ಬೈರುತ್/ಜೆರುಸಲೇಂ: ಲೆಬನಾನ್ ರಾಜಧಾನಿ ಬೈರುತ್ನಲ್ಲಿ ಇಸ್ರೇಲ್ ತನ್ನ ವಾಯುದಾಳಿಯನ್ನು ತೀವ್ರಗೊಳಿಸಿದ್ದು, ಹಿಜ್ಬುಲ್ಲಾ ಸಂಘಟನೆಯ ಪ್ರಮುಖ ಕಾರ್ಯಾಚರಣೆಗಾರನನ್ನು ಹತ್ಯೆ ಮಾಡಿರುವುದಾಗಿ ಇಸ್ರೇಲ್ ವಾಯುಪಡೆ ಇಂದು ಅಧಿಕೃತವಾಗಿ ಘೋಷಿಸಿದೆ.
ಬೈರುತ್ನ ದಕ್ಷಿಣ ಉಪನಗರಗಳಲ್ಲಿ ಹಿಜ್ಬುಲ್ಲಾ ಅಡಗುತಾಣಗಳನ್ನು ಗುರಿಯಾಗಿಸಿ ಇಸ್ರೇಲ್ ಯುದ್ಧ ವಿಮಾನಗಳು ಸರಣಿ ಬಾಂಬ್ ದಾಳಿ ನಡೆಸಿವೆ. ಈ ದಾಳಿಯಲ್ಲಿ ಹಿಜ್ಬುಲ್ಲಾದ ಪ್ರಮುಖ ಕಮಾಂಡರ್ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ಪ್ರತಿಪಾದಿಸಿದೆ.
ಕೇವಲ ವ್ಯಕ್ತಿಗಳನ್ನಷ್ಟೇ ಅಲ್ಲದೆ, ಜನವಸತಿ ಪ್ರದೇಶಗಳ ಕೆಳಗೆ ಅಡಗಿಸಿಡಲಾಗಿದ್ದ ಹಿಜ್ಬುಲ್ಲಾದ ಶಸ್ತಾçಸ್ತç ಸಂಗ್ರಹಾಗಾರಗಳು ಮತ್ತು ಕ್ಷಿಪಣಿ ಉಡಾವಣಾ ಕೇಂದ್ರಗಳ ಮೇಲೆ ದಾಳಿ ನಡೆಸಿರುವುದಾಗಿ ಇಸ್ರೇಲ್ ಹೇಳಿಕೊಂಡಿದೆ.
ದಾಳಿಯಿAದಾಗಿ ಬೈರುತ್ ನಗರದಾದ್ಯಂತ ಭಾರಿ ಸ್ಫೋಟದ ಶಬ್ದ ಕೇಳಿಬಂದಿದ್ದು, ದಟ್ಟವಾದ ಹೊಗೆ ಆವರಿಸಿದೆ. ಈ ದಾಳಿಯಲ್ಲಿ ಹತ್ತಾರು ಮಂದಿ ನಾಗರಿಕರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವಿನ ಸಂಘರ್ಷವು ಕಳೆದ ಕೆಲವು ದಿನಗಳಿಂದ ತಾರಕಕ್ಕೇರಿದೆ. ಇಸ್ರೇಲ್ ತನ್ನ ಉತ್ತರ ಗಡಿಯಲ್ಲಿರುವ ಜನರನ್ನು ಮರಳಿ ಮನೆಗೆ ಕಳುಹಿಸುವ ಉದ್ದೇಶದಿಂದ ಹಿಜ್ಬುಲ್ಲಾದ ಶಕ್ತಿಯನ್ನು ಕುಂದಿಸಲು ಈ `ಸರ್ಜಿಕಲ್ ಸ್ಟೆçöÊಕ್’ ಮಾದರಿಯ ದಾಳಿಗಳನ್ನು ನಡೆಸುತ್ತಿದೆ. ಇತ್ತೀಚೆಗಷ್ಟೇ ಅಮೆರಿಕವು ಇರಾನ್ನ ತೈಲ ಕೇಂದ್ರಗಳ ಮೇಲೆ ದಾಳಿ ನಡೆಸಿದ ಬೆನ್ನಲ್ಲೇ ಇಸ್ರೇಲ್ ಈ ಕ್ರಮ ಕೈಗೊಂಡಿರುವುದು ಮಧ್ಯಪ್ರಾಚ್ಯದಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ.



