ಅಂತಾರಾಷ್ಟ್ರೀಯ ಮಟ್ಟದಲ್ಲಿ ಶೇಕಡಾ 90% ಜನರು ಆಂಗ್ಲ ಭಾಷೆಯನ್ನೇ ತಮ್ಮ ವ್ಯವಹಾರದ ಮಾಧ್ಯಮವನ್ನಾಗಿ ಮಾಡಿಕೊಂಡಿರುವ ಕಾರಣ. ಜಾಗತಿಕ ಮಾಟ್ಟದಲ್ಲಿಯೇ ಮಾತೃ ಭಾಷೆಯ ಅವಸಾನ ಬಹಳ ಕಡೆಗಳಲ್ಲಿ ಆಗುತ್ತಲಿದೆ.
ವಿಶ್ವದಾದ್ಯಂತ ಆಂಗ್ಲ ಭಾಷೆಯದ್ದೇ ಪ್ರಾಬಲ್ಯ ಮತ್ತು ಜಾಗತಿಕ ಭಾಷೆಯಿಂದಾಗಿ ವಿಶ್ವದ ಅನೇಕ ಭಾಷೆಗಳು ಹಿಂದುಳಿಯ ಬಾರದೆಂಬ ಕಾರಣದಿಂದ ಯುನಿಸ್ಕೋದ ವತಿಯಿಂದ ನವೆಂಬರ್ 1999ರಲ್ಲಿ ಪ್ರತಿ ವರ್ಷವೂ ಫೆಬ್ರವರೀ 21ನೇ ತಾರೀಖಿನಂದು ಅಂತಾರಾಷ್ಟ್ರೀಯ ಮಾತೃ ಭಾಷೆಯ ದಿನವನ್ನು ಆಚರಿಸಲಾಗುತ್ತದೆ.
ಇಂದಿನ ಶಾಲಾ ಶಿಕ್ಷಣ ಪದ್ಧತಿಯಲ್ಲಿ ಆಂಗ್ಲ ಮಾಧ್ಯಮವೇ ಬಹಳ ಪ್ರಾಮುಖ್ಯತೆಯನ್ನು ಹೊಂದಿರುವುದರಿಂದ. ಸ್ಥಳೀಯ ಭಾಷೆಗಳು ಅವುಗಳ ಸಂಸ್ಕೃತಿಯನ್ನು ಉಳಿಸುವುದೇ ಈ ದಿನದ ಆಚರಣೆಯ ಪ್ರಮುಖ ಉದ್ದೇಶಗಳಾಗಿವೆ.ವಿಶ್ವದಲ್ಲಿ ಒಟ್ಟಾರೆ 7000ಕ್ಕೂ ಹೆಚ್ಚು ಭಾಷೆಗಳನ್ನು ಮಾತನಾಡಲಾಗುತ್ತದೆ.
ಅದರಲ್ಲಿ ಕೆಲವು ಭಾಷೆಗಳಿಗೆ ಲಿಪಿ ಇದೆ ಕೆಲವು ಬಾಷೆಗಳಿಗೆ ಲಿಪಿ ಇರುವುದಿಲ್ಲ. ಅತ್ಯಧಿಕ ಭಾಷೆಗಳಿರುವ ರಾಷ್ಟ್ರವೆಂದರೆ ಪಾಪ ನ್ಯೂಗಿನಿ, ಇಲ್ಲಿ 840ಕ್ಕೂ ಹೆಚ್ಚು ಭಾಷೆಗಳನ್ನು ಮಾತನಾಡಲಾಗುತ್ತದೆ. ಅತೀ ಹೆಚ್ಚು ಮಾತನಾಡುವ ಭಾಷೆ ಮೊದಲಿಗೆ ಆಂಗ್ಲ ಬಂತರದಲ್ಲಿ ಮಂಡೇರಿಯನ್, ಮೂರನೆದಾಗಿ ಹಿಂದಿ, , ನಾಲ್ಕನೇಯದಾಗಿ ಸ್ಪಾನಿಶ್, ನಂತರ ಫ್ರೆಂಚ್ ಮೊದಲ ಐದು ಸ್ಥಾನವನ್ನು ಪಡೆದಿವೆ ಈ ಮಾಹಿತಿಯು 2024ರ ಒಂದು ಅಧ್ಯಯನದಿಂದ ತಿಳಿದು ಬಂದಿದೆ.
ಸಂಸ್ಕೃತವು ಅತೀ ಪ್ರಾಚೀನವಾದ ಭಾಷೆಯಾಗಿದ್ದು ಕ್ರಿಸ್ತಪೂರ್ವ 5000ದಿಂದಲೇ ಅನೇಕ ಗ್ರಂಥಗಳು ದೊರೆತಿವೆ. ಭಾರತದಲ್ಲಿ ಸಂಸ್ಕೃತ, ತಮಿಳು ಮತ್ತು ಕನ್ನಡ ಅತೀ ಹೆಚ್ಚು ಪ್ರಾಚೀನವಾದ ಭಾಷೆಗಳೆಂದು ಗುರುತಿಸಲ್ಪಟ್ಟಿವೆ.ವ್ಯಕ್ತಿಗೆ ಮಾತನ್ನು ಕಲಿಸುವವಳೇ ತಾಯಿ ಆದ್ದರಿಂದ ಅವಳ ಮಾತೇ ಮಗುವಿನ ಭಾಷೆಯಾಗುತ್ತದೆ.
