ಜಾಗತಿಕವಾಗಿ 16ನೇ ಶತಮಾನದಲ್ಲಿ ಫ್ರಾನ್ಸ್ನಲ್ಲಿ ಆರಂಭವಾದ ಮೂರ್ಖರ ದಿನ ಅಥವಾ ಅಪಹಾಸ್ಯ ಮಾಡುವ ದಿನವನ್ನಾಗಿ ಆಚರಿಸಿಕೊಂಡು ಬಂದಿರುತ್ತಾರೆ. ಹಾಸ್ಯ ಜೀವನದ ಅವಿಭಾಜ್ಯ ಅಂಗ ನಗು ಮನುಷ್ಯನ ಜೀವನಕ್ಕೆ ಬಹಳ ಮುಖ್ಯವಾದುದು ಆಗಿದೆ.
ನಗುವೇ ಇರದೇ ಹೋದರೆ ಅಂತಹ ಜನರು ಬದುಕಿದ್ದು ವ್ಯರ್ಥ ಎಂಬುದು ಸತ್ಯ. ಹಾಸ್ಯ ಇರಲೇ ಬೇಕು ಆದರೆ ಬೇರೆಯವರನ್ನು ಅಪಹಾಸ್ಯ ಮಾಡುವುದು ಮೂರ್ಖರನ್ನಾಗಿ ಮಾಡಿ ನಗುವುದು ಸ್ವಾರಸ್ಯವಲ್ಲ. ಕೆಲವೊಮ್ಮೆ ಅಪಹಾಸ್ಯ ಜನರಲ್ಲಿ ದುಃಖ ಕಷ್ಟ ಸಮಸ್ಯೆಗೂ ಕಾರಣಗಾಘಬಹುದು ಅದಕ್ಕೆ ಕನ್ನಡದಲ್ಲಿ ಒಂದು ಗಾದೆ ಇದೆ “ನಗೆ ಹೋಗಿ ಹೊಗೆಯಾಯಿತು” ಅಂತ ಹಾಗೆ ಯಾರ ಜೊತೆಗೇ ಆಗಲಿ ತಿಳಿ ಹಾಸ್ಯ ಉತ್ತಮ ನಗು ನಗುತ್ತಾ ನಗಿಸುತ್ತಾ ಇರುವುದು ಕೂಡ ಉತ್ತಮ.
ಅಪಹಾಸ್ಯ ಮಾಡುವುದು ಕೆಟ್ಟ ಗುಣ ಹಾಗೂ ಪದ್ಧತಿ.ಪ್ರಸ್ತುತ ವಿಶ್ವದಲ್ಲಿ ಏಪ್ರಿಲ್ ತಿಂಗಳಿನಲ್ಲಿ ಏಷಿಯಾ ಖಂಡದಲ್ಲಿ ಮತ್ತು ಇನ್ನೂ ಕೆಲವು ಪ್ರದೇಶಗಳಲ್ಲಿ ವಾತಾವರಣದಲ್ಲಿ ತಾಪಮಾನ ಹೆಚ್ಚಿ ಸನ್ ಸ್ಟ್ರೋಕ್ ಬಿಸಿ ಹವೆಯಿಂದ ಜನರ ಆರೋಗ್ಯದಲ್ಲಿ ಏರುಪೇರು ಆಗುವುದು ಸಾಮಾನ್ಯವಾಗಿದೆ. ಅದರಲ್ಲೂ ಭಾರತದಲ್ಲಿ ಈಗ ಅತೀ ಹೆಚ್ಚು ತಾಪಮಾನದ ದಿನಗಳನ್ನು ಏಪ್ರಿಲ್ ಮೇ ತಿಂಗಳಿನಲ್ಲಿ ಕಾಣುತ್ತೇವೆ. ಹೀಗಾಗಿ ನಾವು ಏಪ್ರಿಲ್ ತಿಂಗಳನ್ನು ಮೇ ತಿಂಗಳನ್ನು ಕೂಲ್ ತಿಂಗಳು ಮಾಡುವ ಪ್ರಯತ್ನವನ್ನು ಮಾಡಬೇಕು.
