ಬೆಂಗಳೂರು: ಬೆಂಗಳೂರು ಕರಗ ಏಪ್ರಿಲ್ 1ರಂದು ರಾತ್ರಿ 12-30ಕ್ಕೆ ನಡೆಯಲಿದ್ದು, ಸಿಎಂಗೆ ಈಗಾಗಲೇ ನಾವು ಆಹ್ವಾನ ನೀಡಿದ್ದೇವೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ ಸಿಎಂ ಆಗಮಿಸಿದ್ದರು. ಚುನಾವಣೆ ಇದೆ ಆದರೂ ಕರಗ ಮಹೋತ್ಸವಕ್ಕೆ ಬರಲು ಪ್ರಯತ್ನಿಸುತ್ತೇನೆ ಎಂದು ಸಿಎಂ ಹೇಳಿದ್ದಾರೆ ಎಂದರು.
ಇAದು ಡಿಕೆ ಶಿವಕುಮಾರ್ಗೆ ಅಹ್ವಾನ ನೀಡಲು ಬಂದಿದ್ದೇನೆ. ಈ ಬಾರಿಯ ವಿಶೇಷ ಹೆಚ್ಚು ವಿದ್ಯುತ್ ದೀಪಾಲಂಕರ ಹಾಕಿದ್ದೇವೆ. ವಿಧಿವಿಧನಾದ ಎಲ್ಲವನ್ನು ಈಗಾಗಲೇ ಮಾಡ್ತಿದ್ದಾರೆ.