ವ್ಯವಹಾರಿಕ ಭಾಷೆ, ಕಾರ್ಯಲಯದಲ್ಲಿ ಬಳಸುವ ಭಾಷೆ ಯಾವುದೇ ಇರಲಿ ಮನುಷ್ಯನಿಗೆ ನೋವು, ಗಾಬರಿ ಮೊದಲಾದ ಉದ್ವೇಗದ ಸಮಯದಲ್ಲಿ ಅವನು ಬಳಸುವುದು ಮಾತೃ ಭಾಷೆಯನ್ನೇ. ಆಂಗ್ಲ ಭಾಷೆಯ ಪ್ರಭಾವದಿಂದ ಎಷ್ಟೋ ಸ್ಥಾನೀಯ ಭಾಷೆಗಳು ಅವಸಾನದ
ಅಂಚಿನಲ್ಲಿವೆ.
ಬಹಳಷ್ಟು ಜನರು ತಮ್ಮ ಮಾತೃ ಭಾಷೆ ಸ್ಥಾನೀಯ ಭಾಷೆಗಳನ್ನು ನಾಡಿನ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಬಹು ದೊಡ್ಡ ಹೋರಾಟವನ್ನು ಮಾಡಿ ಪ್ರಯತ್ನಿಸುತ್ತಿದ್ದಾರೆ. ಮಕ್ಕಳ ಬೆಳವಣಿಗೆ ಹಾಗೂ ಅವರ ಉತ್ತಮ ಭವಿಷ್ಯಕ್ಕಾಗಿಯೇ ತ್ರಿಭಾಷಾ ಸೂತ್ರದ ಅಡಿಯಲ್ಲಿ ಸ್ಥಾನೀಯ ಭಾಷೆ, ಆಂಗ್ಲ ಮತ್ತು ಮಾತೃ ಭಾಷೆಯ ಶಿಕ್ಷಣವನ್ನು ನೀಡಲಾಗುತ್ತಿದೆ.
ಕೇವಲ ಸರಕಾರದ ನೀತಿ ಅಥವಾ ಕೆಲವು ಜನರ ಪ್ರಯತ್ನದಿಂದ ಭಾಷೆಗಳನ್ನು ಉಳಿಸಿ ಬೆಳಸುವ ಕಾರ್ಯ ನಡೆಯದೇ ಎಲ್ಲರಿಗೂ ತಮ್ಮ ಮಾತೃ ಭಾಷೆ, ಸ್ಥಳೀಯ ಭಾಷೆಯ ಜೊತೆಗೆ ಇತರ ಯಾವುದೇ ಬಯಕೆ ಭಾಷೆಯನ್ನು ಕಲಿತು ತಮ್ಮ ಜ್ಞಾನವನ್ನು ಕೌಶಲ್ಯವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ.
ಲಿಪಿ ಇರುವ ಭಾಷೆಗಳು ಮಾತ್ರ ಭಾಷೆಗಳಲ್ಲ ಎಷ್ಟೋ ಭಾಷೆಗಳಿಗೆ ಲಿಪಿ ಸಾಹಿತ್ಯವಿರದಿದ್ದರೂ ಅವುಗಳ ಅಸ್ತಿತ್ವ ಇದ್ದೇ ಇರುತ್ತದೆ. ಮಾತೃ ಭಾಷೆಯೆಂದರೆ ನಮ್ಮ ತಾಯಿಯ ಮಾತು, ಎಷೋ ಜನರಿಗೆ ತಂದೆ ಮತ್ತು ತಾಯಿ ಬೇರೆ ಬೇರೆ ರಾಜ್ಯದವರಾಗಿದ್ದಾಗ ಮಾತೃ ಭಾಷೆ ಆಡು ಭಾಷೆ ಬೇರೆಯೇ ಇರುತ್ತದೆ. ಒಂದು ಭಾಷೆಯನ್ನು ವೈಭವೀಕರಿಸಲು ಬೇರೆ ಭಾಷೆಯನ್ನು ನಿಕೃಷ್ಟ ಮಾಡುವುದು ಬೇಡ. ಎಲ್ಲ ಭಾಷೆಗಳನ್ನು ಗೌರವಿಸೋಣ. ನಮ್ಮ ಮಾತೃಭಾಷೆಯನ್ನು ಪೂಜಿಸೋಣ, ಪ್ರೀತಿಸೋಣ ಆರಾಧಿಸೋಣ.
ಮಾಧುರಿ ದೇಶಪಾಂಡೆ, ಬೆಂಗಳೂರು