ಕನಕಪುರ: ರಾಜ ಮಹಾರಾಜರ ಕಾಲದಿಂದ ಸಂಗೀತ ಕಲೆಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ ಎಂದು ಸಂಗೀತ ವಿದ್ವಾನ್ ಡಾ.ಕೆ.ವರದರಂಗನ್ ರವರು ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಶ್ರೀ ಶಾರದಾ ಗಾನಸುಧಾ ಸಂಸ್ಥೆಯ ಪಿಟೀಲು ವಾದ್ಯ ಸಾಮ್ರಾಟ್, ಪದ್ಮಭೂಷಣ ಶ್ರೀ ಎಂ.ಎಸ್. ಗೋಪಾಲಕೃಷ್ಣನ್ ರವರ ಒಂಭತ್ತನೇ ವಾರ್ಷಿಕೋತ್ಸವ ಹಾಗೂ ಹನ್ನೂಂದನೇ ವರ್ಷದ ಸ್ಮರಣಾರ್ಥವಾಗಿ ಬೆಂಗಳೂರಿನ ಜಯನಗರದ ಶ್ರೀ ಜಗದ್ಗುರು ಶಿವರಾತ್ರೀಶ್ವ ರ ಸ್ವಾಮೀಜಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಗುರುವಿನ ಗುಲಾಮ ನಾಗುವ ತನಕ ದೂರೆಯದಮ್ಮ ಮುಕುತಿ ಎಂಬ ನಾಲ್ನುಡಿ ಇಂದಿಗೂ ಪ್ರಸ್ತುತ ವಾಗಿದ್ದು ಸಂಗೀತ ಕ್ಷೇತ್ರದಲ್ಲಿ ಗುರುವನ್ನು ಅನುಸರಿಸುವ ಮೂಲಕ ಸಂಗೀತ ಕಲೆ ಯನ್ನು ಕರಗತ ಮಾಡಿಕೂಳ್ಳಲು ಸಾದ್ಯ,ಸಂಗೀತ ವೆಂದರೆ ಸಂಪೂರ್ಣ ಗೀತ ತತ್ವ ಆಗಿದ್ದು ಶ್ರದ್ಧಾ ಭಕ್ತಿ ಯಿಂದ ಕಲಿಯಲು ಸಾದ್ಯ ಎಂದರು.
ಇಂದಿನ ಯುವ ಪೀಳಿಗೆ ಸಂಗೀತದ ಕಡೆ ಕಲಿಯುವ ಉತ್ಸಾಹ ತೂರಿದಾಗ ಕಲೆ ಉಳಿಯಲು ಸಾದ್ಯ ವೆಂದರು.ಕಾರ್ಯಕ್ರಮದಲ್ಲಿ ಸಂಗೀತ ವಿದ್ವಾನ್ ಈ. ರಾಮಕ್ಯಷ್ಣಾ ಚಾರಿ, ಸಿ.ಎನ್.ಧನಂಜಯ, ಮ್ಯದಂಗ ವಿದ್ವಾನ್ ಜಿ.ಎಲ್.ರಮೇಶ್, ಧ್ವನಿ ವರ್ಧಕರಾದ ರಾಮಚಂದ್ರ, ಪಾಕ ಪ್ರವೀಣರಾದ ಹೆಚ್.ಎನ್.ಗುರುರಾಜ್, ಶಿಕ್ಷಣ ಕ್ಷೇತ್ರದಲ್ಲಿ ಸಾದನೆ ಮಾಡಿದ ಚಿದಾನಂದ ಎ.ಕೆ.ಪಾಟೀಲ್, ಭರತನಾಟ್ಯ ಕಲಾವಿದೆ ಶ್ರೀಮತಿ ವಿಜಯಲಕ್ಷ್ಮಿ ರವರಿಗೆ ಸನ್ಮಾನಿಸಿ ಬಿರುದು ಬಾವಲಿಗಳ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಗೀತ ವಿದ್ವಾನ್ ಎಂ.ಎಸ್. ರಾಜೀವಲೋಚನ, ಆರ್.ಕೆ.ಪ್ರಸನ್ನಕುಮಾರ್, ಜಿ.ಎನ್.ಶ್ಯಾಮಸುಂದರ್, ಎಸ್.ಶಶಿಧರ್, ಸಂಗೀತ ವಿದುಷಿ ಶ್ರೀಮತಿ ಎಸ್.ಭ್ರಮರಾಂಬ ಸುಬ್ಬರಾಮು, ಶ್ರೀಮತಿ ವಿಜಯಶಂಕರ್, ಪತ್ರಕರ್ತರಾದ ಕೆ.ಪ್ರಕಾಶ್ ಉಪಸ್ಥಿತರಿದ್ದರು.ಬೆಳಿಗ್ಗೆ ಆರಂಭಗೂಂಡ ಸಂಗೀತ ಕಛೇರಿಯಲ್ಲಿ ಶ್ರೀಮತಿ ಜಿ.ಕೆ.ಶ್ರೀ ವಳ್ಳಿಶ್ರೀದರ್, ಇ.ರಾಮಕ್ಯಷ್ಣಾಚಾರಿ, ಎಂ.ಎಸ್. ರಾಜೀವಲೋಚನ ಹಾಗೂ ಸಿ.ಎನ್.ಧನಂಜಯ್ ರವರುಗಳಿಂದ ಗಾಯನ ನಡೆಯಿತು.ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಪದ್ಮಶ್ರೀ, ಕಲೈಲಾಮಣಿ ಪ್ರಶಸ್ತಿ ಪಡೆದ ಸಂಗೀತ ವಿದ್ವಾನ್ ಬಿ.ವಿ ವೆಂಕಟೇಶ್ ಮೂರ್ತಿ ರವರು ಪಿಟೀಲುವಾದನ ನಡೆಸಿಕೂಟ್ಟರು.ಕಾರ್ಯಕ್ರಮದ ನಿರೂಪಣೆಯನ್ನು ಮ್ಯದಂಗ ವಿದ್ವಾನ್ ಎಮ್.ಜಿ. ನರೇಶ್ಕುಮಾರ್ ಅಚ್ಚುಕಟ್ಟಾಗಿ ನಡೆಸಿ ಕೂಟ್ಟರು.