ಬೆಂಗಳೂರು: ಸಂಚಾರ ನಿಯಮ ಉಲ್ಲಂಘನಾ ಪ್ರಕರಣಗಳಿಗೆ ಸಂಬಂಧಪಟ್ಟ ಹಾಗೆ ಆಟೋಮೆಟಿಶನ್ ಸೆಂಟರ್ ವಿಭಾಗದಿಂದ ಸಂಚಾರ ನಿಯಮ ಉಲ್ಲಂಘನೆ ಮಾಡುವ ವಾಹನಗಳ ಮಾಲೀಕರಿಗೆ ನೋಟಿಸ್ ಗಳನ್ನು ಈ ಹಿಂದೆ ಮುದ್ರಿಸಿ ಕಳಿಸಲಾಗಿರುತ್ತಿತ್ತು,
ಆದರೆ ಇಂದಿನಿಂದ ಸಂಚಾರ ಉಲ್ಲಂಘನೆ ಮಾಡುವ ಮಾಲೀಕರಿಗೆ ಕ್ಯೂ ಆರ್ ಕೊಡನ್ನು ಸಹ ಮುದ್ರಿಸಿ ಕಳಿಸಲು ಕ್ರಮ ಕೈಗೊಂಡಿರುತ್ತದೆ.
ಈ ಕ್ಯೂಆರ್ ಕೋಡ್ ನ ಮುಖಾಂತರ ಸಂಚಾರ ಉಲ್ಲಂಘನೆಯ ಸ್ಥಳ, ದಿನಾಂಕ, ಸಮಯ ಮತ್ತು ದಂಡದ ಮೊತ್ತದ ವಿವರಗಳ ಜೊತೆಗೆ ಬಹು ಮುಖ್ಯವಾಗಿ ಉಲ್ಲಂಘನೆಯ ಸಾಕ್ಷಾಧಾರಿತ ಛಾಯಾಚಿತ್ರವನ್ನು ಸಹ ವೀಕ್ಷಿಸಬಹುದಾಗಿರುತ್ತದೆ.
ಉಲ್ಲಂಘನೆಯ ದಂಡದ ಮೊತ್ತವನ್ನು ಆನ್ಲೈನ್ ನಲ್ಲಿ ಸಹ ಪಾವತಿಸಬಹುದಾಗಿರುತ್ತದೆ. ಜಂಟಿ ಪೊಲೀಸ್ ಆಯುಕ್ತ ಸಂಚಾರಿ ವಿಭಾಗದ ಅನುಚೆತ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.