This is the title of the web page
This is the title of the web page

`ಆರ’ ಚಿತ್ರದ ಕುತೂಹಲ ಭರಿತ ಟೀಸರ್ ರಿಲೀಸ್

ಪ್ರತಿಭಾವಂತ ಹಾಗೂ ಯುವ ಸಿನಿಮೋತ್ಸಾಹಿಗಳ ತಂಡವೊಂದು ಸೇರಿ ಮಾಡಿರುವ `ಆರ’ ಸಿನಿಮಾ ಟೀಸರ್ ಮೂಲಕ ಎಲ್ಲರ ಗಮನ ಸೆಳೆಯುತ್ತಿದೆ. ಟೈಟಲ್ ಹಾಗೂ ಪೋಸ್ಟರ್ ಮೂಲಕ ಕ್ಯೂರಿಯಾಸಿಟಿ ಹುಟ್ಟು ಹಾಕಿದ್ದ ಚಿತ್ರತಂಡ ಪ್ರಾಮಿಸಿಂಗ್ ಟೀಸರ್ ಬಿಡುಗಡೆ ಮಾಡಿ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿಸಿದೆ.

ದೈವ ಹಾಗೂ ದುಷ್ಟ ಶಕ್ತಿಯ ಸಂಘರ್ಷದ ಕಥಾಹಂದರ ಒಳಗೊಂಡ ಸ್ಪಿರಿಚ್ಯುಯಲ್ ಡ್ರಾಮಾ ಮತ್ತು ಥ್ರಿಲ್ಲರ್ ಜಾನರ್ ಸಿನಿಮಾ `ಆರ’. ಬಿಡುಗಡೆಯಾಗಿರುವ ಟೀಸರ್ ತುಣುಕು ಕೂಡ ಅದರ ಝಲಕ್ ಕಟ್ಟಿಕೊಟ್ಟಿದೆ. ಅಶ್ವಿನ್ ವಿಜಯ ಮೂರ್ತಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರ ಸಂಪೂರ್ಣ ಹೊಸ ಪ್ರತಿಭೆಗಳಿಂದ, ಹೊಸತನದಿಂದ ಕೂಡಿದ ಸಿನಿಮಾ.

ರೋಹಿತ್ ಹಾಗೂ ದೀಪಿಕಾ ಆರಾಧ್ಯ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಚಿತ್ರದ ನಾಯಕ ನಟ ರೋಹಿತ್ ಬರೆದಿದ್ದು. ಆನಂದ್ ನೀನಾಸಂ ಸತ್ಯ ರಾಜ್ ನಿಖಿಲ್ ಶ್ರೀಪಾದ್ ಪ್ರತೀಕ್ ಲೋಕೇಶ್ ಚಿತ್ರದ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. `ಆರ’ ಎಂಬ ಹುಡುಗನ ಜರ್ನಿ ಸುತ್ತ ಹೆಣೆದ ಕಥೆಯಿದು. ವಿಧಿಯ ಜೊತೆ ಸೇರಿ ಸಂರಕ್ಷಣೆಗಾಗಿ ಹೋರಾಡುವ ಹುಡುಗನ ಕಹಾನಿ ಚಿತ್ರದಲ್ಲಿದೆ.

ಚಿತ್ರದ ಬಹುತೇಕ ಚಿತ್ರೀಕರಣ ಉಡುಪಿಯಲ್ಲಿ ಆಗಿದ್ದು. ಚಿತ್ರವು ಉಡುಪಿಯ ಕನ್ನಡ ಹೊಂದಿದೆ. ವಾಸ್ತವ ಅನುಗುಣವಾಗಿ ಸ್ಪಿರಿಚ್ಯುಯಲ್ ಹೊಂದಿದ ಕಥೆ ನಾನ ತರದ ಆಯಾಮ ಪಡೆದುಕೊಳ್ಳುತ್ತದೆ. `ಎಆರ್’ ಫಿಲಂಸ್ ಬ್ಯಾನರ್ ನಡಿ ಸುಜಾತ ಚಡಗ, ಚಂದ್ರಶೇಖರ್ ಸಿ ಜಂಬಿಗಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಯುವ ಪ್ರತಿಭೆ ಶ್ರೀಹರಿ ಛಾಯಾಗ್ರಾಹಣ, ಗಿರೀಶ್ ಹೊತ್ತೂರ್ ಸಂಗೀತ ನಿರ್ದೇಶನ, ಮಾದೇಶ್ ಸಂಕಲನ, ದೇವಿಪ್ರಕಾಶ್ ಕಲಾ ನಿರ್ದೇಶನ`ಆರ’ ಚಿತ್ರಕ್ಕಿದೆ. ಜೂನ್‍ನಲ್ಲಿ ಸಿನಿಮಾ ತೆರೆಗೆ ತರಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ.