ತೆಹ್ರಾನ್: ಕಳೆದ ಐದು ವಾರಗಳಿಂದ ನಡೆಯುತ್ತಿರುವ ಭೀಕರ ಯುದ್ಧವು ಈಗ ಇರಾನ್ನ ಮೂಲಸೌಕರ್ಯಗಳ ಮೇಲೆ ನೇರ ಪರಿಣಾಮ ಬೀರಲಾರಂಭಿಸಿದೆ. ಇರಾನ್ನ ಕರಾಜ್ ಪ್ರದೇಶದಲ್ಲಿರುವ, ತೆಹ್ರಾನ್ ಅನ್ನು ಸಂಪರ್ಕಿಸುವ ಅತ್ಯಾಧುನಿಕ ಹಾಗೂ ಅತಿ ಎತ್ತರದ `ಬಿ1′ ಸೇತುವೆಯು ಅಮೆರಿಕ ಮತ್ತು ಇಸ್ರೇಲಿ ಪಡೆಗಳ ವೈಮಾನಿಕ ದಾಳಿಗೆ ಸಿಲುಕಿ ಅರ್ಧದಷ್ಟು ಕುಸಿದು ಬಿದ್ದಿದೆ.
ಸೇತುವೆಯ ಮಧ್ಯಭಾಗ ಕುಸಿಯುತ್ತಿರುವ ಮತ್ತು ಹೊಗೆ ಏಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸ್ವತಃ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ಇರಾನ್ ಮೇಲೆ ಇನ್ನಷ್ಟು ಒತ್ತಡ ಹೇರುವ ಸ್ಪಷ್ಟ ಸೂಚನೆ ನೀಡಿದ್ದಾರೆ.
ಮೊದಲ ಬಾರಿ ದಾಳಿ ನಡೆದಾಗ ಸೇತುವೆ ಹಾನಿಗೊಳಗಾಯಿತು ಮತ್ತು ಇಬ್ಬರು ನಾಗರಿಕರು ಮೃತಪಟ್ಟರು. ಎರಡುನೇ ದಾಳಿ: ರಕ್ಷಣಾ ತಂಡಗಳು ಸ್ಥಳಕ್ಕೆ ಆಗಮಿಸಿದಾಗ ಮತ್ತೆ ದಾಳಿ ನಡೆಸಲಾಯಿತು.ಈ ಘಟನೆಯಲ್ಲಿ ಒಟ್ಟು 8 ಮಂದಿ ಸಾವನ್ನಪ್ಪಿದ್ದು, 95ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ದಾಳಿಯ ನಂತರ ಇಡೀ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ `ಟ್ರೂತ್ ಸೋಶಿಯಲ್’ ಖಾತೆಯಲ್ಲಿ ವಿಡಿಯೋ ಹಂಚಿ
ಕೊಂಡು ಇರಾನ್ಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
“ಇರಾನ್ನ ಅತಿದೊಡ್ಡ ಸೇತುವೆ ನೆಲಸಮವಾ ಗಿದೆ, ಇದನ್ನು ಇನ್ಮುಂದೆ ಎಂದಿಗೂ ಬಳಸಲು ಸಾಧ್ಯವಿಲ್ಲ. ಇದು ಕೇವಲ ಆರಂಭವಷ್ಟೇ, ಮುಂದೆ ಇನ್ನೂ ದೊಡ್ಡ ದಾಳಿಗಳು ಕಾದಿವೆ!” ಎಂದು ಅವರು ಬರೆದಿದ್ದಾರೆ. ಅಲ್ಲದೆ, ಮುಂದಿನ ಎರಡೂವರೆ ವಾರಗಳಲ್ಲಿ ಇರಾನ್ ಮೇಲೆ ಮತ್ತಷ್ಟು ಕಠಿಣ ದಾಳಿ ನಡೆಸುವ ಮುನ್ಸೂಚನೆ ನೀಡಿರುವ ಅವರು, ತಕ್ಷಣವೇ ಒಪ್ಪಂದಕ್ಕೆ ಬರುವಂತೆ ಇರಾನ್ಗೆ ಸೂಚಿಸಿದ್ದಾರೆ.
ಅಮೆರಿಕದ ಭೀಕರ ವೈಮಾನಿಕ ದಾಳಿಗೆ ಇರಾನ್ನ ಅತಿ ಎತ್ತರದ `ಬಿ1′ ಸೇತುವೆ ಧ್ವಂಸ



