ಬೇಲೂರು: ವಿಶ್ವ ವಿಖ್ಯಾತ ಮತ್ತು ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆಯಾಗಿ ಜಾಗತಿಕ ಮನ್ನಣೆ ದೊರೆತ ಬೇಲೂರು ಪಟ್ಟಣದ ಹೃದಯ ಭಾಗದಲ್ಲಿನ ಬಸವೇಶ್ವರ ವೃತ್ತದಲ್ಲಿ ಶೀಘ್ರವೇ ಸರ್ವರ ಅಭಿಪ್ರಾಯ ಮತ್ತು ಸಹಕಾರವನ್ನು ಪಡೆದು ವಿಶ್ವ ಗುರು ಬಸವಣ್ಣನವರ ನಿಂತಿರುವ ಪ್ರತಿಮೆಯನ್ನು ಸ್ಥಾಪಲಾಗುತ್ತದೆ ಎಂದು ಮಾಜಿ ಶಾಸಕ ಕೆ.ಎಸ್.ಲಿಂಗೇಶ್ ಹೇಳಿದರು.
ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆದ ಅಖಿಲ ಭಾರತ ವೀರಶೈವ -ಲಿಂಗಾಯಿತ ಮಹಾಸಭಾ ಘಟಕದಿಂದ ಕರೆಯಲಾದ ಸಭೆಯಲ್ಲಿ ಮಾತನಾಡಿದ ಅವರು ಸದ್ಯ ಪುರಸಭೆ ವತಿಯಿಂದ ಬಸವೇಶ್ವರ ಪುತ್ಥಳಿ ಸ್ಥಾಪನೆಗೆ ಎಂದೇ ಕಲ್ಲಿನ ಅಡಿಪಾಯ ಹಾಕಿದೆ. ಆದರೆ ಬಸವಣ್ಣವರ ವಿಗ್ರಹ ಬಹಳ ಚಿಕ್ಕದಾಗಿ ಕಾಣುವ ಹಿನ್ನಲೆಯಲ್ಲಿ ಪುರಸಭಾ ಮಾಜಿ ಅಧ್ಯಕ್ಷ ಎಂ.ಆರ್.ವೆಂಕಟೇಶ್ ಇನ್ನಿತರ ಸಹಕಾರ ಪಡೆದು ಅತಿ ಶೀಘ್ರವೇ ನಿಂತಿರುವ ಬಸವಣ್ಣನ ಪ್ರತಿಮೆಯನ್ನು ಸ್ಥಾಪಿಸಲಾಗುತ್ತದೆ ಇದರ ಜವಾಬ್ದಾರಿಯನ್ನು ಅಖಿಲ ಭಾರತ ವೀರಶೈವ ಮಹಾಸಭಾ ಹೊರಬೇಕಿದೆ.
ಇದಕ್ಕೂ ಮೊದಲು ಬೇಲೂರಿನ ಹಾಲಿ ಶಾಸಕರ ಅಧ್ಯಕ್ಷತೆಯಲ್ಲಿ ವಿವಿಧ ವರ್ಗ ಮತ್ತು ಪಕ್ಷಾತೀತವಾಗಿ ಸಭೆ ನಡೆಸಬೇಕು ಎಂದು ತಿಳಿಸಿದರು.ಕಾಂಗ್ರೆಸ್ ಮುಖಂಡ ಗ್ರಾನೈಟ್ ರಾಜಶೇಖರ್ ಮಾತನಾಡಿ ಬೇಲೂರು ತಾಲ್ಲೂಕಿನಲ್ಲಿ 50 ಸಾವಿರ ವೀರಶೈವ ಲಿಂಗಾಯಿತರು ಇದ್ದಾರೆ.
