ಬೆಂಗಳೂರು: ವೀರಭದ್ರ ವೆಂಕಟೇಶ್ವರಸ್ವಾಮಿಯ ಪ್ರತಿಷ್ಠಾಪನೆ ಕಾರ್ಯಕ್ರಮ ಶ್ರೀ ಚಂದ್ರಶೇಖರನಾಥ ಹಾಗೂ ಶ್ರೀ ನಂಜಾವಧೂತ ಮಹಾನ್ ಸ್ವಾಮೀಜಿಗಳಆಶೀರ್ವಾದದಡಿಯಲ್ಲಿ ಅದ್ದೂರಿಯಾಗಿ ನೆರವೇರಿತು. ಕಾರ್ಯಕ್ರಮವನ್ನು ಮರೆಯಲಾಗದ ಮಾಣಿಕ್ಯ ಡಾ. ಪುನೀತ್ ರಾಜ್ ಕುಮಾರ್ ರವರ ಧರ್ಮಪತ್ನಿ ಅಶ್ವಿನಿಯವರು ಉದ್ಘಾಟನೆ ಮಾಡಿದರು.
ಸ್ವಾಮಿಯ ಪ್ರತಿಷ್ಠಾಪನೆ ಹಾಗೂ ಮಹಾಮಂಗಳಾರತಿ ಮತ್ತು ಧ್ವಜಸ್ಥಂಭ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾದರೂ ಈ ಸಂದರ್ಭದಲ್ಲಿ ಜಾನಪದ ಕಲೆಗಳಾದ ತಮಟೆವಾದ್ಯ, ವೀರಗಾಸೆ, ಪೂಜೆ ಕುಣಿತ, ಡೊಳ್ಳು ಕುಣಿತ, ಕೀಲುಕುದುರೆ ಕುಣಿತ,ಬೊಂಬೆ ಕುಣಿತ, ಹಾಗೂ ಹೆಸರಾಂತ ಗಾಯಕರಾದ ಮಾನಸಹೊಳ್ಳ, ರವಿಸಂತು ಮುಂತಾದವರಿಂದ ಭಕ್ತಿಗೀತೆ ಹಾಗೂ ಸುಗಮ ಸಂಗೀತದಂತಹ ಕಾರ್ಯಕ್ರಮಗಳು ಅದ್ದೂರಿಯಾಗಿ ಮೂಡಿಬಂದವು.
ಈ ಧಾರ್ಮಿಕ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಚಲನಚಿತ್ರ ನಟ ರಾಘವೇಂದ್ರ ರಾಜ್ ಕುಮಾರ್, ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಅಧ್ಯಕ್ಷ ಶಿವಕುಮಾರ್ ನಾಗರ ನವಿಲೆ ಗಾಯಕಿ ರಮ್ಯ, ಗಾಯಕಿ ರಜನಿ, ಗ್ರಾಮ ಲೆಕ್ಕಾಧಿಕಾರಿ ಯತೀಶ್ ರವರು ಉಪಸ್ಥಿತರಿದ್ದರು.