ಬೆಂಗಳೂರು: ಶ್ರೀ ಲಲಿತಾ ಕಲಾ ನಿಕೇತನ ಸಂಸ್ಥಾಪಕಿ, ಅಂತರಾಷ್ಟ್ರೀಯ ಭರತನಾಟ್ಟ ಕಲಾವಿದೆ ಶ್ರೀಮತಿ ರೇಖಾ ಜಗದೀಶ್ ರವರಿಗೆ ಜಿ.ನ್ಯೂಸ್ ಕನ್ನಡ ಚಾನಲ್ ವತಿಯಿಂದ ಶಿಕ್ಷಣ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ.
ಮಠದ ಮಲಯ ಶಾಂತಮುನಿ ಸ್ವಾಮೀಜಿರವರು ಮತ್ತು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿಗಳಾದ ಸಂತೋಷ್ ಹೆಗಡೆರವರು ಹಾಗೂ ಜಿ.ನ್ಯೂಸ್ ಕನ್ನಡ ಚಾನಲ್ ಬಳಗದವರು ಶ್ರೀಮತಿ ರೇಖಾ ಜಗದೀಶ್ ರವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿದರು.ಇದೇ ಸಂದರ್ಭದಲ್ಲಿ ಮಾತನಾಡಿದ ಶ್ರೀಮತಿ ರೇಖಾ ಜಗದೀಶ್ ರವರು ಕಳೆದ 24ವರ್ಷಗಳಿಂದ ಶ್ರೀ ಲಲಿತಾಕಲಾ ನಿಕೇತನ ಸಂಸ್ಥೆ ಸ್ಥಾಪಿಸಿ ನಮ್ಮ ದೇಶದ ಸಾಂಸ್ಕೃತಿಕ ಪರಂಪರೆಯ ಭರತನಾಟ್ಯ ಕಲೆ ಉಳಿಸಿ, ಬೆಳಸಲು ಶ್ರಮವಹಿಸುತ್ತಿದ್ದೇನೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ರವರು ನಮ್ಮ ಸಂಸ್ಥೆಗೆ ಸಂಪೂರ್ಣ, ಸಹಕಾರ ಬೆಂಬಲ ನೀಡುತ್ತಿದ್ದಾರೆ.
ಭರತನಾಟ್ಯ ಕಲೆ ಉಳಿಸಬೇಕು ಸ್ಲಂ ಪ್ರದೇಶದ ಮಕ್ಕಳು ಮತ್ತು ಸರ್ಕಾರಿ ಶಾಲೆಯ ಮಕ್ಕಳಿಗೆ ಭರತನಾಟ್ಯ ಶಿಬಿರ ಆಯೋಜಿಸಿ ಉಚಿತವಾಗಿ ಹೇಳಿಕೊಡಲಾಗುತ್ತಿದೆ. ದುಬೈ, ಶ್ರೀಲಂಕಾ, ನೇಪಾಳ ಮತ್ತು ವಿವಿಧ ರಾಷ್ಟ್ರಗಳಲ್ಲಿ ನಾನು ಭರತನಾಟ್ಯ ಪ್ರದರ್ಶನ ನೀಡಲಾಗುತ್ತಿದೆ. ಪ್ರತಿವರ್ಷ ನೂರಾರು ಕಾರ್ಯಕ್ರಮಗಳನ್ನು ಪ್ರದರ್ಶ ನೀಡುತ್ತಿರುವೆ, ನಮ್ಮ ದೇಶ ಕಲೆ ಉಳಿಯಬೇಕು ಎಂದು.
ಮುಂದಿನ ದಿನಗಳಲ್ಲಿ ಭರತನಾಟ್ಯ ಕಲೆ ಉಳಿಸಿ, ಬೆಳಸಲು ಸರ್ಕಾರಿ ಶಾಲೆಯಲ್ಲಿ ಭರತನಾಟ್ಯ ಉಚಿತ ತರಭೇತಿ ಶಿಬಿರ ಆಯೋಜಿಸಲಾಗುತ್ತಿದೆ. ಭರತನಾಟ್ಯ ಕಲೆ ಮಾನಸಿಕ ಮತ್ತು ದೃಹಿಕವಾಗಿ ನೆಮ್ಮದ್ದಿ ಸಿಗುತ್ತದೆ ಮತ್ತು ನಮ್ಮ ಜೀವನಶೈಲಿ ರೂಪಿಸುವಲ್ಲಿ ಭರತನಾಟ್ಯ ಸಹಕಾರಿಯಾಗಿದೆ ಎಂದು ಹೇಳಿದರು.