ಹುಬ್ಬಳ್ಳಿ: ಅಪರ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಳಗಾವಿ ವಿಭಾಗ, ಧಾರವಾಡ ಇವರ ಆದೇಶದಂತೆ ಬೆಳಗಾವಿ ವಿಭಾಗದ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಕಲಿಕಾ ಗುಣಮಟ್ಟವನ್ನು ಖಾತ್ರಿಪಡಿಸಿಕೊಳ್ಳುವುದು ಹಾಗೂ ಇಲಾಖೆಯ ಮಹತ್ವದ ಕಾರ್ಯಕ್ರಮ ಗಳಾದ ಎಫ್.ಎಲ್.ಎನ್, ಎಲ್.ಬಿ.ಎ ಹಾಗೂ ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆಗಾಗಿ ೨೯ ಅಂಶಗಳ ಕಾರ್ಯಕ್ರಮ ಅನುಷ್ಠಾನದ ಪ್ರಗತಿಯನ್ನು ಪರಿವೀಕ್ಷಣೆ ಮಾಡಲು ಉಪನಿರ್ದೇಶಕರು (ಆಡಳಿತ) ಮತ್ತು ಉಪನಿರ್ದೇಶಕರು (ಅಭಿವೃದ್ಧಿ), ಕ್ಷೇತ್ರ ಶಿಕ್ಷಣಾಧಿಕಾರಿಗಳು, ಡಯಟ್ ಉಪನ್ಯಾಸಕರು, ಎಲ್ಲ ಮೇಲ್ವಿಚಾರಣಾಧಿಕಾರಿಗಳನ್ನು ಒಳ ಗೊಂಡAತೆ ಜಿಲ್ಲಾ ಹಂತದಲ್ಲಿ ೭ ಮತ್ತು ತಾಲ್ಲೂಕು ಹಂತದಲ್ಲಿ ೭ ಸಂದರ್ಶನ ತಂಡಗಳನ್ನು ರಚಿಸಲಾಗಿದೆ.
ಅದರಂತೆ ಬಾಗಲಕೋಟ ಜಿಲ್ಲೆಗೆ ೪೯, ಬೆಳಗಾವಿ ಜಿಲ್ಲೆಗೆ ೫೬, ಚಿಕ್ಕೋಡಿ ಜಿಲ್ಲೆಗೆ ೬೩, ಧಾರವಾಡ ಜಿಲ್ಲೆಗೆ ೫೬, ಗದಗ ಜಿಲ್ಲೆಗೆ ೪೯, ಹಾವೇರಿ ಜಿಲ್ಲೆಗೆ ೫೬, ಉತ್ತರಕನ್ನಡ ಜಿಲ್ಲೆಗೆ ೪೨, ಶಿರಸಿ ಜಿಲ್ಲೆಗೆ ೪೯ ಮತ್ತು ವಿಜಯಪುರ ಜಿಲ್ಲೆಗೆ ೫೬ ತಂಡಗಳನ್ನು ರಚಿಸಲಾಗಿದೆ. ಒಟ್ಟಾರೆ ಬೆಳಗಾವಿ ವಿಭಾಗದಲ್ಲಿ ೪೭೬ ತಂಡಗಳನ್ನು ರಚಿಸಲಾಗಿದೆ. ೧೧೭೧೧ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು, ೧೯೦೬ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಸಂದರ್ಶನ ಅಭಿಯಾನ ಆರಂಭ ಗೊಂಡಿದ್ದು, ನವೆಂಬರ್-೩೦ರವರೆಗೆ ಜರುಗಲಿದೆ.
ಸಂದರ್ಶನ ತಂಡಗಳು ಪ್ರತಿದಿನ ಶಾಲೆಗಳಿಗೆ ಸಂದರ್ಶನ ನೀಡಿ ಶಾಲೆಯಲ್ಲಿನ ಪ್ರತಿ ತರಗತಿಯ, ಪ್ರತಿಯೊಬ್ಬ ವಿದ್ಯಾರ್ಥಿ/ವಿದ್ಯಾರ್ಥಿನಿಯ ಕಲಿಕಾ ಪ್ರಗತಿಯನ್ನು ಖುದ್ದಾಗಿ ಪರಿಶೀಲಿಸಲು ಆದೇಶ ನೀಡಲಾಗಿದೆ. ಆರಂಭಿಕ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ (ಈ.ಐ.ಓ)ನಲ್ಲಿ ಭಾಷಾ ಮತ್ತು ಸಂಖ್ಯಾಜ್ಞಾನಕ್ಕೆ ಸಂಬAಧಿಸಿದ ೧೭ ಬುನಾದಿ ಕಲಿಕಾಫಲಗಳನ್ನು ಗಳಿಸುವಂತೆ ಮಾಡವುದು ಎಫ್.ಎಲ್.ಎನ್.ನ ಉದ್ದೇಶವಾಗಿದೆ. ಎಫ್.ಎಲ್.ಎನ್ ಕಲಿಕಾ ಫಲಗಳನ್ನು ಸಾಧಿಸದೇ ಇರುವ ವಿದ್ಯಾರ್ಥಿ ಗಳಿಗೆ ಕಾರ್ಯತಂತ್ರಗಳನ್ನು ಅನುಸರಿಸಿ ನಿಗದಿತ ಸಮಯದೊಳಗೆ ಸಾಧಿಸುವಂತೆ ಮಾಡುವುದು ಶಿಕ್ಷಕರ, ಮುಖ್ಯಶಿಕ್ಷಕರ ಜವಾಬ್ದಾರಿಯಾಗಿರುತ್ತದೆ. ಇದನ್ನು ಶಾಲೆಯಲ್ಲಿ ಅನುಷ್ಠಾನಗೊಳಿಸಿದ ಕುರಿತು ಪರಿಶೀಲಿಸುವುದು ಸಂದರ್ಶನ ತಂಡದ ಕಾರ್ಯವಾಗಿದೆ.



