ಮಳವಳ್ಳಿ: ಪಟ್ಟಣದ ಸಾರಿಗೆ ಬಸ್ ನಿಲ್ದಾಣದ ಮುಖ್ಯದ್ವಾರದಲ್ಲಿ ಪ್ರಯಾಣಿಕರ ಅಪಾಯಕ್ಕೆ ಕಾದಿದೆ ಕಬ್ಬಿಣದ ಸರಳುಗಳು. ಸಾರಿಗೆ ಬಸ್ ನಿಲ್ದಾಣ ನಿಲ್ದಾಣಕ್ಕೆ ಹೋಗುವ ಮುಖ್ಯ ದ್ವಾರದಲ್ಲಿ ಕಬ್ಬಿಣದ ಸರಳುಗಳು ಮೇಲೆ ಎದ್ದಿದ್ದು ಇದು, ಪ್ರಯಾಣಿಕರ ಕಾಲಿಗೆ ಚುಚ್ಚಿದರೆ ಪ್ರಾಣ ಪಕ್ಷಿ ಹಾರಿಹೋಗುವ ಸಂದರ್ಭ ಎದುರಾಗಿದೆ.
ಮಧುಮೇಹ ಇರುವ ರೋಗಿಗಳಿಗೆ ಏನಾದರೂ ಈ ಸರಳುಗಳು ಚುಚ್ಚಿದರೆ ಅವರ ಕಾಲು ಯಾವ ಸ್ಥಿತಿಗೆ ಹೋಗಬಹುದು ಎಂಬುದನ್ನು ಆ ದೇವರೇ ಬಲ್ಲ. ಈ ಸಾರಿಗೆ ಬಸ್ ನಿಲ್ದಾಣದಿಂದ ಬೆಂಗಳೂರು ರಾಜ್ಯಧಾನಿ ಮೈಸೂರು ಮಂಡ್ಯ ಚಾಮರಾಜನಗರ ಹಲವು ಜಿಲ್ಲೆಗಳಿಗೆ ಹೋಗುವ ಕೇಂದ್ರ ಸ್ಥಾನವಾಗಿರುವುದರಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಸಾವಿರಾರು ಮಕ್ಕಳು ಶಾಲಾ ಕಾಲೇಜುಗಳಿಗೆ ಸಾರಿಗೆ ಬಸ್ ನಿಲ್ದಾಣಕ್ಕೆ ಬರುವುದರಿಂದ ಅವರುಗಳಿಗೂ ಸಹ ಕಬ್ಬಿಣದ ಸರಳಿನ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ.
ಪ್ರತಿನಿತ್ಯ ಓಡಾಡುವ ಶಾಲಾ ಕಾಲೇಜ್ ಮಕ್ಕಳಿಗೆ ಪ್ರಯಾಣಿಕರಿಗೆ ಈ ಸರಳು ಮೇಲೆದ್ದಿರುವ ಗೊತ್ತಿರುವ ವಿಚಾರವಾಗಿದೆ ಅವರು ಬಹಳ ಎಚ್ಚರಿಕೆಯಿಂದ ಸರಳು ಮೇಲಿದ್ದಿರುವ ಪಕ್ಕದಲ್ಲಿ ಸಂಚರಿಸುತ್ತಾರೆ ಆದರೆ ಹೊಸದಾಗಿ ಬರುವ ಪ್ರಯಾಣಿಕರಿಗೆ ಈ ಅವಾಂತರ ಸರಳಿನವಾಂತರ ಗೊತ್ತಿರುವುದಿಲ್ಲ.
ಅವರ ಪರಿಸ್ಥಿತಿ ಏನಾಗಬಹುದೆಂಬುದನ್ನು ನಾಗರಿಕರು ಊಹಿಸಿಕೊಳ್ಳಬೇಕಾಗಿದೆ. ಅಲ್ಲದೆ ಸಾರಿಗೆ ಬಸ್ಗಳಿಗೂ ಸಹ ಸರಳಿನ ಅವಾಂತರ ತಪ್ಪಿದ್ದಲ್ಲ.ಎಲ್ಲಿ ಬಸ್ ಪಂಚರ್ ಆಗುವುದೋ ಎಂಬ ಆತಂಕದಲ್ಲಿಚಾಲಕರು ತಮ್ಮ ಬಸ್ಸುಗಳನ್ನು ನಿಧಾನವಾಗಿ ಚಲಿಸಿ ಮುಂದೆ ಹೋಗುವ ಸಂದರ್ಭ ಎದುರಾಗಿದೆ.ಮೇಲೆ ಬಂದಿರುವ ಸರಳನ್ನು ಸರಿಪಡಿಸಲು ಇಲ್ಲಿನ ಸಾರಿಗೆ ನಿಲ್ದಾಣದ ಆಡಳಿತವು ಕಂಡರೂ ಕಾಣದಂತೆ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಕೂಡಲೇ ಸಾರಿಗೆ ನಿಲ್ದಾಣದ ಆಡಳಿತವು ಮೇಲೆ ಎದ್ದಿರುವ ಪ್ರಯಾಣಿಕರಿಗೆಸರಳನ್ನು ಸರಿಪಡಿಸಿ ಪ್ರಯಾಣಿಕರ ರಕ್ಷಣೆಗೆ ಹಾಗೂ ಬಸ್ ಗಳ ಚಕ್ರಗಳನ್ನು ರಕ್ಷಿಸುವಲ್ಲಿ ಮುಂದಾಗುವರೆ? ಎಂಬುದನ್ನು ಕಾದು ನೋಡಬೇಕಾಗಿದೆ.