ಮಳವಳ್ಳಿ: ಬಿಬಿಎಂಪಿ ಸಹಾಯ ಯೋಜನಾಧಿಕಾರಿಯಾಗಿರುವ ಮಂಜೇಶ್ ಅವರ ಸಂಬಂಧಿಕರು ಎನ್ನಲಾದವರ ಮನೆ ಮೇಲೆ ಮಳವಳ್ಳಿ ತಾಲೂಕಿನ ಗ್ರಾಮಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಖಲೆ ಪತ್ರ ಪರಿಶೀಲನೆ ನಡೆಸಿದ್ದಾರೆ.
ಮಳವಳ್ಳಿ ತಾಲೂಕಿನ ಹಲಗೂರು ಹಾಗು ಅಗಸನಪುರ ನಂಜನಪುರ ಗ್ರಾಮಗಳಲ್ಲಿ ಮಂಜೇಶ್ರವರ ಅಕ್ಕನ ಮಗನಾದ ಗ್ರಾ.ಪಂ ಸದಸ್ಯ ಸುರೇಂದ್ರ ಎಂಬವರ ಮನೆ ಮೇಲೆ ಹಾಗೂ ಅಗಸನಪುರ ಗ್ರಾಮ ನಂಜನಪುರ ಗ್ರಾಮದ ಸಂಬಂಧಿಕರ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.