ಕನಿಷ್ಟ ಪಕ್ಷ ಎಂ.ಆರ್.ವೆಂಕಟೇಶ್ ರವರು ಸಮುದಾಯಕ್ಕೆ ತಿಳಿಸಿ ಕೆಲಸ ಮಾಡಬೇಕಿತ್ತು. ಆದರೆ ರಾತ್ರೋರಾತ್ರಿ ಬಸವಣ್ಣನವರ ಪ್ರತಿಮೆಗೆ ಅಡಿಪಾಯ ಹಾಕುವ ಅಗತ್ಯ ಇರಲಿಲ್ಲ, ಮಾಜಿ ಶಾಸಕರಾದ ಕೆ.ಎಸ್.ಲಿಂಗೇಶ್ ರವರು ಹೇಳಿದಂತೆ ನಮ್ಮ ದೃಷ್ಟಿ ಆಶ್ವರೂಡ ಬಸಣ್ಣನವ ಪ್ರತಿಮೆ ಸ್ಥಾಪನೆ, ಆದರೆ ಸದ್ಯಕ್ಕೆ ನಿಂತಿರುವ ಬಸಣ್ಣನವರ ಪ್ರತಿಮೆಯನ್ನು ಒಂದು ತಿಂಗಳಲ್ಲಿ ಸ್ಥಾಪಿಸಿ ಉದ್ಘಾಟನೆ ನಡೆಸಬೇಕು ಎಂದರು.
ತಾಲ್ಲೂಕು ವೀರಶೈವ ಮಹಾಸಭಾ ಘಟಕದ ಅಧ್ಯಕ್ಷ ಬಲ್ಲೇನಹಳ್ಳಿ ರವಿಕುಮಾರ್ ಮಾತನಾಡಿ, ಈ ಸಂಬಂಧ ಸ್ಥಳೀಯ ಶಾಸಕರು ಮತ್ತು ಪುರಸಭೆ ಅಧ್ಯಕ್ಷರಿಗೆ ಹಾಗೂ ಎಂ.ಆರ್.ವೆಂಕಟೇಶ್ ಅವರಿಗೆ ತಿಳಿಸಲಾಗಿದೆ. ಇದೇ ಜನವರಿ 20 ರಂದು ಪುಷ್ಪಗಿರಿ ಜಗದ್ಗುರುಗಳು ಹಾಗೂ ಸ್ಥಳೀಯ ಶಾಸಕರಾದ ಸುರೇಶ್ ಅಧ್ಯಕ್ಷತೆಯಲ್ಲಿ ಸಭೆ ನಡೆಸುವ ಹಿನ್ನಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದರು.
ಈ ಸಂದರ್ಭದಲ್ಲಿ ಹಾಸನ ಜಿಲ್ಲಾ ವೀರಶೈವ ಮಹಾಸಭಾ ಅಧ್ಯಕ್ಷ ಗುರುದೇವ್, ಹಿರಿಯ ವಕೀಲ ಸಿ.ಎಂ.ನಿಂಗರಾಜ್, ಯುವ ಘಟಕದ ಅಧ್ಯಕ್ಷ ಗೆಂಡೇಹಳ್ಳಿ ಚೇತನ್, ಪತ್ರಕರ್ತರ ಸಂಘದ ಅಧ್ಯಕ್ಷ ಹೆಬ್ಬಾಳು ಹಾಲಪ್ಪ, ಕನಾಯ್ಕನಹಳ್ಳಿ ಮಹಾದೇವ್, ಅನ್ನಪೂರ್ಣ, ಅದ್ದೂರಿ ಚೇತನ್ ಕುಮಾರ್, ಚಂದ್ರಶೇಖರ್, ಬಿ.ಎಂ. ದೊಡ್ಡವೀರೇಗೌಡ, ರವಿಕುಮಾರ್, ಯೋಗೀಶ್, ಹೇಮಾವಿರೂಪಾಕ್ಷ, ಜಯಶೀಲ ಜಯಶಂಕರ್, ಪುಟ್ಟಸ್ವಾಮಿ, ಗೀತಾಶಿವರಾಜ್ ಇನ್ನು ಮುಂತಾದವರು ಹಾಜರಿದ್ದರು.