This is the title of the web page
This is the title of the web page

ನಾಯಕರ ಪ್ರಭಾವ ಶಾ ಭೇಟಿಯಿಂದ ಕಿತ್ತೂರು ಕರ್ನಾಟಕದಲ್ಲಿ ಸಂಚಲನ: ಸಿಎಂ ಬೊಮ್ಮಾಯಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ 63ನೇ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬೊಮ್ಮಾಯಿಯವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದರು.

ಹುಬ್ಬಳ್ಳಿ: ರಾಷ್ಟ್ರೀಯ ನಾಯಕರ ಪ್ರಭಾವ ಕರ್ನಾಟಕದ ರಾಜಕಾರಣದಲ್ಲಿ ಆಗುತ್ತಿದೆ. ಬಿಜೆಪಿ ಪಕ್ಷ ಅದರ ಬಳಕೆ ಮಾಡಿಕೊಳ್ಳುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.ಹುಬ್ಬಳ್ಳಿಯಲ್ಲಿಂದು ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಇಂದು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದು, ಕಿತ್ತೂರು ಕರ್ನಾಟಕದಲ್ಲಿ ಒಂದು ರೀತಿಯ ಸಂಚಲನವಾಗುತ್ತಿದೆ ಎಂದಿದ್ದಾರೆ.

ಎಫ್. ಎಸ್.ಎಲ್ ಲ್ಯಾಬ್ ಅಡಿಗಲ್ಲು, ಕೆ.ಎಲ್.ಇ ಸೊಸೈಟಿ ಬಿವಿಬಿ ಕಾಲೇಜಿನ 75ನೇ ವಾರ್ಷಿಕೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದು, ಧಾರವಾಡ ಜಿಲ್ಲೆಯ ಬೂತ್ ಮಟ್ಟದ ವಿಜಯ ಸಂಕಲ್ಪ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಎಂ.ಕೆ ಹೋಬಳಿಯಲ್ಲಿ ಬೃಹತ್ ಸಾರ್ವಜನಿಕ ಸಭೆ ನಡೆಯಲಿದೆ. ಮಂಡಲದ ಮೇಲೆ ಇರುವ ಪದಾಧಿಕಾರಿಗಳ ಜೊತೆ ಚರ್ಚೆ ಮಾಡಲಿದ್ದಾರೆ ಎಂದರು.

ಕರ್ನಾಟಕದಲ್ಲಿ ರಾಷ್ಟ್ರೀಯ ನಾಯಕರ ಪ್ರಭಾವಕಿತ್ತೂರು ಕರ್ನಾಟಕ ಭಾಜಪದ ಭದ್ರಕೋಟೆ. ಅಮಿತ್ ಷಾ ಅವರು ಸಮಗ್ರ ಕರ್ನಾಟಕಕ್ಕೆ ಭೇಟಿ ನೀಡುತ್ತಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮಂಡ್ಯಕ್ಕೆ ಬಂದು ಹೋಗಿದ್ದರು, ಈಗ ಕಿತ್ತೂರು ಕರ್ನಾಟಕ , ಮುಂದಿನ ತಿಂಗಳು ಹೈದರಾಬಾದ್ ಕರ್ನಾಟಕ ಕ್ಕೆ ಭೇಟಿ ನೀಡಲಿದ್ದಾರೆ ಎಂದರು.

ನಮ್ಮ ಪಕ್ಷ, ಪಕ್ಷದ ಸಂಘಟನೆ ನಿರಂತರವಾಗಿ ನಡೆಯಲಿದೆ. ಕೇಂದ್ರ ಹಾಗೂ ರಾಜ್ಯದ ಯೋಜನೆಗಳ ಪ್ರಗತಿ ಉದ್ಘಾಟನೆ, ಶಿಲಾನ್ಯಾಸ ಕಾರ್ಯಕ್ರಮಗಳು ನಡೆಯುತ್ತಿವೆ. ರಾಷ್ಟ್ರೀಯ ನಾಯಕರ ಪ್ರಭಾವ ಕರ್ನಾಟಕದ ರಾಜಕಾರಣದಲ್ಲಿ ಆಗುತ್ತಿದೆ. ಪಕ್ಷ ಅದರ ಬಳಕೆ ಮಾಡುತ್ತಿದೆ ಎಂದರು.

ಪಕ್ಷದಲ್ಲಿ ಯಾವ ಭಿನ್ನಮತವೂ ಇಲ್ಲ. ಅಂಥದ್ದು ಎಲ್ಲಿಯೂ ಅಭಿವ್ಯಕ್ತವಾಗಿಲ್ಲ. ಪಕ್ಷದ ಬೆಳವಣಿಗೆ ಮುಖ್ಯ. ಎಲ್ಲರೂ ಅದಕ್ಕೇ ಶ್ರಮಿಸಬೇಕು. ಬೆಳಗಾವಿ, ಧಾರವಾಡ, ಕಿತ್ತೂರು ಕರ್ನಾಟಕ, ಹೈದರಾಬಾದ್ ಕರ್ನಾಟಕ, ದಕ್ಷಿಣ ಕರ್ನಾಟಕಕ್ಕೆ ಒಂದು ಗುರಿಯಿದೆ. ಗುರಿ ಸಾಧನೆಗಾಗಿ ಈ ಸಂಘಟನೆ ಮಾಡುತ್ತಿದ್ದೇವೆ ಎಂದರು. ಡಿ.ಕೆ.ಶಿವಕುಮಾರ್ ಅವರಿಗೆ ಬಿಜೆಪಿ ಸಿಂಹಸ್ವಪ್ನವಾಗಿದೆ. ಹೀಗಾಗಿ ಕನಸಿನಲ್ಲೂ ಬಿಜೆಪಿ ಕಾಣುತ್ತಾರೆ ಎಂದರು.

ತಮ್ಮ ಹುಟ್ಟುಹಬ್ಬ ವಿಶೇಷವೇನಲ್ಲಾ. ಜನ ಬರುತ್ತಾರೆ. ಪ್ರತಿನಿತ್ಯ ಮಾಡುವಂತೆಯೇ ಕೆಲಸ ಮಾಡುತ್ತೇವೆ ಎಂದು ಮುಖ್ಯ ಮಂತ್ರಿಗಳು ತಿಳಿಸಿದರು.