ಬೆಂಗಳೂರು: 2024 ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೆ.ಎಸ್.ಈಶ್ವರಪ್ಪರ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಸ್ಫರ್ಧೆ ಖಚಿತ ಎಂಬುದು ದೃಢವಾಗಿದೆ. ನಿನ್ನೆ ದೆಹಲಿಗೆ ತೆರಳಿದ್ದ ಕೆ.ಎಸ್. ಈಶ್ವರಪ್ಪರನ್ನು ಅಮಿತ್ ಶಾ ಭೇಟಿ ಮಾಡದೇ ಇರಲು ಕಾರಣವೇನು? ಎಂಬುದು ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದ್ದು, ಆನೆ ತನ್ನ ತಲೆಯ ಮೇಲೆ ತಾನೇ ಮಣ್ಣು ಹಾಕಿಕೊಳ್ತು ಎಂಬ ಗಾದೆಯ ಮಾತಿನಂತೆ ಈಶ್ವರಪ್ಪರ ರಾಜಕೀಯ ಜೀವನ ಆಗಿ ಹೋಗಿದೆ.
ಇದು ವೆರಿ ಇಂಟರೆಸ್ಟಿಂಗ್ ಸ್ಟೋರಿ.ಕೆ.ಎಸ್.ಈಶ್ವರಪ್ಪ. ಮಾಜಿ ಡಿಸಿಎಂ ಹಾಗೂ ಬಿಜೆಪಿ ಮುಖಂಡರಾಗಿದ್ದು, ಅಮಿತ್ ಶಾ ಅವರ ಆಹ್ವಾನದ ಮೇರೆಗೆ ನಿನ್ನೆ ದೆಹಲಿಗೆ ತೆರಳಿದ್ರು. ಅಮಿತ್ ಶಾ ಅವರೇ ಆಹ್ವಾನಿಸಿ, ಅವರೇ ಭೇಟಿಯಾಗದೇ ಇರಲು ಇದೇ ಮಹತ್ವದ ಕಾರಣವಿದೆ ಎಂಬುದು ಇದೀಗ ತಿಳಿದು ಬಂದಿದೆ.
ಅಷ್ಟಕ್ಕೂ ಈಶ್ವರಪ್ಪರ ವಿಚಾರದಲ್ಲಿ ಆಗಿದ್ದೇನು? ಎಂಬುದು ನೋಡುವುದಾದ್ರೆ,
ಕಳೆದೆರಡು ದಿನಗಳ ಹಿಂದೆ ರಾಜ್ಯಕ್ಕೆ ಅಮಿತ್ ಶಾ ಆಗಮಿಸಿದ್ರು. ಅಮಿತ್ ಶಾ ಆಗಮನದ ವೇಳೆ ರಾಜ್ಯದ ವಿವಿಧೆಡೆ ಇದ್ದ ಬಂಡಾಯ ಶಮನಗೊಳಿಸಿದ ಅಮಿತ್ ಶಾ, ಅವರ ಆಗಮನದ ಸಂದರ್ಭದಲ್ಲಿಯೇ ಕೆ.ಎಸ್. ಈಶ್ವರಪ್ಪರಿಗೂ ಕರೆ ಮಾಡಿದ್ದಾರೆ. ದೆಹಲಿಗೆ ಬರುವಂತೆ ಆಹ್ವಾನಿಸಿದ್ದಾರೆ. ಮರುದಿನವೇ ದೆಹಲಿಗೆ ದೌಡಾಯಿಸಿದ ಕೆ.ಎಸ್.ಈಶ್ವರಪ್ಪರನ್ನು ಅಮಿತ್ ಶಾ ಭೇಟಿಯೇ ಮಾಡಿಲ್ಲ.
ನಾನು ನಿಮ್ಮನ್ನು ಭೇಟಿ ಮಾಡುವುದಿಲ್ಲ ಎಂದು ಖಡಕ್ ಆಗಿ ಈಶ್ವರಪ್ಪರಿಗೆ ತಿಳಿಸಿದ್ದಾರೆ. ಇದಕ್ಕೆ ಕಾರಣ ಏನೆಂದರೆ, ಬಳಿಕ ಶಿವಮೊಗ್ಗದಲ್ಲಿ ಈಶ್ವರಪ್ಪ ನಡೆಸಿದ ಒಂದು ಸುದ್ದಿಗೋಷ್ಠಿ. ಆ ಸುದ್ದಿಗೋಷ್ಠಿಯಲ್ಲಿ ಯಾರೇ ಏನೇ ಹೇಳಿದ್ರೂ ನಾನು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುವುದು ಶತಸಿದ್ಧ ಎಂದು ಈಶ್ವರಪ್ಪ ಗುಡುಗಿದ್ರು.
ಈಶ್ವರಪ್ಪರ ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಅಮಿತ್ ಶಾ, ದೆಹಲಿಗೆ ಈಶ್ವರಪ್ಪ ಹೋಗುತ್ತಿದ್ದಂತೆ ಭೇಟಿ ಮಾಡಲು ಸಾಧ್ಯವೇ ಇಲ್ಲ ಎಂಬುದನ್ನು ಖಚಿತಪಡಿಸಿದ್ದಾರೆ. ಅಮಿತ್ ಶಾ ರನಡೆಯಿಂದ ಬೇಸರಕ್ಕೊಳಗಾದ ಈಶ್ವರಪ್ಪ, ಸದ್ಯ ಅವರ ಹೇಳಿಕೆಯಿಂದಲೇ ಪೇಚಿಗೆ ಸಿಲುಕಿದ್ದಾರೆ ಎಂಬ ಮಾತು ಚರ್ಚೆಯಾಗುತ್ತಿದೆ.
ಆತುರದಲ್ಲಿ ಆಡಿದ ಆ ಒಂದು ಮಾತಿನಿಂದ ರಾಜಕೀಯವಾಗಿ ಪಕ್ಷದಿಂದ ದೂರವಾಗುವಂತಹ ಪರಿಸ್ಥಿತಿ ನಿರ್ಮಿಸಿದ್ದು, ಆನೆ ತನ್ನ ತಲೆಯ ಮೇಲೆ ತಾನೇ ಮಣ್ಣು ಹಾಕಿಕೊಳ್ತು ಎಂಬಂತಾಗಿದೆ ಈಶ್ವರಪ್ಪರ ರಾಜಕೀಯ ಭವಿಷ್ಯ ಎಂದು ಬಣ್ಣಿಸುತ್ತಿದ್ದಾರೆ.