ಇಸ್ಲಾಮಾಬಾದ್: ಎರಡು ವಾರಗಳ ಕದನ ವಿರಾಮ ಘೋಷಿಸಿದ ಬೆನ್ನಲ್ಲೇ ಶಾಂತಿಮಾತುಕತೆಗಾಗಿ ಇರಾನ್ ಹಾಗೂ ಅಮೆರಿಕ ದೇಶಗಳ ನಿಯೋಗ ಪಾಕಿಸ್ತಾನದ ಇಸ್ಲಾಮಾಬಾದ್ಗೆ ತಲುಪಿದೆ.
ಈಗಾಗಲೇ ಇಸ್ಲಮಾಬಾದ್ ತಲುಪಿದ್ದ 71 ಸದಸ್ಯರ ಇರಾನ್ ನಿಯೋಗದ ಬೆನ್ನಲ್ಲೇ ಅಮೆರಿಕಾದ ಉಪಾಧ್ಯಕ್ಷ ಜೆಡಿಯು ವ್ಯಾನ್ಸ್ ನೇತೃತ್ವದ ನಿಯೋಗ 11 ಗಂಟೆ ಸುಮಾರಿಗೆ ಇಸ್ಲಮಾಬಾದ್ಗೆ ಆಗಮಿಸಿದೆ.
ನಿಯೋಗಕ್ಕೆ ಮಿನಾಬು-168 ಎಂದು ಹೆಸರಿಟ್ಟಿದೆ. ಇರಾನ್ ದೇಶದ ಮಿನಾಬ್ನ ಶಾಲೆಯ ಮೇಲೆ ಇಸ್ರೇಲ್ ಅಮೆರಿಕ ದಾಳಿ ನಡೆಸಿ 168 ಮಕ್ಕಳ ಸಾವಿಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಮಕ್ಕಳ ಸ್ಮರಣಾರ್ಥ ಇರಾನ್ ನಿಯೋಗಕ್ಕೆ ಮಿನಾಬು ಎಂದು ಹೆಸರಿಟ್ಟಿದೆ. ಸಂಧಾನ ಮಾತುಕತೆ ಆರಂಭಕ್ಕೂ ಮುನ್ನಾ ಎರಡು ದೇಶಗಳ ನಿಯೋಗ ಮೊದಲಿಗೆ ಪಾಕ್ ಪ್ರಧಾನಿ ಶಬಾಜ್ ನವಾಜ್ ಷರೀಫ್ ರೊಂದಿಗೆ ಮಾತುಕತೆ ನಡೆಸಲಿದ್ದಾರೆ. ತದನಂತರ ಎರಡು ದೇಶಗಳು ಮುಖಾಮುಖಿಯಾಗಲಿವೆ.
ಮಾತುಕತೆಗೂ ಮುನ್ನ ಇರಾನ್ ತನ್ನ ಷರತ್ತು ಪೂರೈಸಬೇಕು ಎಂಬ ಪಟ್ಟಿನಿಂದ ಹಿಂದೆ ಸರಿದಿಲ್ಲ. ಮೊದಲಿಗೆ ಲೆಬನಾನ್ ಮೇಲೆ ಇಸ್ರೇಲ್ ಯುದ್ಧ ನಿಲ್ಲಬೇಕು, ಪ್ರೀಜ್ ಮಾಡಿರುವ ಹಣವನ್ನು ಬಿಡುಗಡೆಗೊಳಿಸಬೇಕು ಎಂಬ ಪ್ರಮುಖ ಷರತ್ತುಗಳು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಪಟ್ಟು ಹಿಡಿದಿದೆ. ಇರಾನ್ ತಮ್ಮ ಪಟ್ಟಿನಿಂದ ಹಿಂದೆ ಸರಿಯದಿದ್ದಲ್ಲಿ ಸಂಧಾನ ಮಾತುಕತೆ ಆರಂಭವಾಗುವುದು ಇಲ್ಲವೋ ಎಂಬ ಜಿಜ್ಞಾಸೆ ಹಲವು ದೇಶಗಳನ್ನು ಕಾಡತೊಡಗಿದೆ.
ನಗರಾದ್ಯಂತ ಬಿಗಿ ಭದ್ರತೆ
ಇಸ್ಲಾಮಾಬಾದ್: ಇರಾನ್ ಅಮೆರಿಕ ಯುದ್ಧ ನಡೆಯುತ್ತಿರುವ ಹಿನೆಲೆಯಲ್ಲಿ ಇಂದು ಪಾಕಿಸ್ತಾನದಲ್ಲಿ ಇರಾನ್ ಅಮೆರಿಕದ ನಡುವೆ ಶಾಂತಿಮಾತಕದ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಇಸ್ಲಾಮಬಾದ್ ನಗರವನ್ನು ಸಂಪೂರ್ಣವಾಗಿ ಲಾಕ್ಡೌನ್ ಮಾಡಲಾಗಿದೆ.
ನಾಯಕರ ಸುರಕ್ಷತೆ ದೃಷ್ಟಿಯಿಂದ ನಗರದಲ್ಲಿ ಸೆಕ್ಯೂರಿಟಿ ಟೈಟ್ ಮಾಡಲಾಗಿದೆ ಮನೆಗಳಿಂದ ಯಾರು ಹೊರಗಡೆ ಬರದಂತೆ ಸರ್ಕಾರ ಸೂಚನೆ ನೀಡಿದೆ. ನಗರದ ಎಲ್ಲಾ ಬೀದಿಗಳಲ್ಲಿ ಪೊಲೀಸರು ಮತ್ತು ಸೇನೆಯನ್ನು ನಿಯೋಜನೆ ಮಾಡಲಾಗಿದೆ. ಸಂಧಾನ ಸಭೆ ನಡೆಯುವ ಸೆರೆನಾ ಹೋಟೆಲ್ಗೆ ಸರ್ಪಗಾವಲು ಇದ್ದು, ಪೊಲೀಸರು ಹಾಗೂ ಸೇನೆಯನ್ನು ನಿಯೋಜನೆ ಮಾಡಲಾಗಿದೆ. ಸೆರೆನ ಹೋಟೆಲ್ ಸುತ್ತಮುತ್ತ ಸೆಕ್ಯೂರಿಟಿ ಟೈಟ್ ಮಾಡಲಾಗಿದೆ.
ಶಾಂತಿ ಮಾತುಕತೆ ಪಾಕಿಸ್ತಾನ ತಲುಪಿದ ಇರಾನ್-ಅಮೆರಿಕ ನಿಯೋಗ



