ಬೆಂಗಳೂರು: ಮಹಿಳೆ ಅಪಹರಣ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಜಿ ಸಚಿವ ಹಾಗೂ ಶಾಸಕ ಹೆಚ್.ಡಿ.ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರಿಗೆ ಹೈಕೋರ್ಟ್ ಏಕ ಸದಸ್ಯ ಪೀಠ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಮಧ್ಯಂತರ ಜಾಮೀನನ್ನು ಮುಂದಿನ ಶುಕ್ರವಾರದವರೆಗೂ ನೀಡಿ ಆದೇಶಿಸಲಾಗಿದೆ. ಮಧ್ಯಂತರ ಜಾಮೀನು ಮಂಜೂರಾದರೂ ಇಂದು ಮಧ್ಯಾಹ್ನ 1 ಗಂಟೆಗೆ ಎಸ್ಐಟಿ ವಿಚಾರಣೆಗೆ ಹಾಜರಾಗಲು ಭವಾನಿಗೆ ಸೂಚಿಸಿರುವ ನ್ಯಾಯಾಲಯ ವಿಚಾರಣೆಗೆ ಸಹಕರಿಸುವಂತೆ ಆದೇಶಿಸಿದೆ.
ಇದೇ ವೇಳೆ ಭವಾನಿಯವರಿಗೆ ಹಾಸನ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದ್ದು, ಕೆ.ಆರ್. ನಗರ ಪ್ರವೇಶಕ್ಕೂ ನಿರ್ಬಂಧ ವಿಧಿಸಲಾಗಿದೆ. ಸಂಜೆ 5 ಗಂಟೆ ನಂತರ ಭವಾನಿಯವರನ್ನು ವಿಚಾರಣೆ ಮುಗಿಸಿ ವಾಪಸ್ ಕಳಿಸುವಂತೆ ನಿರ್ದೇಶಿಸಲಾಗಿದೆ.