ಬೇಲೂರು: ತಾಲೂಕಿನ ಹಳೇಬೀಡು ಹೋಬಳಿ ಐದಳ್ಳ ಕಾವಲ್ ಸರ್ಕಾರಿ ಭೂಮಿ 1, ಸರ್ವೆ ನಂ 1 – 2555 ಎಕರೆ ಭೂಮಿಯಲ್ಲಿ ಕೃಷಿ ಚಟವಟಿಕೆ ನಡೆಸುವ ರೈತರನ್ನು ಅರಣ್ಯ ಇಲಾಖೆ ಒಕ್ಕಲ್ಲೆಬ್ಬಿಸುವ ಮೂಲಕ ರೈತರಿಗೆ ಅನ್ಯಾಯ ಮಾಡಿದೆ. ಸಂಬAಧ ಪಟ್ಟವರು ರೈತರಿಗೆ ಭೂಮಿ ಉಳಿಸಿಕೊಡಬೇಕು ಇಲ್ಲವಾದರೆ ಬೇಲೂರು ಪಟ್ಟಣದ ಹಾಸನ ಮತ್ತು ಚಿಕ್ಕಮಗಳೂರು ರಸ್ತೆ ತಡೆ ನಡೆಸಲಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಎಚ್ಚರಿಸಿದೆ.
ಹೌದು ! ತಾಲ್ಲೂಕಿನ ಐದಳ್ಳ ಕಾವಲ್ ನಲ್ಲಿ ಈಗಾಗಲೇ 870 ಕ್ಕೂ ಅಧಿಕ ರೈತರು ಸರ್ವೆ ನಂ 1 ರ 2555 ರಲ್ಲಿ ಭೂಮಿ ಹಂಚಿಕೆ ಮಾಡಿಕೊಂಡು ಕೆಲವರು ಉಳುಮೆ ಮಾಡಿಕೊಂಡು ಬದಕು ಕಟ್ಟಿಕೊಂಡಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಅರಣ್ಯ ಇಲಾಖೆ ಐದಳ್ಳ ಕಾವಲ್ ಸರ್ವೆ ನಂ 1 ಸರ್ಕಾರಿ ಭೂಮಿ ಎಂದು ಪಹಣೆಯಲ್ಲಿ ಬರುತ್ತಿದೆ.ಅರಣ್ಯ ಇಲಾಖೆ ಮಾತ್ರ ಪ್ರತಿನಿತ್ಯ ರೈತರು ಹಂಚಿಕೆ ಮಾಡಿಕೊಂಡ ಭೂಮಿಗೆ ಬಂದು ತೊಂದರೆ ನೀಡುತ್ತಿದ್ದಾರೆ. ಇಂದು ಸೋಮವಾರ ಕೂಡ ಅರಣ್ಯ ಇಲಾಖೆಯ ಅಧಿಕಾರಿಗಳು ಲಾರಿಯಲ್ಲಿ ಜೆಸಿಬಿ ಯಂತ್ರ ತಂಬಿಕೊAಡು ಬಂದು ಕಾಲುವೆ ತೆಗೆಸುವ ಸಂದರ್ಭದಲ್ಲಿ ರೈತ ಸಂಘದ ರಾಷ್ಟ್ರೀಯ ಸಂಚಾಲಕ ಕನಕಂಚೇನಹಳ್ಳಿ ಪ್ರಸನ್ನಕುಮಾರ್ ನೇತೃತ್ವದಲ್ಲಿ ನೂರಾರು ರೈತರು ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಿ ಜೆಸಿಬಿಯನ್ನು ವಾಪಸು ಕಳಿಸಿದ್ದು ಸ್ಥಳದಲ್ಲಿ ರೈತರು ಮೊಕ್ಕಾಂ ಹೊಡಿದ್ದಾರೆ.ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೋಲಿಸ್ ಇಲಾಖೆ ಸಹಕಾರವನ್ನು ನೀಡಿದೆ ಎನ್ನಲಾಗಿದೆ.
