಯಾದವ್ ತಲಾ ೨ ವಿಕೆಟ್ ಉರುಳಿಸಿದರು. ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಭಾರತ ತಂಡ ಆಸೀಸ್ ವೇಗಿಗಳ ಬೌಲಿಂಗ್ ದಾಳಿಯನ್ನು
ಎದುರಿಸಲಾಗದೆ ಒದ್ದಾಡಿತು. ಅದರಲ್ಲೂ ಜೋಶ್ ಹೇಜಲ್ವುಡ್ ಅವರ ಮೊನಚಿನ ದಾಳಿಗೆ ಭಾರತ ಅಕ್ಷರಶಃ ನಿರುತ್ತರವಾಯಿತು.
ಅಭಿಷೇಕ್ ಶರ್ಮಾ ಮತ್ತು ಹರ್ಷಿತ್ ರಾಣಾ ಅವರನ್ನು ಹೊರತುಪಡಿಸಿದರೆ ಬೇರಾವ ಬ್ಯಾಟರ್ ಕೂಡ ಎರಡಂಕಿಯ ರನ್ ಕೂಡ ಗಳಿಸಲಿಲ್ಲ. ಅಭಿಷೇಕ್ ಶರ್ಮಾ ಅವರು ೩೭ ಎಸೆತಗಳಿಂದ ೬೮ ರನ್ ಬಾರಿಸಿದ್ದಕ್ಕೆ ತಂಡದ ಮೊತ್ತ ೧೦೦ ದಾಟಿತು. ಆದರೆ ಅವರಿಗೆ ಮತ್ತೊಂದು ಕಡೆಯಿಂದ ಸೂಕ್ತ ಬೆಂಬಲ ದೊರಕಲಿಲ್ಲ. ೩೩ ಎಸೆತಗಳಿಂದ ೩೫ ರನ್ ಗಳಿಸಿದ್ದ ಹರ್ಷಿತ್ ರಾಣಾ ಔಟಾಗುತ್ತಲೇ ಮತ್ತೆ ವಿಕೆಟ್ ಗಳು ಪಟಪಟನೆ ಉರುಳಿದವು. ಜೋಶ್ ಹೇಜಲ್ವುಡ್ ಅವರು ಅರ್ಹವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಸಂಕ್ಷಿಪ್ತ ಸ್ಕೋರ್ ಭಾರತ ೧೮.೪ ಓವರ್ ಗಳಲ್ಲಿ ೧೨೫/೧೦, ಅಭಿಷೇಕ್ ಶರ್ಮಾ ೬೮(೩೭), ಹರ್ಷಿತ್ ರಾಣಾ ೩೫(೩೩), ಜೋಶ್ ಹ್ಯಾಜಲ್ ವುಡ್ ೧೮ಕ್ಕೆ ೩, ಕ್ಸೇವಿಯರ್ ಬಾರ್ಲೆಟ್ ೩೯ಕ್ಕೆ ೨, ನೇಥನ್ ಎಲ್ಲಿಸ್ ೨೧ಕ್ಕೆ ೨ ಆಸ್ಟೆçÃಲಿಯಾ ೧೩.೨ ಓವರ್ ಗಳಲ್ಲಿ ೧೨೬/೬, ಮಿಚೆಲ್ ಮಾರ್ಷ್ ೪೬(೨೬), ಟ್ರಾವಿಸ್ ಹೆಡ್ ೨೮(೧೫), ಜಸ್ಪಿçÃತ್ ಬುಮ್ರಾ ೨೬ಕ್ಕೆ ೨, ವರುಣ್ ಚಕ್ರವರ್ತಿ ೨೩ಕ್ಕೆ ೨, ಕುಲ್ದೀಪ್ ಯಾದವ್ ೪೫ಕ್ಕೆ ೨.



