ವಿಶ್ವದ ಎಲ್ಲ ಜೀವಿಗಳು ಮಹತ್ವವನ್ನು ಪಡೆಯುತ್ತದೆ ದೇವರು ಸಣ್ಣ ಇರುವೆಯನ್ನು ದೊಡ್ಡ ಆನೆಯನ್ನು ಎಲ್ಲರಿಗಿಂತ ಬುದ್ಧಿವಂತ ಪ್ರಾಣಿ ಮನುಷ್ಯನನ್ನು ಸೃಷ್ಟಿ ಮಾಡಿರುವುದು ಜೀವ ವೈವಿಧ್ಯತೆಯ ಮಹತ್ವವನ್ನು ಸಾರಲೆಂದೇ, ಪ್ರಾಣಿಗಳು, ಪಕ್ಷಿಗಳು ಜಲ, ವನಚರಗಳು ಇಷ್ಟೇ ಏಕೆ ಗಿಡಮರಗಳೂ ಕೂಡ ಜೀವ ಸಂಕುಲಗಳಲ್ಲಿಯೇ ಬರುತ್ತವೆ.
ಪರಸ್ಪರ ಸಹಕಾರದಿಂದ ಪರಸ್ಪರ ಉಪಯುಕ್ತವಾಗುವ ಇವುಗಳು ಜಗಕ್ಕೆ ಹೊಂದಾಣಿಕೆಯ ಬದುಕಿನ ಪಾಠವನ್ನು ಮಾಡುತ್ತವೆ. ಜಾಗತಿಕ ತಾಪಮಾನ ಹೆಚ್ಚುತ್ತಿರುವ ಕಾರಣ ಇಂದು ಜೀವ ಸಂಕುಲಗಳ ಸಂತತಿ 25% ನಷ್ಟು ನಷ್ಟ ಹೊಂದುತ್ತಿವೆ. ಅವುಗಳನ್ನು ಕಾಪಾಡುವ ಸಂರಕ್ಷಿಸುವ ಕಾರಣಕ್ಕಾಗಿ “ಅಂತಾರಾಷ್ಟ್ರೀಯ ಜೀವ ವೈವಿಧ್ಯತೆಯ ದಿನ”ವನ್ನು ಆಚರಿಸಲಾಗುತ್ತದೆ. ಈ ಬಾರಿ 2024ರ ಘೋಷವಾಕ್ಯ “ಬಿ ಪಾರ್ಟ್ ಆಫ್ ಪ್ಲಾನ್ ಅಂದರೆ ಯೋಜನೆಯ ಭಾಗವಾಗಿ ಭಾಗವಹಿಸಿ” ಎಂದಾಗಿದೆ.
ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೊದಲಿಗೆ ಈ ದಿನವನ್ನು ಡಿಸೆಂಬರ್ 29ರಂದು 1992ರಲ್ಲಿ ಯೋಜಿಸಲಾಗಿತ್ತು. ನಂತರ ಕ್ರಿಸ್ಮಸ್ ರಜೆಯ ಸಮಯದಲ್ಲಿ ಹೆಚ್ಚು ರಜೆ ಬರುವ ಕಾರಣ ಈ ದಿನಾಂಕವನ್ನು 2000ದಲ್ಲಿ ಡಿಸೆಂಬರ್ 29ರಿಂದ ಮೇ22ಕ್ಕೆ ಬದಲಾಯಿಸಲಾಯಿತು. ಈ ವರ್ಷದ ಯೋಜನೆಯ ಪ್ರಕಾರ 2050ರವರೆಗೆ ಜೀವ ವೈವಿಧ್ಯತೆಯನ್ನು ನಮ್ಮ ಮುಂದಿನ ಪೀಳಿಗೆಗೆ ಉಳಿಸಿ ಕೊಡುವ ನಿಟ್ಟಿನಲ್ಲಿ ಎಲ್ಲ ಪಾಣಿ ಪಕ್ಷಿ ಪರಿಸರವನ್ನು ಕಾಪಾಡುವ ಉದ್ದೇಶವನ್ನು ಹೊಂದಿದೆ.
ವಿಶ್ವದ ಎಲ್ಲ ಜೀವ ಸಂಕುಲಗಳ ಇರುವಿಕೆ ಅವುಗಳ ಅಗತ್ಯತೆ ಪರಿಸರವನ್ನು ಹಾನಿ ಮಾಡದೇ ಎಲ್ಲ ಪ್ರಾಣಿ ಹಾಗೂ ಸಸ್ಯ ಹಾಗೂ ನೀರಿನ ಮೂಲಗಳನ್ನು ಸಂರಕ್ಷಿಸುವ ಅಗತ್ಯತೆ ಹಾಗೂ ಮನುಷ್ಯರು ಹೇಗೆ ಜೀವ ಸಂಕುಲಗಳನ್ನು ಕಾಪಾಡುವ ಸಲುವಾಗಿ ಕಾರ್ಯ ತತ್ಪರರಾಗಬೇಕೆಂದು ತಿಳುವಳಿಕೆ ನೀಡುವ ಕೆಲಸವನ್ನು ಮೇ 22ರಂದು ಎಲ್ಲರಿಗೂ ತಿಳಿಸುತ್ತಾ ಆಚರಣೆಯನ್ನು ಮಾಡಬೇಕಾಗಿದೆ. ಜೀವ ಸಂಕುಲಗಳ ಅಳಿವವನ್ನು ತಡೆಯಲು ಎಲ್ಲರೂ ಸಕ್ರಿಯವಾಗಿ ಭಾಗವಹಿಸಬೇಕಾಗಿದೆ.