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ರೈತ ಸಂಘದ ರಾಷ್ಟ್ರೀಯ ಸಂಚಾಲಕ ಕನಕಂಚೇನಹಳ್ಳಿ ಪಟೇಲ್ ಪ್ರಸನ್ನಕುಮಾರ್, ಬೇಲೂರು ತಾಲ್ಲೂಕಿನ ಹಳೇಬೀಡು ಹೋಬಳಿ ಐದಳ್ಳ ಕಾವಲ್ 1 ಸರ್ವೆ ನಂ 1 ರಲ್ಲಿನ 2555 ಎಕ್ಕರೆ ಭೂಮಿಯನ್ನು ಈಗಾಗಲೇ 870 ಕ್ಕೂ ಅಧಿಕ ಬಡ ರೈತರು ಸಾಗುವಳಿ ನಡೆಸಿಕೊಂಡು ಕುಟುಂಬ ನಿರ್ವಹಣೆ ಮಾಡುತ್ತಿರುವ ರೈತರ ಮೇಲೆ ಗದಾ ಪ್ರಹಾರ ನಡೆಸಿದ ಅರಣ್ಯ ಇಲಾಖೆ ಈ ಭೂಮಿ ನಮ್ಮದು ಎಂದು ಹೇಳಿಕೊಂಡು ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಸುತ್ತಿರುವುದು ನಿಜಕ್ಕೂ ಶೋಚನೀಯ. ಈಗಾಗಲೇ ಐದಳ್ಳ ಕಾವಲ್ ಸರ್ವೆ ನಂ 1 ರ 2555 ಎಕ್ಕರೆ ಸರ್ಕಾರಿ ಭೂಮಿ ಎಂದು ಪಹಣಿಯಲ್ಲಿ ಬರುತ್ತಿದೆ ಆದರೆ ಅರಣ್ಯ ಇಲಾಖೆ ತಮ್ಮದಲ್ಲದ ಭೂಮಿಗೆ ಏಕೆ ಆಸೆ ಪಡುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ ಎಂದು ಕಿಡಿಕಾರಿದ ಅವರು ಕೃಷಿಕರ ಭೂಮಿ, ಅರಣ್ಯ ಇಲಾಖೆ ಏಕಾಏಕಿ ನಮ್ಮ ಭೂಮಿ ಎಂದು ಬಡ ಕೃಷಿಕರನ್ನು ಒಕ್ಕಲೆಬ್ಬಿಸುವ ಹುನ್ನಾರ ಮಾಡುತ್ತಿರವ ಕಾರಣದಿಂದ ರಾಷ್ಟçಪತಿ, ರಾಜ್ಯಪಾಲರಿಗೆ ಮನವಿ ನೀಡಲಾಗಿದೆ. ಇದೇ ಭೂಮಿಗಾಗಿ ನೂರಾರು ರೈತರು ಬೇಲೂರಿಗೆ ಸತತ ಮೂರು ಬಾರಿ ಪಾದಯಾತ್ರೆ ಮಾಡಿದ್ದಾರೆ. ನಮ್ಮ ಹೋರಾಟಕ್ಕೆ ಪ್ರೋ. ನಂಜುAಡಸ್ವಾಮಿರವರೇ ಶಕ್ತಿ, ಐದಳ ಕಾವಲಿನ ಭೂಮಿಯಲ್ಲಿ ಪ್ರೊ. ನಂಜುAಡಸ್ವಾಮಿ ಪುತ್ತಳಿ ಸ್ಥಾಪನೆಯೊಂದಿಗೆ ಹೋರಾಟ ನಡೆಸುವ ಬಗ್ಗೆ ಎಚ್ಚರಿಕೆ ನೀಡಿದರು.
‘ಈಗಾಗಲೇ ಐದಾರು ಬಾರಿ ಐದಳ ಕಾದಲಿನ ಬಗ್ಗೆ ಭೂಮಿ ಉಳಿಸಬೇಕು ಎಂದು ರೈತ ಸಂಘ ಪಾದಯಾತ್ರೆ ಮೂಲಕ ಮನವಿ ಸಲ್ಲಿಸಿದೆ. ಈಗಲೂ ಮನವಿ ರಾಷ್ಟ್ರಪತಿಗಳು ಮತ್ತು ರಾಜ್ಯಪಾಲರು ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ. ಸದ್ಯ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದು, ಪರಿಶೀಲನೆ ನಡೆಸಲಾಗುತ್ತದೆ ಎಂದಿದ್ದಾರೆ. ಅರಣ್ಯ ಇಲಾಖೆ ಯಾವುದೇ ಕಾರಣಕ್ಕೂ ರೈತರ ಸಾಗುವಳಿ ಭೂಮಿಯನ್ನು ಅತಿಕ್ರಮಣ ಮಾಡಬಾರದು ಎಂದು ತಿಳಿಸಿದರು ಕೂಡ ಅರಣ್ಯ ಇಲಾಖೆ ಪದೇ ಪದೇ ರೈತರಿಗೆ ತೊಂದರೆ ನೀಡುತ್ತಾ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟದ ಮೂಲಕ ಎಚ್ಚರಿಕೆ ನೀಡಲಾಗುತ್ತದೆ ಎಂದು ರೈತ ಸಂಘದ ರಾಷ್ಟ್ರೀಯ ಸಂಚಾಲಕರಾದ ಕನಕಂಚೇನಹಳ್ಳಿ ಪ್ರಸನ್ನ ಕುಮಾರ್ ತಿಳಿಸಿದರು.
ಈ ಸಂದರ್ಭ ರೈತ ಮುಖಂಡರಾದ ನಿಂಗಪ್ಪ, ಅಯ್ಯಬಾ ಸಾಬ್, ವಿಜಾಜ್ ಪಾಷ, ಮಹಮ್ಮದ್ ದಸ್ತಗಿರಿ, ಭೋಜರಾಜ್, ಹನುಮಂತ ಮುಂತಾದವರು ಭಾಗವಹಿಸಿದ್ದರು.
ಪ್ರಾಣ ಬಿಟ್ಟೇವು – ಐದಳ್ಳ ರೈತರ ಭೂಮಿ ಬಿಡಲ್ಲ – ರೈತರ ಆಕ್ರೋಶ



