ಬೆಂಗಳೂರು: ಐಸಿಎಂಎಐ ಮತ್ತು ಐಸಿಎಸ್ಐ ನ ಬೆಂಗಳೂರು ಶಾಖೆ ಕೇಂದ್ರ ಹಣಕಾಸು ಮತ್ತು ಕಾರ್ಪೋರೇಟ್ ವ್ಯವಹಾರಗಳ ಸಚಿವರಾದ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಜಂಟಿ ಸಂವಾದ ಕಾರ್ಯಕ್ರಮ ಏರ್ಪಡಿಸಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಆರ್ಥಿಕತೆಯ ಶೀಘ್ರ ಬೆಳವಣಿಗೆಗೆ ಕಾಸ್ಟ್ ಬೆನಿಫಿಟ್ ವಿಶ್ಲೇಷಣೆ ಮತ್ತು ಮೌಲ್ಯಮಾಪನದ ಮೂಲಕ ಮ್ಯಾನೇಜ್ಮೆಂಟ್ ಅಕೌಂಟೆಂಟ್ ಗಳು ಕೊಡುಗೆ ನೀಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಐಸಿಎಸ್ಐ ಅಧ್ಯಕ್ಷ ಸಿಎಸ್ ನರಸಿಂಹನ್.ಬಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಐಸಿಎಂಎಐ ಅಧ್ಯಕ್ಷ ಅಶ್ವಿನ್ ಜಿ. ದಲ್ವಾದಿ, ಐಸಿಎಂಎಐ ಸದಸ್ಯರ ಸೌಲಭ್ಯ ಸಮಿತಿ ಸದಸ್ಯರಾದ ಸಿಎಂಎ ರಾಮಸ್ಕಂದ.ಎನ್, ಐಸಿಎಂಎಐ ಬೆಂಗಳೂರು ಶಾಖೆ ಅಧ್ಯಕ್ಷ ಸಿಎಂಎ ದೇವರಾಜುಲು.ಬಿ; ಐಸಿಎಂಎಐ ಬೆಂಗಳೂರು ಶಾಖೆ ಕಾರ್ಯದರ್ಶಿ ಸಿಎಂಎ ಅಭಿಜೀತ್ ಎಸ್.ಜೈನ್ ಮತ್ತಿತರರು ಉಪಸ್ಥಿತರಿದ್ದರು.