ಚಿಕ್ಕಬಳ್ಳಾಪುರ: 2024ರ ಲೋಕಸಭಾ ಚುನಾವಣೆಯ ಮತದಾನದ ದಿನವಾದ ಇಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಾಮಾನ್ಯ ಚುನಾವಣಾ ವೀಕ್ಷಕರಾದ ನ್ಯಾಲಿ ಎಟೆ ಅವರು ಚಿಕ್ಕಬಳ್ಳಾಪುರ ತಾಲೂಕಿನ ಜಡಲತಿಮ್ಮನ ಹಳ್ಳಿಯ ಮಹಿಳಾ ಸಖಿ ಮತಗಟ್ಟೆ, ಕುಪ್ಪಳ್ಳಿ ಯ ವಿಶೇಷ ಮತಗಟ್ಟೆ ಕೇಂದ್ರಗಳಿಗೆ ಮುಂಜಾನೆಯೇ ಭೇಟಿ ನೀಡಿ ಅಲ್ಲಿನ ಮತದಾನ ಪೂರ್ವ ಸಿದ್ಧತೆಗಳನ್ನು ಪರಿಶೀಲನೆ ಮಾಡಿದರು.
ನಂತರ ಚಿಕ್ಕಬಳ್ಳಾಪುರ ನಗರದ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಕಚೇರಿಯಲ್ಲಿ ತೆರೆದಿರುವ ವಿಶೇಷ ಚೇತನ ಸ್ನೇಹಿ ಮತಗಟ್ಟೆಗೆ ಭೇಟಿ ನೀಡಿ ಅಲ್ಲಿನ ಅಣಕು ಮತದಾನ(ಮಾಕ್ ಪೋಲಿಂಗ್ ) ಪ್ರಕ್ರಿಯೆಯನ್ನು ಪರಿಶೀಲಿಸಿರು. ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಕಾಶ್ ಜೆ ಟಿ ನಿಟ್ಟಾಲಿ, ಚಿಕ್ಕಬಳ್ಳಾಪುರ ಕಾರ್ಯನಿರ್ವಾಹಣಾಧಿಕಾರಿ ಸಂದೀಪ್,ಪೌರಾಯುಕ್ತ ಮಂಜುನಾಥ್ ಸೇರಿದಂತೆ ಚುನಾವಣೆಯ ಕರ್ತವ್ಯಕ್ಕೆ ನಿಯೋಜನೆ ಆಗಿರುವ ಅಧಿಕಾರಿಗಳು, ಸಿಬ್ಬಂದಿ ಇದ್ದರು.