This is the title of the web page
This is the title of the web page

ಅಂತಾರಾಷ್ಟ್ರೀಯ ಶಿಲ್ಪಕಲೆ ದಿನ

ಸಂಸ್ಕೃತಿ ಮತ್ತು ಕಲೆ ಯಾವುದೇ ದೇಶದ ಇತಿಹಾಸವನ್ನು ಪ್ರತಿಬಿಂಬಿಸುತ್ತದೆ. ನಾವು ನಮ್ಮ ಇತಿಹಾಸವನ್ನು ತಿಳಿಯಲು ಶಾಸನಗಳನ್ನು ಶಿಲ್ಪಕಲೆಯನ್ನು ದೇವಸ್ಥಾನಗಳನ್ನು ಅರಮನೆಗಳನ್ನು ಸಂದರ್ಶಿಸುತ್ತೇವೆ. ಚಿತ್ರಕಲೆ ಮತ್ತು ಶಿಲ್ಪ ಕಲೆಗಳಿಗೆ ಇತ್ತೀಚಿಗೆ ಪ್ರೋತ್ಸಾಹ ಮತ್ತು ಉತ್ತೇಜನ ಕಡಿಮೆಯಾದಂತಿದೆ. ಶಿಲ್ಪಕಲೆಯನ್ನು ಪ್ರೋತ್ಸಾಹಿಸಲು ಮತ್ತು ಅದರ ಅಸ್ತಿತ್ವವನ್ನು ಉಳಿಸಲು ಅಂತಾರಾಷ್ಟ್ರೀಯ ಶಿಲ್ಪಕಲಾ ಕೇಂದ್ರವು 2015ನೇ ಇಸವಿಯಿಂದ ಅಂತಾರಾಷ್ಟ್ರೀಯ ಶಿಲ್ಪಕಲಾ ದಿನವನ್ನು ಆಚರಿಸಲು ಆರಂಭಿಸಿದರು.

ಹೀಗೆ ಶಿಲ್ಪಕಲೆಗಳನ್ನು ಕಾಪಾಡಲು ಬೆಳೆಸಲು ಎರಡು ಮುಖ್ಯ ಕೆಲಸಗಳನ್ನು ಮಾಡಬೇಕು. ನಮ್ಮ ಇತಿಹಾಸದ ಶಿಲ್ಪಗಳನ್ನು ಪುರಾತನತೆಯ ಪ್ರತೀಕಗಳನ್ನು ಕಾಪಾಡುವುದು ಹಾಗೂ ಇಂದಿನ ಶಿಲ್ಪಕಲೆಗೆ ಪ್ರೋತ್ಸಾಹಿಸುವುದು. ಜಗತ್ತಿನಾದ್ಯಂತ ಯಾವುದೇ ದೇಶದ ನಾಗರೀಕತೆ ಹಾಗೂ ಪುರಾತನತೆಯನ್ನು ತಿಳಿಸುವುದೇ ಈ ಶಿಲ್ಪಕಲೆಗಳು ಹೀಗಾಗಿ ಇಂದಿನ ಆಧು ನಿಕ ಕಾಲದಲ್ಲಿ ಹಳೆಯ ಶಿಲ್ಪಕಲೆಯ ಬಗೆಗೆ ಅಧ್ಯಯನ ಮಾಡಿ ಹೊಸ ವಿಧಗಳನ್ನು ಅನುಸರಿಸುವ ಜನರು ಬಹಳ ಕಡಿಮೆ ಪ್ರಮಾಣದಲ್ಲಿರುವುದರಿಂದ ಅವರಿಗೆ ಪ್ರೋತ್ಸಾಹ ನೀಡುವುದು ಮಹತ್ವವನ್ನು ಪಡೆಯುತ್ತದೆ.