ಸಾಮಾನ್ಯವಾಗಿ ಜೀವ ವೈವಿಧ್ಯತೆಯನ್ನು ಮೂರು ಭಾಗಗಳಲ್ಲಿ ಗುರುತಿಸಬಹುದು ಅನುವಂಶಿಕ, ತಳಿಗಳು ಮತ್ತು ವಾತಾವರಣದ ಜೀವವೈವಿಧ್ಯ ಎಂಬುದಾಗಿ ವಿಂಗಡಿಸಬಹುದು. ಅನುವಂಶಿಕ ಎಂದರೆ ಎಲ್ಲ ಜಾತಿಯ ಪ್ರಾಣಿ ಪಕ್ಷಿ, ಗಿಡಮರಗಳು ಮನುಷ್ಯರ ಅನುವಂಶೀಯ ಗುಣಗ:ಳ ಬಗೆಗೆ ತಿಳುವಳಿಕೆ, ತಳಿಗಳು ಎಂದರೆ ಎಲ್ಲ ಜೀವ ಸಂಕುಲಗಳು ತಮ್ಮದೇ ತಳಿಗಳ ವಿವರವನ್ನು ಅವುಗಳ ಸಂರಕ್ಷಣೆಯ ವಿವರವನ್ನು ತಿಳಿಸುವುದಾಗಿದೆ.
ಅದರಂತೆ ವಾತಾವರಣ ಎಂದರೆ ಜಾಗತಿಕವಾಗಿ ಸುರಕ್ಷಿತವಾಗಿ ಆರೋಗ್ಯಕರವಾಗಿ ಇರುವಂತಹ ವಾತಾವರಣಣಕ್ಕೆ ಇಕೋ ಸಿಸ್ಟಮ್ ಎನ್ನುತ್ತಾರೆ ಈ ಮೂರು ಮುಖ್ಯ ವಿಷಯವನ್ನು ಕಾಪಾಡಿಕೊಂಡು ಹೋಗುವುದು ಪ್ರಕೃತಿಯ ಎಲ್ಲ ಪದಾರ್ಥ ಮತ್ತು ಜೀವ ಜಂತುಗಳ ಅತೀ ಹೆಚ್ಚು ಪ್ರಯೋಜನ ಪಡೆದುಕೊಳ್ಳುವ ಮಾನವರ ಕರ್ತವ್ಯವಾಗಿದೆ. ಇಂತಹ ಕರ್ತವ್ಯ ಪಾಲನೆಗಾಗಿ ವಿಶ್ವ ಸಂಸ್ಥೆಯು ಈ ವಿಶೇಷ ಆಚರಣೆಯನ್ನು ಮಾಡುತ್ತಲಿದೆ.ಜೀವ ವೈವಿಧ್ಯ ದಿನವನ್ನು ವಿವಿಧ ಪ್ರಾಣಿ ಪಕ್ಷಿಗಳಂತೆ ಗಿಡಮರಗಳಂತೆ ಅಲಂಕಾರ ಮಾಡಿಕೊಂಡು ಪರಿಸರದಲ್ಲಿ ಅವುಗಳ ಮಹತ್ವವನ್ನು ಸಾರಿ ಆಚರಿಸಬಹುದು.
ನಶಿಸುತ್ತಿರುವ ಗಿಡಮರಗಳು ಪ್ರಾಣಿ ಪಕ್ಷಿಗಳ ಉಳಿವಿನ ಕುರಿತಾಗಿ ಕಾರ್ಯಕ್ರಮಗಳನ್ನು ತಯಾರಿಸಿ ಜನರಿಗೆ ತಿಳಿಸಬಹುದುದೈನಂದಿನ ತಮ್ಮ ವೈಯಕ್ತಿಕ ಬದುಕಿನಲ್ಲಿ ಮುಳುಗಿ ಬೇರೆ ಯಾವುದೇ ಕಡೆ ಗಮನ ಕೊಡದೇ ಇರುವ ಮನುಜರ ಸಲುವಾಗಿ ಇಂತಹ ದಿನಾಚರಣೆಗಳನ್ನು ರೂಪಿಸಿ ತಿಳುವಳಿಕೆ ನೀಡುವ ಅಗತ್ಯತೆ ಬಂದೊದಗಿದೆ. ನಾವೆಲ್ಲರೂ ನಮ್ಮ ಪರಿಸರ ಹಾಗೂ ಸುತ್ತ ಮುತ್ತಲಿನ ಜೀವಗಳನ್ನು ಕಾಪಾಡಿ ಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ಮಾಡಿ ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಹಾಗೂ ಆರೋಗ್ಯಯುತ ಜೀವನ ನಡೆಸುವಲ್ಲಿ ಅನುಕೂಲತೆಗಳನ್ನು ಇಂದಿನಿಂದಲೇ ಮಾಡಬೇಕಾಗಿದೆ.