ಬೆಂಗಳೂರು: ಚನ್ನರಾಯಪಟ್ಟಣ ಪೊಲೀಸ್ ಠಾಣ ವ್ಯಾಪ್ತಿಯ ಬೂದಿಗೆರೆ ಕ್ರಾಸ್ ಬಳಿ ಇರುವ ಮನೆ ಒಂದಕ್ಕೆ ಐದು ಜನ ಡಕಾಯಿತರು ನಿನ್ನೆ ರಾತ್ರಿ ಮಧ್ಯರಾತ್ರಿ ನುಗ್ಗಿ ಮಾರಕಾಸ್ತ್ರಗಳಿಂದ ಬೆದರಿಸಿ ಸುಮಾರು ಐದು ಕೆಜಿ ಬೆಳ್ಳಿ ಆಭರಣಗಳನ್ನು ದರೋಡೆ ಮಾಡಿಕೊಂಡಿರುತ್ತಾರೆ.
ಮಂಜು ಅಲಿಯಾಸ್ ವಾಲೆ ಮಂಜ ಎಂಬುವರ ಮನೆಯಲ್ಲಿ ಈ ದರೋಡೆ ಕೃತ್ಯ ನಡೆದಿರುತ್ತದೆಬೆಂಗಳೂರು ಗ್ರಾಮಾಂತರ ಎಸ್ ಪಿ ಮಲ್ಲಿಕಾರ್ಜುನ್ ಬಾಲದಂಡೆ ರವರು ಸ್ಥಳಕ್ಕೆ ಭೇಟಿ ನೀಡಿರುತ್ತಾರೆ.ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಕಡಬಗೆರೆ ಕ್ರಾಸ್ ಬಳಿ ಸುಮಾರು 25 ವರ್ಷದ ಯುವಕನ ಕಲ್ಲು ಎತ್ತು ಹಾಕಿ ನಡೆದಿದೆ.
ಹೆಚ್ಚುವರಿ ಎಸ್ಪಿ ಪುರುಷೋತ್ತಮ್ ರವರು ಭೇಟಿ ನೀಡಿ ಕೊಲೆಯಾಗಿರುವ ವ್ಯಕ್ತಿ ಗ್ರನೈಟ್ ಕೆಲಸ ಮಾಡುವ ವ್ಯಕ್ತಿಯೆಂದು ಅನುಮಾನ ವ್ಯಕ್ತಪಡಿಸಿರುತ್ತಾರೆ ಮತ್ತು ಈ ಕೊಲೆ ಹಣಕ್ಕಾಗಿ ನಡೆಯುತ್ತಿರಬಹುದು ಎಂದು ಅಭಿಪ್ರಾಯಪಟ್ಟಿರುತ್ತಾರೆ ಹಾಗೂ ಶವದ ಬಳಿ ಐವತ್ತು ರೂಪಾಯಿ ದೊರೆತಿದೆ ಎಂದು ತಿಳಿಸಿದರು.