ಟೆಹ್ರಾನ್: ಅಮೆರಿಕದ ಕದನ ವಿರಾಮಕ್ಕೆ ಒಪ್ಪದ ಇರಾನ್ ಮೇಲೆ ಭೀಕರ ದಾಳಿಯ ಎಚ್ಚರಿಕೆಯನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊಟ್ಟಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೇ ಇರಾನ್ಗೆ ದೊಡ್ಡ ಆಘಾತ ಎದುರಾಗಿದೆ. ಇರಾನ್ನ ಸರ್ವೋಚ್ಛ ನಾಯಕ ಮೊಜ್ತಬಾ ಖಮೇನಿ ಪ್ರಜ್ಞಾಹೀನರಾಗಿದ್ದಾರೆ ಎಂದು ಇಸ್ರೇಲ್-ಅಮೆರಿಕ ಗುಪ್ತಚರ ಮೂಲಗಳನ್ನಾಧರಿಸಿ ಮಾಧ್ಯಮಗಳು ವರದಿ ಮಾಡಿವೆ.
ಮೊಜ್ತಬಾ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಾರೆ. ಸದ್ಯ ಅವರನ್ನ ಕೋಮ್ ನಗರದ ರಹಸ್ಯ ಸ್ಥಳದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಮೆರಿಕ ದಾಳಿ ಎಚ್ಚರಿಕೆ ನಡುವೆಯೇ ಈ ಘಟನೆ ಸಂಭವಿಸಿದ್ದು, ನಾಯಕತ್ವದ ಬಗ್ಗೆ ಪ್ರಶ್ನೆಗಳೂ ಎದ್ದಿವೆ. ಆದರೆ ಈ ಬಗ್ಗೆ ಇರಾನ್ ಸರ್ಕಾರವಾಗಲಿ, ಸೇನೆಯಾಗಲಿ ಅಧಿಕೃತ ಮಾಹಿತಿ ಹಂಚಿಕೊAಡಿಲ್ಲ.
ಅಮೆರಿಕ ಮತ್ತು ಇಸ್ರೇಲ್ ಗುಪ್ತಚರ ಸಂಸ್ಥೆಯ ಮೂಲಗಳನ್ನಾ ಧರಿಸಿ ವರದಿ ಮಾಡಲಾಗಿದೆ. ಗಲ್ಫ್ ರಾಷ್ಟçಗಳೊಂದಿಗೆ ಹಂಚಿಕೊಳ್ಳಲಾದ ಮಾಹಿತಿ ಪ್ರಕಾರ, ಮೊಜ್ತಬಾ ಖಮೇನಿ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಾರೆ. ಗಂಭೀರ ವೈದ್ಯಕೀಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಕೋಮ್ ನಗರದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದರಿಂದಾಗಿ ಇರಾನ್ ಆಡಳಿತವು ಯುದ್ಧಕ್ಕೆ ಸಂಬAಧಿಸಿದ ಮುಂದಿನ ನಿರ್ಧಾರ ತೆಗೆದುಕೊಳ್ಳಲು ಅಥವಾ ಜವಾಬ್ದಾರಿಗಳನ್ನ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ.
ಪ್ರಜ್ಞಾಹೀನ ಸ್ಥಿತಿಯಲ್ಲಿ ಇರಾನ್ನ ಸರ್ವೋಚ್ಛ ನಾಯಕ ಮೊಜ್ತಬಾ ಖಮೇನಿ?



