ನಿರ್ಣಾಯಕ ಸೂಪರ್ ೪ ಪಂದ್ಯದಲ್ಲಿ ಬಾAಗ್ಲಾದೇಶವನ್ನು ೧೧ ರನ್ ಗಳಿಂದ ಬಗ್ಗುಬಡಿದ ಪಾಕಿಸ್ತಾನ ತಂಡ ಏಷ್ಯಾ ಕಪ್ ೨೦೨೫ ಫೈನಲ್ ಪ್ರವೇಶಿಸಿದೆ. ಹೀಗಾಗಿ ಇದೇ ಮೊದಲ ಬರಿಗೆ ಟೂರ್ನಿಯ ಇತಿಹಾಸದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ೧೯೮೪ರಲ್ಲಿ ಏಷ್ಯಾ ಕಪ್ ಪ್ರಾರಂಭವಾದ ಬಳಿಕ ಈವರೆಗೆ ಒಟ್ಟು ೧೬ ಬಾರಿ ಪಂದ್ಯಾವಳಿ ಜರುಗಿದೆ. ಆದರೆ ಈವರೆಗೂ ಕ್ರಿಕೆಟ್ ನ ಸಾಂಪ್ರದಾಯಿಕ ಎದುರಾಳಿಗಳಾದ ಪಾಕಿಸ್ತಾನ ಮತ್ತು ಭಾರತ ಫೈನಲ್ ತಲುಪಿದ್ದಿಲ್ಲ. ಇದೀಗ ಭಾನುವಾರದಂದು ನಡೆಯಲಿರುವ ಪಂದ್ಯ ಅಕ್ಷರಶಃ ಹೈವೋಲ್ಟೇಜ್ ಪಂದ್ಯವಾಗಲಿದೆ.
ದುಬೈ ಅಂತಾರಾಷ್ಟಿçÃಯ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಸೂಪರ್ ಫೋರ್ ಹಂತದ ಪAದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ನಿಗದಿತ ೨೦ ಓವರ್ ಗಳಲ್ಲಿ ೮ ವಿಕೆಟ್ ನಷ್ಟಕ್ಕೆ ೧೩೫ ರನ್ ಪೇರಿಸಿತು. ಇದಕ್ಕೆ ಉತ್ತರವಾಗಿ ಬಾಂಗ್ಲಾದೇಶ ತಂಡ ೧೦ ಓವರ್ ಗಳಲ್ಲಿ ೯ ವಿಕೆಟ್ ನಷ್ಟಕ್ಕೆ ೧೨೪ ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಪಾಕಿಸ್ತಾನದ ಬ್ಯಾಟರ್ ಗಳು ಕೈಕೊಟ್ಟರೂ ಬೌಲರ್ ಗಳ ಸಾಹಸದಿಂದಾಗಿ ಪAದ್ಯ ರೋಮಾಂಚಕ ಅಂತ್ಯವನ್ನು ಕಾಣುವAತಾಯಿತು.
ಬಾAಗ್ಲಾದೇಶ ತಂಡದ ಬ್ಯಾಟರ್ ಗಳನ್ನು ಕಟ್ಟಿಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದ ಶಾಹಿನ್ ಶಾ ಅಫ್ರಿದಿ ಅವರು ಪಂದ್ಯಶ್ರೇಷ್ಠ ಪ್ರಶಸ್ತಿಯಿಂದ ಪುರಸ್ಕöÈತರಾದರು. ಬಾಂಗ್ಲಾ ನಾಟಕೀಯ ಪತನ ಸವಾಲಿನ ಮೊತ್ತ ಬೆಂಬತ್ತಿ ಹೊರಟ ಬಾಂಗ್ಲಾದೇಶ ತಂಡ ೧೨ ಓವರ್ ಗಳಲ್ಲಿ ೬೩ ರನ್ ಆಗುವುದರೊಳಗೆ ೬ ವಿಕೆಟ್ ಗಳನ್ನು ಕಳೆದುಕೊಂಡಿತ್ತು. ಪರ್ವೇಝ್(೦), ತೌಹಿದ್ ಹೃದೊಯ್(೫), ಮೆಹದಿ ಹಸನ್(೧೧), ನೂರುಲ್ ಹಸನ್(೧೯) ಹೀಗೆ ಎಲ್ಲರೂ ವಿಫಲರಾದರು.
ಭಾರತದ ವಿರುದ್ಧ ಪಂದ್ಯದಲ್ಲಿ ಅರ್ಧಶತಕ ಗಳಿಸಿದ್ದ ಸೈಫ್ ಹಸನ್ (೧೮) ಅವರು ಸಹ ಮುಗ್ಗರಿಸಿದರು. ಶಮೀಮ್ ಹುಸೇನ್ ಅವರು ೨೫ ಎಶೆತಗಳಲ್ಲಿ ೩೦ ರನ್ ಹೊಡೆಯದೇ ಹೋಗಿರುತ್ತಿದ್ದರೆ ಬಾಂಗ್ಲಾ ಪರಿಸ್ಥಿತಿ ಮತ್ತಷ್ಟು ಕೆಟ್ಟದಾಗಿರುತ್ತಿತ್ತು. ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ
ಪಾಕಿಸ್ತಾನ ತಂಡ ಬಾಂಗ್ಲಾದೇಶದ ಸಂಘಟಿತ ದಾಳಿಗೆ ಅಕ್ಷರಶಃ ಪರದಾಡಿತು. ಫರ್ಹಾನ್ ಸಯೀಮ್(೪), ಅಯೂಬ್(೦) ವಿಕೆಟ್ ೫ ರನ್ ಆಗುವುದರೊಳಗೆ ಉರುಳಿತ್ತು.
ಇದರಿಂದ ಒತ್ತಡಕ್ಕೆ ಸಿಲುಕಿದ ಪಾಕಿಸ್ತಾನದ ರನ್ ಧಾರಣೆ ಕುಸಿಯಿತು. ೧೧ನೇ ಓವರ್ ನಲ್ಲಿ ೪೯ ರನ್ ಆಗುವಷ್ಟರಲ್ಲೇ ತಂಡದ ೫ ಪ್ರಮುಖ ವಿಕೆಟ್ ಗಳು ಪತನಗೊಂಡಿದ್ದವು. ಈ ಹಂತದಲ್ಲಿ ಮೊಹಮ್ಮದ್ ಹ್ಯಾರಿಸ್(೩೧) ಶಾಹಿನ್ ಶಾ ಅಫ್ರಿದಿ(೧೯), ಮೊಹಮ್ಮದ್ ನವಾಝ್(೨೫) ಕೊಂಚ ಪ್ರತಿರೋಧ ತೋರಿದ್ದರಿಂದ ಪಾಕಿಸ್ತಾನ ತಂಡ ಗೌರವಯುತ ಮೊತ್ತ ತಲುಪುವಂತಾಯಿತು. ಬಾಂಗ್ಲಾ ಪರ ಟಸ್ಕಿನ್ ಅಹ್ಮದ್ ೩ ವಿಕೆಟ್ ಕಬಳಿಸಿದರು. ಮಹೆದಿ
ಹಸನ್ ಮತ್ತು ರಿಶಾದ್ ಹುಸೈನ್ ತಲಾ ೨ ವಿಕೆಟ್ ಉರುಳಿಸಿದರು.