ಮುಂಬೈ: ಐಪಿಎಲ್ 2024 ರ ಮಿನಿ ಹರಾಜು ಪ್ರಕ್ರಿಯೆ ಡಿಸೆಂಬರ್ 19 ರಂದು ದುಬೈನಲ್ಲಿ ನಡೆಯಲಿದೆ. ಈ ಮಿನಿ ಹರಾಜು ಪ್ರಕ್ರಿಯೆಗೆ ಮೊದಲು ಯಾವ ಆಟಗಾರರು ಯಾವ ತಂಡಕ್ಕೆ ಬಿಕರಿಯಾಗಬಹುದು ಎಂಬ ಬಗ್ಗೆ ತೀವ್ರ ಚರ್ಚೆಯಾಗುತ್ತಿದೆ.
ಕಳೆದ ಬಾರಿ ಐಪಿಎಲ್ ಹರಾ ಜಿನಲ್ಲಿ ಸ್ಯಾಮ್ ಕ್ಯುರೇನ್ ದಾಖಲೆಯ 18 ಕೋಟಿ ರೂ.ಗೆ ಬಿಕರಿಯಾಗಿದ್ದರು. ಇದು ಐಪಿಎಲ್ ಇತಿಹಾಸದಲ್ಲೇ ದುಬಾರಿ ಖರೀದಿಯಾಗಿತ್ತು. ಆದರೆ ಈ ಬಾರಿ ಆ ದಾಖಲೆಯೂ ಮುರಿಯುವ ಸಾಧ್ಯತೆಯಿದೆ.
ಮೂಲಗಳ ಪ್ರಕಾರ ಆಸ್ಟ್ರೇಲಿಯಾವನ್ನು ಏಕದಿನ ವಿಶ್ವಕಪ್ ಫೈನಲ್ ಶತಕ ಸಿಡಿಸಿ ಚಾಂಪಿಯನ್ ಮಾಡಿದ್ದ ಟ್ರಾವಿಸ್ ಹೆಡ್ ಗೆ ಈಗ ಭಾರೀ ಬೇಡಿಕೆಯಿದೆ.