ಟೆಹ್ರಾನ್: ಇರಾನ್ ಹಾಗೂ ಇಸ್ರೇಲ್ ಮಧ್ಯೆ ಯುದ್ಧ ೧೮ನೇ ದಿನಕ್ಕೆ ಕಾಲಿಟ್ಟಿದೆ. ಕಳೆದ ೨೪ ಗಂಟೆಗಳಲ್ಲಿ ಇರಾನ್ನ ೨೦೦ಕ್ಕೂ ಹೆಚ್ಚು ಮಿಲಿಟರಿ ನೆಲೆಗಳ ಮೇಲೆ ಇಸ್ರೇಲ್ ದಾಳಿ ನಡೆಸಿದೆ.
ಬ್ಯಾಲಿಸ್ಟಿಕ್ ಕ್ಷಿಪಣಿ ವ್ಯವಸ್ಥೆಗಳು, ಮಿಲಿಟರಿ ಪ್ರಧಾನ ಕಚೇರಿ, ರಕ್ಷಣಾ ವ್ಯವಸ್ಥೆಗಳು ಮತ್ತು ಶಸ್ತಾçಸ್ತç ಉತ್ಪಾದನೆ ಮತ್ತು ಸಂಗ್ರಹಣಾ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆದಿದೆ ಎಂದು ಇಸ್ರೇಲ್ ಸೇನೆ ತಿಳಿಸಿದೆ. ಇರಾನ್ ಕೂಡ ಸೌದಿ ಅರೇಬಿಯಾದ ವಿಮಾನ ನಿಲ್ದಾಣ ಸೇರಿ ೬ ಕಡೆ ಡ್ರೋನ್ಗಳ ಮೂಲಕ ದಾಳಿ ಮಾಡಿದ್ದು, ಭದ್ರತಾ ಪಡೆಗಳು ತಡೆದಿವೆ.
ಯುಎಇಯಲ್ಲಿ ದುಬೈ ಏರ್ಪೋರ್ಟ್ ಜೊತೆಗೆ ಫುಜೈರಾ ಬಂದರಿನ ಮೇಲೂ ಡ್ರೋನ್ ಅಟ್ಯಾಕ್ ಮಾಡಿದೆ. ಹೀಗಾಗಿ, ಫುಜೈರಾ ಬಂದರಿನಲ್ಲಿ ತೈಲ ಭರ್ತಿ ನಿಲ್ಲಿಸಲಾಗಿದೆ. ಅಬುದಾಬಿಯಲ್ಲಿ ಕಾರ್ ಮೇಲೆ ಮಿಸೈಲ್ ಬಿದ್ದು, ಓರ್ವ ಬಲಿಯಾಗಿದ್ದಾನೆ. ಅಲಿ ಖಮೇನಿ ಬಳಸುತ್ತಿದ್ದ ವಿಮಾನವನ್ನು ಇರಾನ್ ರಾಜಧಾನಿ ಟೆಹ್ರಾನ್ನ ಮೆಹರಾಬಾದ್ ಏರ್ಪೋರ್ಟ್ನಲ್ಲಿ ಇಸ್ರೇಲ್ ಧ್ವಂಸಗೊಳಿಸಿದೆ.
ಅಮೆರಿಕ, ಇಸ್ರೇಲ್ ಹಾಗೂ ಇರಾನ್ ನಡುವಿನ ದಾಳಿ-ಪ್ರತಿದಾಳಿ ಮುಂದುವರಿದಿದೆ. ಯುಎಇ ಏರ್ಪೋರ್ಟ್ ಅನ್ನು ಇರಾನ್ ಟಾರ್ಗೆಟ್ ಮಾಡಿದೆ. ದುಬೈ ಅಂತರರಾಷ್ಟಿçÃಯ ಏರ್ಪೋರ್ಟ್ ಮೇಲೆ ಇರಾನ್ ಡ್ರೋನ್ ದಾಳಿ ನಡೆಸಿದೆ. ಸಿವಿಲ್ ಡಿಫೆನ್ಸ್ ತಕ್ಷಣ ಕಾರ್ಯಪವೃತ್ತರಾಗಿ ಬೆಂಕಿಯನ್ನು ನಂದಿಸಿ, ಆ ಪ್ರದೇಶದಲ್ಲಿದ್ದ ತೈಲ ಟ್ಯಾಂಕರ್ಗಳಿಗೆ ಬೆಂಕಿ ಆವರಿಸದಂತೆ ಎಚ್ಚರ ವಹಿಸಿದೆ.
