ಬೆಂಗಳೂರು: ಮಹಾಲಕ್ಷಿ÷್ಮ ಲೇಔಟ್ ವಿಧಾನಸಭಾ ಕ್ಷೇತ್ರದ ಜೆ.ಎಸ್ ನಗರದ ೮ನೇ ಮುಖ್ಯರಸ್ತೆಯಲ್ಲಿರುವ ನಿವಾಸಿಗಳ ಮನೆಗಳಿಗೆ ಶಾಸಕ ಕೆ ಗೋಪಾಲಯ್ಯ ಅವರು ಭೇಟಿ ನೀಡಿ ಅಲ್ಲಿನ ಕುಡಿಯುವ ನೀರಿನ ಸಮಸ್ಯೆ ಆಲಿಸಿ ತಕ್ಷಣದಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಪೈಪ್ ಲೈನ್ ಹಾಕಿ ನಿವಾಸಿಗಳಿಗೆ ಕುಡಿಯುವ ನೀರಿಗೆ ತೊಂದರೆ ಆಗದಂತೆ ಅನುಕೂಲ ಮಾಡಿಕೊಡಬೇಕು ಎಂದು ಸೂಚನೆ ನೀಡಿದರು. ಈ ಸಂರ್ಭದಲ್ಲಿ ಬಿ.ಡಿ.ಶ್ರೀನಿವಾಸ್, ವಿಜಯ್ ಕುಮಾರ್, ರಾಘವೇಂದ್ರ ನಾಗರಾಜ್, ಜಲಮಂಡಳಿ ಯ ಇಂಜಿನಿಯರ್ಗಳು ಹಾಗೂ ಸ್ಥಳೀಯ ಮುಖಂಡರು ಹಾಜರಿದ್ದರು.



