ನೆಲಮಂಗಲ: ಇತ್ತೀಚೆಗೆ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ರಿಯಲ್ ಎಸ್ಟೇಟ್ ಉದ್ಯಮಿ ವೆಂಕಟ್ ರಾಜು ಎಂಬುವವರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿ ಮನೆ ಪರಿಶೀಲನೆ ಮಾಡಿದ್ದಾರೆ.
ಮನೆಯಲ್ಲಿ 25ಕೊಟ್ಟಿ ಹಣ ಇದೆ ಎಂಬ ಮಾಹಿತಿ ಮೇರೆಗೆ ಸುಮಾರು 6 ಕಾರುಗಳಲ್ಲಿ ಬಂದಿದ 20 ಐಟಿ ಅಧಿಕಾರಿಗಳ ತಂಡದಿಂದ ಮಂಗಳವಾರ ಮಧ್ಯಾಹ್ನ 1:00ಗೆ ಬಂದ ಅಧಿಕಾರಿಗಳು ರಾತ್ರಿ 9:00 ಗಂಟೆಯ ವರೆಗೂ ಶೋಧ ಕಾರ್ಯ ನಡೆಸಿದರೆ.ಬಳಿಕ ಮಾತನಾಡಿದ ವೆಂಕಟ್ ರಾಜು ಐಟಿ ಅಧಿಕಾರಿಗಳು ಮನೆ ಬಳಿ ಬಂದು ಬಾಗಿಲು ತೆಗೆಯಲು ತಿಳಿಸಿದಾಗ ನಮ್ಮ ಹೆಂಡತಿ ಯಾರೋ ಸುಳ್ಳು ಹೇಳುತ್ತಿದ್ದಾರೆ ಎಂದು ಭಯಪಟ್ಟು ಅರ್ಧಗಂಟೆ ಬಾಗಿಲು ತೆಗೆದಿರಲಿಲ್ಲ ಬಳಿಕ ಸ್ಥಳೀಯ ಪೊಲೀಸರು ಬಂದ ಮೇಲೆ ಧೈರ್ಯ ಬಂದು ಬಾಗಿಲು ತೆಗೆದರು.
ಮನೆಯನ್ನು ಪರಿಶೀಲನೆ ಮಾಡಿದ ಅಧಿಕಾರಿಗಳು ಮನೆಯಲ್ಲಿ ಇದ್ದ ಅನೇಕ ದಾಖಲಾತಿಗಳನ್ನು ಪರಿಶೀಲಿಸಿದ್ದಾರೆ.ಅಧಿಕಾರಿಗಳಿಗೆ ಮಹಾಲಕ್ಷ್ಮಿ ಪೂಜೆಗೆ ಇಡುತ್ತಿದ್ದ 50ಸಾವಿರ ಹಣ ಸೇರಿ ಒಟ್ಟು ಒಂದು ಲಕ್ಷದ 75 ಸಾವಿರ ಹಣದ ಜೊತೆಗೆ 200 ರಿಂದ 300 ಗ್ರಾಂ ಚಿನ್ನ ಸಿಕ್ಕಿದೆ 19ತಾರೀಕು ಕಚೇರಿಗೆ ಬಂದು ದಾಖಲೆ ನೀಡುವಂತೆ ಅಧಿಕಾರಿಗಳು ತಿಳಿಸಿದ್ದಾರೆ ಎಂದರು.