ಈ ಬಾರಿ ಬೇಸಿಗೆಯಲ್ಲಿ ಬಹಳ ತಂಪಾದ ನಗರವಾದ ಬೆಂಗಳೂರಿನಲ್ಲಿಯೇ ನೀರಿನ ಕೊರತೆ ಸಮಸ್ಯೆ ಕಾಣುತ್ತಿದೆ. ಇಂತಹ ಸಂಪರ್ಭದಲ್ಲಿ ಕೂಲ್ ಆಗಲು ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಎಲ್ಲರರಿಗೂ ಬರುತ್ತದೆ. ಸಮಸ್ಯೆಗಳನ್ನು ಸೃಷ್ಟಿಸಿಕೊಂಡ ನಮಗೇ ಅದರ ಪರಿಹಾರ ಹುಡುಕುವ ಕಲೆ ತಿಳಿದಿರಬೇಕು. ನಾವು ಗಿಡ ಮರಗಳನ್ನು ಕಡಿದು ನಗರವನ್ನು ಮಾಡಿದಾಗ ನೀರಿನ ಗಾಳಿಯ ಮತ್ತು ವಾತಾವರಣದ ಸಮಸ್ಯೆ ಉಂಟಾಗುತ್ತದೆ ಎಂಬ ಮುಂದಾಲೋಚನೆಯನ್ನು ಬಿಟ್ಟ ಕಾರಣ ಸಮಸ್ಯೆಗಳು ಉದ್ಭವಿಸಿವೆ. ಈಗ ವಾತಾವರಣವನ್ನು ತಂಪು ಮಾಡಲು ಗಿಡ ಮರಗಳನ್ನು ಮಳೆಯಾಗುವ ಹಾಗೆ ಮಾಡಲು ಮಾಲಿನ್ಯವನ್ನು ಕಡಿಮೆ ಮಾಡಿದಾಗ ಮಳೆ ಮತ್ತು ತಂಪು ವಾತಾವರಣ ಹಿಂತಿರುಗಿ ಬರುವ ಎಲ್ಲ ಸಾಧ್ಯತೆಯೂ ಇದೆ.
ವ್ಯಂಗ್ಯ ಚಿತ್ರಕಾರರು ಮನುಷ್ಯನ ಬೆನ್ನಿಗೆ ಆಕ್ಸಿಜನ್ ಸಿಲಂಡರ್ ಆಗಲಿ ಯಾವುದೇ ಒಂದು ಸಸ್ಯವನ್ನ ಕಟ್ಟಿಕೊಂಡ ಹಾಗೆ ಚಿತ್ರಣ ಮಾಡಿರುತ್ತಾರೆ, ಇದು ಕೇವಲ ಹಾಸ್ಯವಾಗಿರದೇ ಮುಂದೆ ಭೂಮಿಯಲ್ಲಿ ಉಂಟಾಗಬಹುದಾದ ಪರಿಸ್ಥಿತಿಯ ಚಿತ್ರಣ ಎಂದು ಅರಿತು ಭೂಮಿಯನ್ನು ತಂಪಾಗಿ ಇಡಲು ನೀರಿನ ಮೂಲಗಳು ಬತ್ತದಂತೆ ಕಾಪಾಡಿಕೊಳ್ಳಲು, ನೀರಿನ ಸದುಪಯೋಗ ಮಾಡಿಕೊಳ್ಳಲು, ಭೂಮಿಯಲ್ಲಿ ತಾಪಮಾನ ಹೆಚ್ಚು ಮಾಡಿಸುವ ಅತೀ ವಾಹನ ಸಂಚಾರವನ್ನು ತಪ್ಪಿಸುವ ಎಲ್ಲ ಪ್ರಯತ್ನಗಳು ನಮ್ಮ ಕಡೆಯಿಂದ ಆದಾಗ ಕೇವಲ ಏಪ್ರಿಲ್ ಅಲ್ಲ ಎಲ್ಲ ಸಮಯದಲ್ಲಿ ತಂಪಾದ ವಾತಾವರಣ ಹಾಗ1? ಪ್ರಕೃತಿಯ ಸಂರಕ್ಷಣೆಯನ್ನು ಮಾಡಿಕೊಳ್ಳಬಹುದಾಗಿದೆ.
ಒಬ್ಬರನ್ನು ಹಾಸ್ಯ ಮಾಡಿ ಸಂತೋಷ ಪಡುವ ಬದಲು ಒಬ್ಬರಿಗೆ ತಂಪಾಗುವ ಉಪಾಯವನ್ನು ಹೇಳಿಕೊಟ್ಟು ಸಂತಸ ಪಡೋಣ ಏಕೆಂದರೆ ಹಾಸ್ಯ ಮಾಡಿ ನಗಿಸುವಾಗ ಬರುವ ಆನಂದಕ್ಕಿಂತ ಬಿಸಿಗೆಯ ಬಿಸಿಯ ವಾತಾವರಣದಲ್ಲಿ ತಂಗಾಳಿಯಿಂದ ಬರುವ ತಂಪು ನಗೆ ಸುಂದರ ಮತ್ತು ಸಹಜವಾಗಿಯೇ ಇರುತ್ತದೆ.
-ಮಾಧುರಿ ದೇಶಪಾಂಡೆ, ಬೆಂಗಳೂರು