ದುಬೈನಲ್ಲಿನ ಸಂಘರ್ಷ ಪರಿಸ್ಥಿತಿಯಿಂದಾಗಿ ವಿಮಾನ ಸಂಚಾರದಲ್ಲಿ ಏರುಪೇರಾಗಿದೆ. ವಿಶ್ವದ ಅತ್ಯಂತ ಜನನಿಬಿಡ ಏರ್ಪೋರ್ಟ್ ಮೇಲಿನ ದಾಳಿಯಿಂದಾಗಿ ಎಲ್ಲಾ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ೪೫ ವಿಮಾನಗಳ ಹಾರಾಟ ಕ್ಯಾನ್ಸಲ್ ಆಗಿದೆ. ೩೫೦ ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಕೊಚ್ಚಿ ವಿಮಾನ ಮತ್ತೆ ವಾಪಸ್ ಆಗಿದೆ. ತಿರುವನಂತಪುರA ಏರ್ಪೋರ್ಟ್ನಲ್ಲೂ ಏರ್ ಇಂಡಿಯಾ ವಾಪಸ್ ಬಂದಿದೆ.
ಇಸ್ರೇಲ್ ಇರಾನ್ನ ಉಡಾವಣಾ ಸಾಮರ್ಥ್ಯಗಳನ್ನು ದೊಡ್ಡ ಪ್ರಮಾಣದಲ್ಲಿ ಕುಗ್ಗಿಸುವಲ್ಲಿ ಯಶಸ್ವಿಯಾಗಿದೆ. ನಾವು ಇರಾನ್ನ ಆಕಾಶವನ್ನು ನಿಯಂತ್ರಿಸುತ್ತಿದ್ದೇವೆ ಎಂದು ಭಾರತದ ಇಸ್ರೇಲ್ ರಾಯಭಾರಿ ಕಚೇರಿ ಹೇಳಿದೆ. ರಾಜತಾಂತ್ರಿಕ ಮಾತುಕತೆಗೆ ಇರಾನ್ ಪ್ರಯತ್ನ ನಡೆಸುತ್ತಿದೆ ಎಂದು ಇಸ್ರೇಲ್ ಹೇಳಿದೆ. ಈ ಮಧ್ಯೆ ಇರಾನ್ ಯುಇಎ ಮೇಲೆ ದಾಳಿ ಮುಂದುವರಿಸಿದ್ದು, ಇವುಗಳನ್ನು ಭದ್ರತಾ ಪಡೆಗಳು ನಿಗ್ರಹಿಸುತ್ತಿವೆ. ಇರಾನ್ನಿಂದ ಉಡಾಯಿಸಲಾದ ಆರು ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ೨೧ ಮಾನವರಹಿತ ವೈಮಾನಿಕ ವಾಹನಗಳನ್ನು ಯುಎಇ ಯಶಸ್ವಿಯಾಗಿ ಹೊಡೆದುರುಳಿಸಿದೆ. ಈವರೆಗೂ ರಕ್ಷಣಾ ಪಡೆಗಳು ಒಟ್ಟು ೩೦೪ ಬ್ಯಾಲಿಸ್ಟಿಕ್ ಕ್ಷಿಪಣಿಗಳು, ೧,೬೨೭ ಯುಎವಿಗಳು ಮತ್ತು ೧೫ ಕ್ರೂಸ್ ಕ್ಷಿಪಣಿಗಳನ್ನು ಎದುರಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಡೊನಾಲ್ಡ್ ಟ್ರಂಪ್ಗೆ ಇರಾನ್ ಮತ್ತೆ ತಿರುಗೇಟು ನೀಡಿದೆ. ಕದನ ವಿರಾಮಕ್ಕಾಗಿ ನಾವು ಯಾವುದೇ ಪ್ರಸ್ತಾವನೆ ಇಟ್ಟಿಲ್ಲ ಎಂದಿದೆ. ಈ ಮಧ್ಯೆ ೧೭ ದಿನದ ಯುದ್ಧಕ್ಕೆ ಅಮೆರಿಕ ೧೨ ಬಿಲಿಯನ್ ಡಾಲರ್ ಖರ್ಚು ಮಾಡಿದೆ ಎಂದು ರಾಷ್ಟಿçÃಯ ಆರ್ಥಿಕ ಮಂಡಳಿಯ ನಿರ್ದೇಶಕ ಕೆವಿನ್ ಹ್ಯಾಸೆಟ್ ಹೇಳಿದ್ದಾರೆ.
೧೪ನೇ ದಿನಕ್ಕೆ ಕಾಲಿಟ್ಟ ಇರಾನ್-ಇಸ್ರೇಲ್ ಯುದ್ಧ ಇರಾನ್ನ ೨೦೦ಕ್ಕೂ ಹೆಚ್ಚು ಮಿಲಿಟರಿ ನೆಲೆಗಳ ಮೇಲೆ ಇಸ್ರೇಲ್ ದಾಳಿ



