ಬೆಂಗಳೂರು: ನಗರದಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚು ಜನ ಸಾಹಿತಿಗಳಿದ್ದಾರೆ. ಆದರೆ ಓದುಗರ ಸಂಖ್ಯೆ ಮಾತ್ರ ಸಾವಿರಕ್ಕೆ ಸೀಮಿತವಾಗಿದೆ ಎಂಬುದು ವಿಷಾದನೀಯ ಸಂಗತಿ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಕಾದಂಬರಿಗಾರ್ತಿ ನಂದಿನಿ ಅಭಿಪ್ರಾಯ ಪಟ್ಟರು.
ಇಂದು ಆಚರಿಸಿಕೊಳ್ಳುತ್ತಿರುವ ಈ ಮಹಿಳಾ ದಿನಾಚರಣೆಯ ಅವಕಾಶ ಸುಮ್ಮನೆ ಬಂದಿದ್ದಲ್ಲ. ಇದು ಮಹಿಳೆಯರ ಕಷ್ಟ ಮತ್ತು ಸಂಧಿಗ್ದತೆಗಳ ಹೋರಾಟದ ಫಲ ಎಂದರು. ಕಾರ್ಯಕ್ರಮವನ್ನು ಬೀಸುವ ಕಲ್ಲಿನಿಂದ ಹಕ್ಕಿ ಬೀಸುವ ಮೂಲಕ ಸಂಗೀತ ಎಸ್.ಬಿ.ರವರು ಕಾರ್ಯಕ್ರಮವನ್ನು ವಿನೂತನವಾಗಿ ಉದ್ಘಾಟನೆ ಮಾಡದರು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕುರಿತು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಈ ರವೀಶ್ ರವರು ಮಾತನಾಡುತ್ತಾ,
ನಾವು ಚಿಕ್ಕವರಿದ್ದಾಗ ನಮ್ಮ ನಿಮ್ಮೆಲ್ಲರ ತಾಯಂದಿರು ಮತ್ತು ಅಜ್ಜಿಯವರು ಹಾಡುವ ಸೋಬಾನೆ ಹಾಡು ಬೀಸೋ ಕಲ್ಲು ಪದಗಳು ಜನಪದ ಹಾಡುಗಳು ತುಂಬಾ ಇಂಪಾಗಿ ಇದ್ದವು ಒಂದು ಕಾಲದಲ್ಲಿ ಈ ಹಾಡುಗಳು ಖುಷಿ ನೀಡುತ್ತಿದ್ದವು ಈಗ ಅವು ಮೊಬೈಲ್ ಯುಗದಲ್ಲಿ ಮರೆಯಾಗುತ್ತಿವೆ
ನಮ್ಮ ಸಂಸ್ಥೆಯ ಸ್ಲೋಗದಂತೆ ನಮ್ಮ ನಡಿಗೆ ಪರಿವರ್ತನೆ ಕಡೆಗೆ ಎಂಬAತೆ ಉದ್ಘಾಟನಾ ಸಮಯದಲ್ಲಿ ಏನಾದರು ಒಂದು ಬದಲಾವಣೆ ತರಬೇಕೆಂಬ ಪ್ರಯತ್ನದಿಂದ ಇದು ನನ್ನ ಚಿಕ್ಕ ಪ್ರಯತ್ನ . ಶರಣು ಶರಣು ಬಸವಲಿಂಗಾಯ ನಮಃ ಜೈ ಭುವನೇಶ್ವರಿ ಜೈ ಕರ್ನಾಟಕ ಮಾತೆ ನನ್ನ ಕಾರ್ಯಕ್ರಮಕ್ಕೆ ಸಹಕರಿಸಿದ ಪ್ರತಿಯೊಬ್ಬರಿಗೂ ನನ್ನ ಹೃದಯಪೂರ್ವಕ ಧನ್ಯವಾದಗಳು ಎಂದು ತನ್ನ ಮನದಾಳವನ್ನು ಹಂಚಿಕೊAಡರು. ಕಾರ್ಯಕ್ರಮದಲ್ಲಿ ರವೀಶ್ ರವರ ಒಂದೇ ಜೀವ ಕಾದಂಬರಿ, ನಿರಂಜನ ಮೂರ್ತಿ ರವರ ಮೊಗ್ಗು ಅರಳುವ ಮುನ್ನ, ಮಾಲತಿ ಮೇಲುಕೋಟೆರವರ ಮುತ್ತಿನ ಮಾಲೆ ಹಾಗೂ ಕಾವ್ಯ ಕಸ್ತೂರಿ ಮತ್ತು ಚಿತ್ತಚಿಲುಮೆ ಕೃತಿಗಳು ಲೋಕಾರ್ಪಣೆಗೊಂಡವು.
ಕಾರ್ಯಕ್ರಮದ ಪ್ರಾಸ್ತವಿಕ ನುಡಿಗಳನ್ನು ಡಾ. ಎಸ್.ಎಚ್ ಶಫಿಉಲ್ಲ ನುಡಿದರು. ಸಮ್ಮೇಳನ ಅಧ್ಯಕ್ಷತೆಯನ್ನು ಮಾಲತಿ ಮೇಲುಕೋಟೆ ವಹಿಸಿಕೊಂಡು ಮಾತನಾಡಿದರು. ಕವಿ ಜಯಪ್ಪ ಹೊನ್ನಾಳಿ, ಸಿನಿಮಾ ಹಾಗೂ ಕಿರುತೆರೆಯ ನಟರಾದ ಅಂಜನಾ ಗಿರೀಶ್, ರಾಜ್ ಕಿರಣ್, ವಿನಾಯಕ, ಶೈಲಜಾ ಬಾಬು,ಜಯದೇವ್ ಸವಿತ,ಪಾರ್ವತಮ್ಮ ಮತ್ತಿತ್ತರು ಪಾಲ್ಗೊಂಡಿದ್ದರು. ವಿಚಾರಗೋಷ್ಠಿ ಹಾಗೂ ಕವಿಗೋಷ್ಠಿ ಏರ್ಪಡಿಸಲಾಗಿತ್ತು. ಇಪ್ಪತ್ತೆಂಟು ಹೆಚ್ಚು ಕವಿಗಳು ಕವನ ವಾಚನ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ೪೦ ಸಾಧಕ ಮಹಿಳೆಯರಿಗೆ ಜ್ಞಾನ ಯೋಗಿ ಶಿವಶರಣ ಗಂಗಾAಬಿಕ ಪ್ರಶಸ್ತಿ ಮತ್ತು ತವರು ಮನೆ ಬಾಗಿನ ಮತ್ತು ಸೀರೆ ಕೊಡುವುದರ ಮೂಲಕ ಸನ್ಮಾನಿಸಲಾಯಿತು.
ವಿಶ್ವ ಕನ್ನಡ ಕಲಾ ಸಂಸ್ಥೆಯಿಂದ ಅಂತರಾಷ್ಟ್ರೀಯ ಮಹಿಳಾ ಸಾಹಿತ್ಯ ಸಮ್ಮೇಳನ ವಿನೂತನವಾಗಿ ಬೀಸೋ ಕಲ್ಲು ಬೀಸುವುದರ ಮೂಲಕ ಉದ್ಘಾಟನೆ



