ಹುಬ್ಬಳ್ಳಿ.ತಾಲೂಕಿನ ವರೂರ ಗ್ರಾಮದಲ್ಲಿ ೧೨೯ ನೇ ವರ್ಷದ ಭಾರತದ ಪಕ್ಷಿ ತಜ್ಞ ಡಾ. ಸಲೀಂ ಅಲಿ ಅವರ ಜನ್ಮದಿನಾಚರಣೆ ಅಂಗವಾಗಿ ಶ್ರೀ ಉಜೈನಿ ಜಗದ್ಗುರು ಸಿದ್ದೇಶ್ವರ
ಪ್ರೌಢಶಾಲೆಯಲ್ಲಿ ಪಕ್ಷಿ ತಜ್ಞರಾದ ಪವನ್ ಮಿಸ್ಕಿನ್ ರವರು ಡಾ. ಸಲೀಂ ಅಲಿ ಅವರ ಜೀವನದ ಮಹತ್ವ ಘಟ್ಟಗಳನ್ನು ಹೇಳುತ್ತಾ, ವಲಸೆ ಹಕ್ಕಿ ಗಳ ಬಗ್ಗೆ, ಪಕ್ಷಿಗಳ ಸಂರಕ್ಷಣೆ,
ಪಕ್ಷಿಗಳಿಂದ ಪರಿಸರ ಸಮತೋಲನ ಕೆರೆಗಳ ಸಂರಕ್ಷಣೆ, ಪರಿಸರ ಸಂರಕ್ಷಣೆ ಇನ್ನೂ ಅನೇಕ ವಿಷಯಗಳ ಕುರಿತು ಮಾಹಿತಿ ನೀಡುತ್ತಾ ಮಕ್ಕಳಿಗೆ ಪರಿಸರದ ಆಸಕ್ತಿಯನ್ನು
ಮೂಡಿಸಲಾಯಿತು. ಕರ್ನಾಟಕ ಅರಣ್ಯಇಲಾಖೆ ವತಿಯಿಂದ ಬಿಡುಗಡೆಗೊಳಿಸಿದಪಕ್ಷಿಗಳ ಕಿರು ಪರಿಚಯದ ಪುಸ್ತಕವನ್ನು ಮಕ್ಕಳಿಗೆ ನೀಡಲಾಯಿತು.
“ಭಾರತದ ಪಕ್ಷಿ ತಜ್ಞ ಡಾ. ಸಲೀಂ ಅಲಿ ಜನ್ಮದಿನಾಚರಣೆ ಶಾಲಾ ಮಕ್ಕಳಿಗೆ ಪರಿಸರ ಕುರಿತು ಜಾಗೃತಿ”



