ಬೆಂಗಳೂರು: ಸಮಸ್ತ ಕರ್ನಾಟಕ ಒಂದು ಎಂಬ ಆಶಯಗಳು ನಮ್ಮೆಲ್ಲರೊಳಗೂ ಬೇರೂರಿದಾಗ ಸುವರ್ಣ ಸಂಭ್ರಮಕ್ಕೆ ವಿಶಾಲ ಅರ್ಥ ಬರಲಿದೆ ಎಂದ ಚಲನಚಿತ್ರ ನಟ, ಸಾಮಾಜಿಕ ಹೋರಾಟಗಾರರು ಆಗಿರುವ ನಾಗವರ್ಧನ್ ಗೌಡ ಅಭಿಪ್ರಾಯಿಸಿದರು.
ಸುಕಾಂಕ್ಷ ಚಾರಿಟಬಲ್ ಟ್ರಸ್ಟ್ ( ರಿ) ಬೆಂಗಳೂರಿನ ಕಡಬಗೆರೆಯ ವೃದ್ಧಾಶ್ರಮದಲ್ಲಿ ಆಯೋಜಿಸಿದ್ದ ಸುವರ್ಣ ಮಹೋತ್ಸವ ಕನ್ನಡ ರಾಜ್ಯೋತ್ಸವದಲ್ಲಿ ದ್ವಜಾರೋಹಣ ನೆರವೇರಿಸಿ ಮಾತನಾಡಿದರು.ಕೇವಲ ನವೆಂಬರ್ ನಲ್ಲಿ ರಾಜ್ಯೋತ್ಸವವನ್ನು ನೆಪ ಮಾಡಿಕೊಂಡು ಕನ್ನಡ ತೇರು ಎಳೆಯುವ ಬದಲು ಮನೆ ಮನಗಳಲ್ಲಿ ಕನ್ನಡ ಉಸಿರಾಗ ಬೇಕು ಎಂದು ಸಮಾರಂಭದ ವಿಶೇಷ ಅತಿಥಿ ಶ್ರೀಮತಿ ಭಾಗ್ಯ ನಾಗಣ್ಣ ಅಭಿಪ್ರಾಯಿಸಿದರು,
ಆಡಳಿತದಲ್ಲಿ ಕನ್ನಡ ಸಂಪೂರ್ಣ ಕಡ್ಡಾಯವಾಗಬೇಕು, ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ. ನಾಡಿನ ಹಿತಕ್ಕಾಗಿ ನಾಡಿನ ನೆಲ ಜಲ ಸಂರಕ್ಷಣೆ, ನಾಡು ನುಡಿವಿಚಾರಕ್ಕೆ ದಕ್ಕೆಯಾದಾಗ ಜಾತಿಬೇಧ, ಪಕ್ಷಬೇಧ ಮರೆತು ಚಿಂತಿಸದಿದ್ದರೆ ,ಒಗ್ಗಟ್ಟಾಗದಿದ್ದರೆ ನಾಡಿಗೆ ಅಪಚಾರ ಎಸಗಿದಂತೆ ಎಂದು ಶಾಂತ ಪ್ರಕಾಶ್ ತಮ್ಮ ಅಭಿಮತ ವ್ಯಕ್ತ ಪಡಿಸಿದರು.
ಸಮಾರಂಭದಲ್ಲಿ ಟ್ರಸ್ಟಿನ ಸಂಸ್ಥಾಪಕಿ ಜಿ ಯಶೋಧ ಮಾತನಾಡಿ ಈ ನಾಡಿನ ಇತಿಹಾಸ ಪರಂಪರೆಯಲ್ಲಿ ಕನ್ನಡದ ಕಂಪನ್ನ ಜ್ಞಾನಪೀಠಿಗಳು ಜಗತ್ತಿಗೇ ಸಾರಿದ್ದರೂ ಅದೇಕೋ ಕೆಲವರಿಗೆ ಪರಭಾಷೆಗಳ ವ್ಯಾಮೋಹ. ನಾಡಿನ ಮೇಲೆ ಮಮತೆ ಕಾಳಜಿ ಹೊಂದದವರು ಈ ನಾಡಿನಲ್ಲಿ ಜನಿಸಿದ್ದರೂ ಕನ್ನಡಿಗರಲ್ಲ.
ಈ ನಾಡಿನ ಋಣ ತೀರಿಸುವುದು ನಾಡಿನಲ್ಲಿ ಹುಟ್ಟಿರುವ, ಕರ್ನಾಟಕದಲ್ಲಿ ಬದುಕುತ್ತಿರುವ, ವ್ಯವಹಾರ ಮಾಡುತ್ತಿರುವ ಪ್ರತಿಯೋರ್ವರ ಕರ್ತವ್ಯ ಆಗಬೇಕೆಂದರು.ಸಮಾರಂಭದಲ್ಲಿ ರಂಗ ಹ್ರೃದಯ ಸಾಂಸ್ಕೃತಿಕ ಸಂಸ್ಥೆ ಪದಾದಿಕಾರಿಗಳು, ಕೋ ಆರ್ಡಿನೇಟರ್ ಹೇಮರಾಜ್, ಶಿವರಾಜ್. ಡಾ,ಶಿವಕುಮಾರ್, ಪಲ್ಲವಿ, ಆಶ್ರಮವಾಸಿ ಮಕ್ಕಳು , ಹಿರಿಯ ಚೇತನಗಳು ಉಪಸ್ಥಿತರಿದ್ದರು.
ಸುವರ್ಣ ಮಹೋತ್ಸವ ಕನ್ನಡ ರಾಜ್ಯೋತ್ಸವದ ಅಂಗವಾಗಿ ಈ ದಿನ ಸಂಜೆ 07 ಕ್ಕೆ ಹಾಸ್ಯ ನಾಟಕ ಕೃಷ್ಣ ಸಂಧಾನ ಹಾಗೂ ನಾಳೆ ಸಂಜೆ 07 ಕ್ಕೆ ಸೋರುತಿಹುದು ಸಂಬಂಧ ನಾಟಕವನ್ನು ಕಡಬಗೆರೆ ಆಶ್ರಮದ ಆವರಣದಲ್ಲಿ ಆಯೋಜಿಸಲಾಗಿದೆ.ಆಶ್ರಮವಾಸಿ ಮಕ್ಕಳು ಮತ್ತು ಹಿರಿಯರೆ ನಾಟಕ ಉದ್ಘಾಟಿಸಲಿದ್ದಾರೆ. ಸೂರ್ಯ ಮುಕುಂದರಾಜ್ ಹಾಗೂ ಬಿ, ಬಶವರಾಜು . ಸಂಸ ಸುರೆಶ್.ಪ್ರದಿಪ್ ತಿಪಟೂರು.ಬಿ.ಆರ್ ವಿಜಯ ಕುಮಾರ್ ಉಪಸ್ಥಿತರಿರಲಿದ್ದಾರೆ.