ನಾವುಗಳು ಯಾವ ರೀತಿಯಿಂದ ಅಂತಾರಾಷ್ಟ್ರೀಯ ಶಿಲ್ಪಕಲಾದಿನವನ್ನು ಆಚರಿಸಬಹುದು ಎಂದರೆ ನಗರದಲ್ಲಿರುವ ಯಾವುದೇ ಶಿಲ್ಪ ಕಲಾಪ್ರದರ್ಶನಕ್ಕೆ ಹೋಗಿ ಅಲ್ಲಿರುವ ಪ್ರದರ್ಶನದ ಆಯೋಜಕರಿಗೆ ಪ್ರೋತ್ಸಾಹ ನೀಡುವುದು ಅನುಕೂಲತೆ ಇದ್ದರೆ ಮಾರಾಟಕ್ಕೆ ಇರುವ ಕಲಾಕೃತಿಯನ್ನು ಖರೀದಿಸುವುದು ಅಥವಾ ಶಿಲ್ಪಕಲಾ ಸಂಗ್ರಹಾಲಯ ಇಲ್ಲವೇ ಶಿಲ್ಪಕಲಾಕೃತಿಗಳನ್ನು ಇಟ್ಟಿರುವ ಸ್ಥಳಗಳನ್ನು ಸಂದರ್ಶಿಸುವುದು.

ನಿಮ್ಮ ಮಕ್ಕಳಿಗೆ ಶಿಲ್ಪ ಕಲೆಯಲ್ಲಿ ಆಸಕ್ತಿ ಮೂಡಿಸುವಂತೆ ಮಣ್ಣು ಅಥವಾ ಬೇರೆ ಪದಾರ್ಥಗಳ ಕಲಾಕೃತಿ ಮಾಡಲು  ಪ್ರೋತ್ಸಾಹ ಇಸುವುದು ಅಥವಾ ನೀವೇ ಸ್ವತಃ ತಯಾರಿಸಿ ಅವರಿಗೂ ಕಲಿಸುವುದು ಇಲ್ಲವೇ ಶಿಲ್ಪಕಲೆಗಳಿಗೆ ಪ್ರೋತ್ಸಾಹ ನೀಡುವ ಸಂಶ್ಥೆಗಳಿಗೆ ದಾನವನ್ನು ನೀಡುವುದು ಹೀಗೆ ಆಚರಿಸಬಹುದಾಗಿದೆ.

ಈ ಬಾರಿಯ ಅಂತಾರಾಷ್ಟ್ರೀಯ ಶಿಲ್ಕಲಾ ದಿನದ ಘೋಷ ವಾಕ್ಯ “ ಶಿಲ್ಪಕಲೆಯ ಶಕ್ತಿ ಒಗೂಡಿಸುತ್ತದೆ, ಗುಣಪಡಿಸುತ್ತದೆ ಹಾಗೂ ಪ್ರೇರಣೆಯನ್ನು ನೀಡುತ್ತದೆ” ಎಂಬುದಾಗಿದೆ. ಪ್ರಾಕೃತಿಕ ವಸ್ತುಗಳೊಂದಿಗಿನ ಒಡನಾಟ ಮನುಷ್ಯನಲ್ಲಿ ಆನಂದವನ್ನು ಜೀವನ ಶಕ್ತಿಯನ್ನು ಮೂಡಿಸುತ್ತದೆ ಹೀಗಾಗಿ ನಮ್ಮ ಪೂರ್ವಜರ ಮಾಹಿತಿ ತಿಳಿಯಲು ಕತೆಗಳನ್ನು ತಿಳಿಯಲು ಈ ಶಿಲ್ಪಕಲೆಗಳು ನೆರವಾಗುತ್ತದೆ.

ಶಿಲ್ಪಕಲೆಗಳು ಸಾಂಸ್ಕೃತಿಕ ಮತ್ತು ಸಾಮಾಜಿಕ ಪರಿಸ್ಥಿತಿಯ ಪ್ರತೀಕಗಳಾಗಿರುವುದರಿಂದ ನಮ್ಮ ಮುಂದಿನ ತಲೆಮಾರಿಗೆ ಇಂದಿನ ಪರಿಸ್ಥಿತಿ ಹಾಗೂ ಮನೋಭಾವವನ್ನು ತಿಳಿಸುತ್ತದೆ.
ಮಾಧುರಿ ದೇಶಪಾಂಡೆ, ಬೆಂಗಳೂರು