ಬೆಂಗಳೂರು: ಸರ್ವೋಚ್ಚ ನ್ಯಾಯಾಲಯದ ಆದೇಶದ ಮೇರೆಗೆ ಬೆಂಗಳೂರಿನ 48 ಸಂಚಾರ ಪೊಲೀಸ್ ಠಾಣ ವ್ಯಾಪ್ತಿಯಲ್ಲಿರುವ ಶಾಲೆಗಳಿಗೆ ಕರೆದೊಯ್ಯುವ ಮಕ್ಕಳ ವಾಹನಗಳನ್ನು ನಿನ್ನೆ ತೀವ್ರ ತಪಾಸಣೆ ನಡೆಸಿದಾಗ 708 ವಾಹನಗಳು ಕಾನೂನನ್ನು ಉಲ್ಲಂಘಿಸಿರುವುದರಿಂದ ಈ ವಾಹನಗಳ ಚಾಲಕರ ಮತ್ತು ಕಾನೂನು ಕ್ರಮ ಕೈಗೊಳ್ಳಲಾಗಿದೆ.
1400 ವಾಹನಗಳನ್ನು ತಪಾಸಣೆ ನಡೆಸಿದಾಗ ನಿಗದಿತ ಸಂಖ್ಯೆಗಿಂತ ಅತಿ ಹೆಚ್ಚು ಮಕ್ಕಳನ್ನು ಕರೆದೊಯುತ್ತಿದ್ದ 708 ವಾಹನಗಳ ಕಾನೂನು ಉಲ್ಲಂಘನೆ ಆಗಿರೋದು ಕಂಡು ಬಂದಿರುತ್ತದೆ.
708 ವಾಹನಗಳಲ್ಲಿ ಓಮಿನಿ 134 ಆಟೋರಿಕ್ಷಾ 97 ವ್ಯಾನ್ 21 ಹಾಗೂ ಇತರೆ 29 ಗಾಡಿಗಳ ವಿರುದ್ಧ 1989 ಕಾಯ್ದೆ 25/8 ರೆಡ್ ವಿತ್ 177 ಮೋಟರ್ ಕಾಯ್ದೆ ಅಡಿ ದೂರನ್ನು ದಾಖಲು ಮಾಡಿರುತ್ತಾರೆ.