ರಾಮನಗರ: ತಾಲ್ಲೂಕಿನ ಕಸಬಾ ಹೋಬಳಿ ಕರಡಿದೊಡ್ಡಿ ಎಂಪಿಸಿಎಸ್ ಅಧ್ಯಕ್ಷರಾಗಿ ಇಂದಿರಾಉಮೇಶ್, ಉಪಾಧ್ಯಕ್ಷರಾಗಿ ಶಿವಮ್ಮಸುರೇಶ್ ಅವಿರೋಧವಾಗಿ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.
ಸಂಘದಲ್ಲಿ ಗುರುವಾರ ನಡೆದ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಇಂದಿರಾ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಶಿವಮ್ಮ ಅವರುಗಳು ಮಾತ್ರ ನಾಮಪತ್ರ ಸಲ್ಲಿಸಿದ್ದರು. ಇವರನ್ನು ಹೊರತುಪಡಿಸಿ ಮತ್ಯಾರು ನಾಮಪತ್ರ ಸಲ್ಲಿಸದ ಕಾರಣ ರಿಟರ್ನಿಂಗ್ ಅಧಿಕಾರಿ ಅವರ ಅವಿರೋಧ ಆಯ್ಕೆಯನ್ನು ಘೋಷಿಸಿದರು.
ನೂತನ ಅಧ್ಯಕ್ಷೆ ಇಂದಿರಾಉಮೇಶ್ ಅಭಿನಂದನೆ ಸ್ವೀಕರಿಸಿ ಮಾತನಾಡಿ ಗ್ರಾಮೀಣ ಭಾಗದ ಕುಟುಂಬಗಳ ನಿರ್ವಹಣೆ ಮತ್ತು ಆರ್ಥಿಕ ಮಟ್ಟವನ್ನು ವೃದ್ದಿಸುವಲ್ಲಿ ಎಂಪಿಸಿಎಸ್‍ಗಳು ಪ್ರಮುಖಪಾತ್ರ ವಹಿಸುತ್ತಿವೆ, ಇದನ್ನರಿತು ನಮ್ಮ ಗ್ರಾಮದಲ್ಲಿ ಮಹಿಳಾ ಸಹಕಾರ ಸಂಘವನ್ನು ಕಟ್ಟಿಕೊಳ್ಳಲಾಗಿದ್ದು, ಈ ಸಂಘ ತಾಲೂಕಿನಲ್ಲಿ ಆರಂಭವಾದ 11ನೇ ಮಹಿಳಾ ಎಂಪಿಸಿಎಸ್ ಆಗಿದ್ದು, ನಮ್ಮ ಆಡಳಿತ ಮಂಡಳಿ ನಿರ್ದೇಶಕರು ಒಗ್ಗಟ್ಟಿನಿಂದ ಸಂಘ ಮತ್ತು ಸದಸ್ಯರ ಪ್ರಗತಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಹೇಳಿದರು.
ಈ ವೇಳೆ ಮಹಿಳಾ ಸಂಘದ ಉಪಾಧ್ಯಕ್ಷೆ ಶಿವಮ್ಮ, ನಿರ್ದೇಶಕ ರಾದ ತಾಯಮ್ಮ, ಭಾಗ್ಯಮ್ಮ, ಸುನಂದಮ್ಮ, ಪ್ರೇಮಾ, ಚಿಕ್ಕಮ್ಮ, ಗಂಗಾಭಿಕ ಹಾಗೂ ಗ್ರಾಮದ ಮುಖಂಡರಾದ ಶಿವಭದ್ರಯ್ಯ, ಮೋಹನ್‍ಕುಮಾರ್, ಆನಂದ್, ಹನುಮಂತಯ್ಯ. ಭಜ್ಜೇಗೌಡ, ಮಹದೇವಯ್ಯ, ಮಾಯಣ್ಣ ಮತ್ತಿತರರು ಅಭಿನಂದಿಸಿದರು.
Leave a Review