ಬೆಂಗಳೂರು: ಕಾಳಿದಾಸ ಆರೋಗ್ಯ ಮತ್ತು ಶಿಕ್ಷಣ ಟ್ರಸ್ಟ್ “ಪ್ರೇರಣಾ ಸಮಾರಂಭ”ವನ್ನು 29ನೇ ಜನವರಿ 2023 ರಂದು ದೇವರಾಜ್ ಅರಸ್ ಭವನ ಸಭಾಂಗಣದಲ್ಲಿ ಆಯೋಜಿಸಿತ್ತು, ಮುಖ್ಯವಾಗಿ ಹಿಂದುಳಿದ ವರ್ಗಗಳ ಕುರುಬ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸನ್ಮಾನ ಮತ್ತು ವಿದ್ಯಾರ್ಥಿವೇತನ ವಿತರಣೆ.
ಕನಕ “ಗುರುಪೀಠ ಸ್ವಾಮೀಜಿಗಳಾದ ಶ್ರೀ ಶ್ರೀ ಶ್ರೀ ಸಿದ್ದರಾಮಾನಂದಪುರಿ ಸ್ವಾಮೀಜಿಗಳ ಪುಣ್ಯ ಸಾನ್ನಿಧ್ಯ, ಸನ್ಮಾನ್ಯ ಪೌರಾಡಳಿತ ಹಾಗೂ ಸಣ್ಣ ಕೈಗಾರಿಕೆ ಸಚಿವರಾದ ಕರ್ನಾಟಕ ಸರ್ಕಾರ ಎಂ.ಟಿ.ಬಿ.ನಾಗರಾಜ್ ಅವರಿಂದ ಉದ್ಘಾಟನೆ ನಿರ್ವಹಿಸಿದ್ದರು.
ಶ್ರೀ.ಎಂ.ಲಕ್ಷ್ಮಣ್ ನಿವೃತ್ತ ಐ.ಪಿ.ಎಸ್, ಶ್ರೀ.ಎಂ.ರಾಮಯ್ಯ ಮಾಜಿ ನಿರ್ದೇಶಕರು ಹಿಂದುಳಿದ ಕಲ್ಯಾಣ ಇಲಾಖೆ, ಶ್ರೀ.ಲಿಂಗಪ್ಪ ಮಾಜಿ ಅಧ್ಯಕ್ಷರು, ಕುರುಬ ಸಂಘ, ಶ್ರೀ.ಡಾ.ನಾಗರಾಜು ಸುವರ್ಣ ಮುಖಿ ಧಾಮ, ಶ್ರೀ.ವಿ. ಅಂಜನಪ್ಪ ನಿರ್ದೇಶಕರು ಕುರುಬ ಸಂಘ ಬೆಂಗಳೂರು, ಶ್ರೀ.ಚನ್ನಕೇಶವ ಆಶಾ ಟೌನ್‍ಶಿಪ್ ಮತ್ತು ಸಮಾಜ ಸೇವಕರ, ಶ್ರೀ ರಮೇಶ್ ಸಾಸನೂರ್ ಸಿ.ಇ.ಒ ಗ್ಲೋಬಲ್ ಹೆಡ್ ಕಾಪೆರ್ರೇಷನ್ ಸಾಮಾಜಿಕ ಜವಾಬ್ದಾರಿಗಳು, ಶ್ರೀ.ಪಿ.ಎನ್.ರವೀಂದ್ರ ಐ.ಪಿ.ಎಸ್ ವಿಶೇಷ ಆಯುಕ್ತ ಬಿ.ಬಿ.ಎಂ.ಪಿ, ಶ್ರೀ.ಕೆ.ವಿ ದಯಾನಂದ ಹಿಂದುಳಿದ ಜಾತಿಗಳ ಇಲಾಖೆ ಆಯುಕ್ತ ಡಾ.ಎಸ್ .ಭೀಮಾಶಂಕರ. ಗುಳೇದ ಐಪಿಎಸ್, ಡಿಸಿಪಿ ಬೆಂಗಳೂರು ಪೂರ್ವ ವಿಭಾಗ, ಶ್ರೀ ಚಂದ್ರಶೇಖರ್ .ಜಿ. ಹೆಚ್ಚುವರಿ ಕಾರ್ಯದರ್ಶಿ ಶಿಕ್ಷಣ ಇಲಾಖೆ, ಶ್ರೀ ರೇವಣ್ಣಪ್ಪ ಕೆ.ಎಸ್., ಸಿ.ಇ.ಒ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಶ್ರೀ ರವಿ, ವ್ಯವಸ್ಥಾಪಕ ನಿರ್ದೇಶಕ ದೇವರಾಜ್ ನಿಗಮ್ ಮುಖ್ಯ ಅತಿಥಿಗಳಾಗಿದ್ದರು.
ಇದೇ ಸಂದರ್ಭದಲ್ಲಿ ಖ್ಯಾತ ಹೃದಯ ತಜ್ಞ ಡಾ.ಎಚ್.ವಿ.ವೆಂಕಟೇಶ್ ಅವರಿಗೆ ಕನಕ ವೈದ್ಯ ವಿಭೂಷಣ ಪ್ರಶಸ್ತಿ, ಡಾ.ಜಯಮ್ಮ ಪ್ರಸೂತಿ ತಜ್ಞ ಗುಟ್ಟಹಳ್ಳಿ ಅಂಜನಪ್ಪ ಟ್ರಸ್ಟ್‍ಗೆ ಅಹಿಲ್ಯಾ ವೈದ್ಯ ರತ್ನ ಪ್ರಶಸ್ತಿ, ಡಾ.ಸಯಾಜಿರಾವ್ ಶಿವಾಜಿ ಸರ್ಗಾರ ಖ್ಯಾತ, ಹೃದಯ ತಜ್ಞರು ಮಹಾರಾಷ್ಟ್ರ ಇವರಿಗೇ ಕನಕ ವೈದ್ಯಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.
Leave a Review