ಹೈದರಾಬಾದ್: ರಾಮ್ ಗೋಪಾಲ್ ವರ್ಮಾ ಅವರು ಒಂದಿಲ್ಲೊAದು ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಾ, ಅಥವಾ ಬಿ-ಗ್ರೇಡ್ ಸಿನಿಮಾಗಳನ್ನು ನಿರ್ದೇಶಿಸುತ್ತಾ ಕಾಲ ಕಳೆಯುತ್ತಿದ್ದಾರೆ. ಮೊದಲಿನಿಂದಲೂ ವಿವಾದಗಳನ್ನು ತಮ್ಮ ಮೇಲೆ ಎಳೆದುಕೊಳ್ಳುವ ಅಭ್ಯಾಸವಿರುವ ವರ್ಮಾ ಇದೀಗ ಮತ್ತೊಂದು ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ.
ರಾಮ್ ಗೋಪಾಲ್ ವರ್ಮಾ ವಿರುದ್ಧ ನಿವೃತ್ತ ಐಪಿಎಸ್ ಅಧಿಕಾರಿಯೊಬ್ಬರು ದೂರು ನೀಡಿದ್ದಾರೆ. ರಾಮ್ ಗೋಪಾಲ್ ವರ್ಮಾ ನಿರ್ಮಾಣ ಮಾಡಿ, ಅಗಸ್ತ÷್ಯ ವರ್ಮಾ ನಿರ್ದೇಶನ ಮಾಡಿರುವ `ದಹನಂ’ ಹೆಸರಿನ ವೆಬ್ ಸರಣಿ ೨೦೨೨ ರಲ್ಲಿ ಎಂಎಕ್ಸ್ ಪ್ಲೇಯರ್ನಲ್ಲಿ ಬಿಡುಗಡೆ ಆಗಿತ್ತು. ೧೯೯೦ ರಲ್ಲಿ ನಡೆದ ನಕ್ಸಲ್ ಹೋರಾಟ ಮತ್ತು ನಕ್ಸಲರನ್ನು ಹತ್ತಿಕ್ಕಲು ಪೊಲೀಸರು ನಡೆದ ಆಪರೇಷನ್ ಕುರಿತಾದ ಕಥೆಯನ್ನು ಈ ವೆಬ್ ಸರಣಿ ಒಳಗೊಂಡಿತ್ತು.
ವೆಬ್ ಸರಣಿಯಲ್ಲಿ ನಟಿ ಐಶಾ ಕೊಪ್ಪಿಕರ್ ಅವರು ಐಪಿಎಸ್ ಅಧಿಕಾರಿಣಿ ಅಂಜನಾ ಸಿನ್ಹ ಪಾತ್ರದಲ್ಲಿ ನಟಿಸಿದ್ದಾರೆ. ಆದರೆ ಇದೀಗ ಸ್ವತಃ ಅಂಜನಾ ಸಿನ್ಹ ಅವರೇ ರಾಮ್ ಗೋಪಾಲ್ ವರ್ಮಾ ವಿರುದ್ಧ ಕೇಸು ದಾಖಲಿಸಿದ್ದು, ತಮ್ಮ ಅನುಮತಿ ಇಲ್ಲದೆ ತಮ್ಮ ಹೆಸರು, ವೃತ್ತಿಯನ್ನು ಬಳಸಿಕೊಳ್ಳಲಾಗಿದೆ ಎಂದು ಆರೋಪ ಮಾಡಿದ್ದಾರೆ.
`ದಹನಂ’ ವೆಬ್ ಸರಣಿ ಹಿಂಸೆ, ಲೈಂಗಿಕತೆಯಿAದ ಕೂಡಿದ್ದು, ನನ್ನ ಪಾತ್ರವನ್ನು ಅಂಥಹಾ ವೆಬ್ ಸರಣಿಯಲ್ಲಿ ಬಳಸಿಕೊಂಡಿರುವುದು ನನ್ನ ಘನತೆಗೆ ಧಕ್ಕೆ ತಂದAತಾಗಿದೆ ಎಂದು ಅಂಜನಾ ಆರೋಪಿಸಿದ್ದಾರೆ. ೧೯೯೦ರ ಬ್ಯಾಚ್ನ ಅಧಿಕಾರಿ ಆಗಿದ್ದ ಅಂಜನಾ ಅವರು ರಾಯಲಸೀಮೆ ಜಿಲ್ಲೆಗಳಲ್ಲಿ ಎಸ್ಪಿ ಆಗಿ ಬಳಿಕ ಡಿಐಜಿ, ಎಡಿಜಿಪಿ ಆಗಿ ಕಾರ್ಯ ನಿರ್ವಹಿಸಿದ್ದರು. ಖಡಕ್ ಮಹಿಳಾ ಅಧಿಕಾರಿ ಎಂಬ ಹೆಸರನ್ನು ಅವರು ಪಡೆದುಕೊಂಡಿದ್ದರು. ಇದೀಗ ಅವರು ನಿವೃತ್ತರಾಗಿದ್ದು, ಈಗ ರಾಷ್ಟಿçÃಯ ಉದ್ಯಮ ಭದ್ರತೆ ಅಕಾಡೆಮಿಯ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
`ದಹನಂ’ ವೆಬ್ ಸರಣಿ ಮಾಡುವ ಮುಂಚೆ ಆ ತಂಡದ ಯಾರೊಬ್ಬರೂ ಸಹ ತಮ್ಮನ್ನು ಭೇಟಿ ಆಗಿಲ್ಲ, ನನ್ನ ಅನುಮತಿ ಇಲ್ಲದೆ ನನ್ನ ಹೆಸರು, ವೃತ್ತಿಯ ಐಡೆಂಟಿಟಿಯನ್ನು ಬಳಸಿಕೊಳ್ಳಲಾಗಿದೆ ಎಂದಿದ್ದಾರೆ ಅಂಜನಾ. ರಾಮ್ ಗೋಪಾಲ್ ವರ್ಮಾ `ದಹನಂ’ನ ನಿರ್ಮಾಪಕರಾಗಿದ್ದು, ಅವರ ವಿರುದ್ಧ ದೂರು ದಾಖಲಿಸಿದ್ದಾರೆ.



