ದೇವನಹಳ್ಳಿ : ತಾಲೂಕಿನ ಇನ್ನೊವೇಟರ್ಸ್ ಇಂಟರ್ ನ್ಯಾಷನಲ್ ಶಾಲೆಯು “ಯಂಗ್ ಇನೋವೇಟರ್ಸ್ ಫಿಯೆಸ್ಟಾ- 2” ವಾರ್ಷಿಕ ಹಬ್ಬವನ್ನು ಫೆಬ್ರವರಿ 23, ಶುಕ್ರವಾರದಂದು ಸಂಜೆ 5.30ಕ್ಕೆ ದೇವನಹಳ್ಳಿಯ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದು ಆಸಕ್ತ ವಿದ್ಯಾರ್ಥಿಗಳು, ಪೋಷಕರು, ಆಗಮಿಸಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಗೊಳಿಸಬೇಕೆಂದು ಶಾಲೆಯ ಕನ್ನಡ ಶಿಕ್ಷಕಿ ಮಾಲಿನಿ ಹೇಳಿದರು.
ದೇವನಹಳ್ಳಿ ಪಟ್ಟಣದಲ್ಲಿರುವ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಇನ್ನೋವೇಟರ್ಸ್ ಇಂಟರ್ನ್ಯಾಷನಲ್ ಶಾಲೆಯ ಪ್ರಾಂಶುಪಾಲರು ಮತ್ತು ಶಿಕ್ಷಕಿಯರ ವತಿಯಿಂದ ಶಾಲೆಯ” ದ್ವಿತೀಯ ವಾರ್ಷಿಕೋತ್ಸವ – “ಯಂಗ್ ಇನೋವೇಟರ್ಸ್ ಫಿಯೆಸ್ಟಾ- 2”ದ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಇನ್ನೊವೇಟರ್ಸ್ ಇಂಟರ್ ನ್ಯಾಷನಲ್ ಶಾಲೆಯ ಸಂಸ್ಥಾಪಕರಾದ ಶಶಿಕಲಾ ಅಶೋಕ್ ಮತ್ತು ಶ ಕೆ.ಬಿ ಅಶೋಕ್, ರಂಜಿತ ಮತ್ತು ಸಿದ್ದಪ್ಪಾಜಿ ಆಗಮಿಸುತ್ತಿದ್ದು, ಪ್ರಖ್ಯಾತ ಜಾದೂಗಾರ ರಾದ ಮ್ಯಾಜಿಕ್ ರಾಜನ್ ತಮ್ಮ ಅಂತಾರಾಷ್ಟ್ರೀಯ ಖ್ಯಾತಿಯ ಮ್ಯಾಜಿಕ್ ಮೂಲಕ ರಂಜಿಸಲಿದ್ದಾರೆ ಎಂದು ತಿಳಿಸಿದರು.
ಶಾಲೆಯ ಪ್ರಾಂಶುಪಾಲರಾದ ರಬಿತಾಲ್ ಸುಕನ್ಯಾ ಮಾತನಾಡಿ ನಮ್ಮ ಶಾಲೆಯ ಪ್ರಸ್ತುತ ವರ್ಷದ ವರದಿಗಳಲ್ಲದೆ ಮುಂದಿನ ಶೈಕ್ಷಣಿಕ ಬೆಳವಣಿಗೆಯ ಕಾರ್ಯತಂತ್ರವನ್ನು ನಿಮ್ಮ ಮುಂದಿಡಲಾಗುತ್ತದೆ. ಈ ಕಾರ್ಯಕ್ರಮವು ನೃತ್ಯ ಸಂಗೀತ ಹಾಗೂ ಹಲವಾರು ಮನೋರಂಜನಾ ಕಾರ್ಯಕ್ರಮಗಳನ್ನು ಒಳಗೊಂಡಿದ್ದು ಇದು ನಮ್ಮ ವಿದ್ಯಾರ್ಥಿಗಳ ರಚನಾತ್ಮಕ ಶೈಕ್ಷಣಿಕ ಕಲಿಕೆಗೆ ಸಾಕ್ಷಿಯಾಗಿರುತ್ತದೆ ಎಂದರು.
ಇನ್ನೊವೇಟರ್ಸ್ ಇಂಟರ್ ನ್ಯಾಷನಲ್ ಶಾಲೆಯು, ಪ್ರಗತಿಶೀಲ ಪಠ್ಯಕ್ರಮ,21ನೇ ಶತಮಾನದ ಕೌಶಲ್ಯಗಳ ಅಭಿವೃದ್ಧಿ ಮತ್ತು ಅತ್ಯುತ್ತಮ ಕಲಿಕಾ ವಾತಾವರಣ ನೀಡುವ ಮೂಲಕ ವಿದ್ಯಾರ್ಥಿಗಳಲ್ಲಿ ನವೀನತೆ, ಸೃಜನಶೀಲತೆ ಮತ್ತು ಜಾಗತಿಕ ಪಾಂಡಿತ್ಯವನ್ನು ಪೋಷಣೆ ಮಾಡುತ್ತದೆ ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಇನ್ನೋವೇಟರ್ಸ್ ಶಾಲೆಯ ಗಣಿತ ಶಿಕ್ಷಕಿ ಕಾವ್ಯ, ಇಂಗ್ಲಿಷ್ ಶಿಕ್ಷಕಿಯರಾದ ಚಾಮುಂಡೇಶ್ವರಿ ಸ್ವಾತಿ ಮತ್ತಿತರರು ಇದ್ದರು.