This is the title of the web page
This is the title of the web page

ಮಡಿವಾಳ ಮಾಚಿದೇವರಿಗೆ ಅವಮಾನ: ಮುಖಂಡರ ಆಕ್ರೋಶ

ಗೌರಿಬಿದನೂರು: ಸರ್ಕಾರದ ಆದೇಶವಿದ್ದರೂ ಹಲವು ಇಲಾಖೆ ಮತ್ತು ಪಂಚಾಯ್ತಿಗಳಲ್ಲಿ ಮಡಿವಾಳ ಮಾಚಿದೇವರ ಭಾವಚಿತ್ರ ಇಡದೆ ಅವರಿಗೆ ಅಪಮಾನ ಮಾಡಿದ್ದಾರೆ ಎಂದು ಮಡಿವಾಳ ಮಾಚಿದೇವರ ತಾಲ್ಲೂಕು ಅಧ್ಯಕ್ಷ ಬಿ.ಎನ್. ನರಸಿಂಹಮೂರ್ತಿ ಆರೋಪಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ತಿಂಗಳ ಒಂದನೇ ತಾರೀಖು ಮಡಿವಾಳ ಮಾಚಿದೇವರ ಜಯಂತಿ ಆಚರಣೆ ಇದ್ದು, ಅಂದು ತಾಲ್ಲೂಕು ಅನೇಕ ಸರ್ಕಾರಿ ಕಚೇರಿಯಲ್ಲಿ ಮಾಚಿದೇವರ ಭಾವಚಿತ್ರ ಇಡದೆ ಅವರಿಗೆ ಅವಮಾನ ಮಾಡಿದ್ದಾರೆ. ಈ ಬಗ್ಗೆ ತಹಸೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳಿ ದೂರು ನೀಡಲು ನಮ್ಮ ಸಂಘ ನಿರ್ಧಾರ ಮಾಡಿದೆ.

ಶತ ಶತಮಾನಗಳಿಂದ ಶೋಷಿತರ ಏಳಿಗೆಗೆ ಮತ್ತು ಸಮಾನತೆಗಾಗಿ ಬುದ್ಧ, ಬಸವಣ್ಣ, ಕನಕದಾಸರು, ಮಡಿವಾಳ ಮಾಚಿದೇವರು, ಅಂಬೇಡ್ಕರ್ ಇಂತಹ ಆದರ್ಶ ಪುರುಷರು ತಮ್ಮದೇ ಆದ ಸೇವೆ ಸಲ್ಲಿಸಿದ್ದಾರೆ. ಅವರ ನೆನೆಪಿಗಾಗಿ ನಾವು ಜಯಂತಿಗಳನ್ನು ಆಚರಣೆ ಮಾಡುತ್ತಿದ್ದೇವೆ. ಅದಕ್ಕೆ ಸರ್ಕಾರ ಸಹ ಅವರ ಭಾವಚಿತ್ರ ಇಟ್ಟು ಜಯಂತಿ ಮಾಡಬೇಕು ಎಂದು ಎಲ್ಲ ಇಲಾಖೆಗೆ ಸೂಚನೆ ಸಹ ಕೊಟ್ಟಿದ್ದೆ. ಆದರೆ, ಕೆಲವು ಅಧಿಕಾರಿಗಳು ಅದನ್ನು ಪಾಲಿಸದೆ ಅವರಿಗೆ ಅವಮಾನ ಮಾಡುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದರು.

ಮುಖಂಡರಾದ ಮುದುಗೆರೆ ಅಶ್ವಥ್ಥಪ್ಪ ಮಾತನಾಡಿದರು.ಸುದ್ದಿಗೋಷ್ಠಿಯಲ್ಲಿ ಮಡಿವಾಳ ಸಮುದಾಯದ ಮುಖಂಡರಾದ ಸುದರ್ಶನಬಾಬು ಕೆಂಪರಾಜು, ನವೀನ್‍ಕುಮಾರ್, ನಾರಾಯಣ್‍ಸ್ವಾಮಿ ವೆಂಕಟಸ್ವಾಮಿ, ಪ್ರಸಾದ್ ಚಂದ್ರನ್ನ ಮುಂತಾದವರು ಹಾಜರಿದ್ದರು.