ಹನೂರು: ಪಟ್ಟಣಕ್ಕೆ ಕಾವೇರಿ ಕುಡಿಯುವ ನೀರು ಪೂರೈಕೆ ಮಾಡುವ ಸಿದ್ದಯ್ಯನಪುರ ಪಂಪ್ ಹೌಸ್ ನಲ್ಲಿ ಮೋಟರ್ ದುರಸ್ತಿಗೊಂಡಿರುವುದರಿಂದ ಒಂದು ವಾರಗಳ ಕಾಲ ಕಾವೇರಿ ಕುಡಿಯುವ ನೀರಿನಲ್ಲಿ ವ್ಯತ್ಯಯವಾಗಲಿದ್ದು ಸಾರ್ವಜನಿಕರು ಸಹಕರಿಸಬೇಕೆಂದು ಮುಖ್ಯಾಧಿಕಾರಿ ಮಹೇಶ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೊಳ್ಳೇಗಾಲ ತಾಲ್ಲೂಕಿನ ಹರಳೆ ಗ್ರಾಮದ ಪಂಪ ಹೌಸ್ ನಿಂದ ಹನೂರು ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಸಿದ್ದಯ್ಯನಪುರ ಜಾಕ್ ವೆಲ್ನಲ್ಲಿ ಮೋಟಾರ್ ದುರಸ್ತಿಗೊಂಡಿರುವುದರಿಂದ ಒಂದು ವಾರಗಳ ಕಾಲ ಪಟ್ಟಣಕ್ಕೆ ಕಾವೇರಿ ನೀರಿನ ವ್ಯತ್ಯಯವಾಗಲಿದ್ದು ಸಾರ್ವಜನಿಕರಿಗೆ ಕೊಳವೆ ಬಾವಿಗಳ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುವುದು. ಆದ್ದರಿಂದ ಪಟ್ಟಣದ ನಾಗರಿಕರು ಸಹಕರಿಸಬೇಕು ಎಂದು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.