ಯಾವಾಗಲೂ ಬಿಸಿಲು ಹೆಚ್ಚು ಇರುವ ಪ್ರದೇಶಗಳು ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಕೊನೆಯ ಸ್ಥಾನ ಬರುತ್ತದೆ. ಅದಕ್ಕೆ ಅಧಿಕಾರಿಗಳು, ಶಿಕ್ಷಕರು ಹಾಗೂ ಉಪನ್ಯಾಸಕರು ಕಾರಣ ಅಲ್ಲ. ಆ ಪ್ರದೇಶದ ಬಿಸಿಲಿನ ತಾಪಮಾನವೇ ಕಾರಣ. ಅದಕ್ಕೆ ಶಾಲಾ – ಕಾಲೇಜು ಶೈಕ್ಷಣಿಕ ಅವಧಿಯನ್ನು ಜನವರಿಯಿಂದ ಆರಂಬಿಸಿ, ಡಿಸೆಂಬರ್ ತಿಂಗಳಿಗೆ ಮುಕ್ತಾಯಗೊಳಿಸಬೇಕು. ಆಗ ಅತಿ ಹೆಚ್ಚು ಬಿಸಿಲು ಪ್ರದೇಶಗಳು ಎಸ್.ಎಸ್.ಎಲ್.ಸಿ, ಪಿಯುಸಿಯಲ್ಲಿ ಮೊದಲ ಸ್ಥಾನ ಬರಲಿದೆ. ಒಂದು ವಿಷಯವನ್ನು ಎಲ್ಲಾ ವಿದ್ಯಾರ್ಥಿಗಳು ಪಾಸ್ ಆದ್ರೆ ಅದು ನೂರಕ್ಕೆ ನೂರರಷ್ಟು ಫಲಿತಾಂಶ. ನೂರು ವಿದ್ಯಾರ್ಥಿಗಳಲ್ಲಿ ಒಬ್ಬ ವಿದ್ಯಾರ್ಥಿ ಫೇಲ್ ಆದ್ರೆ 99% ಫಲಿತಾಂಶ. ಒಟ್ಟಿನಲ್ಲಿ ರಾಜ್ಯ ಸರ್ಕಾರ ಎಸ್.ಎಸ್.ಎಲ್.ಸಿ, ಪಿಯುಸಿ ಪರೀಕ್ಷೆಯನ್ನು ನವೆಂಬರ್ ಡಿಸೆಂಬರ್ ತಿಂಗಳಲ್ಲಿ ಚಳಿಗಾಲದಲ್ಲಿ ನಡೆಸಿದರೆ. ವಿಧ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯಬಹುದು. ಎಲ್ಲರೂ ಎಲ್ಲ ವಿಷಯ ಪಾಸ್ ಆಗಬಹುದು ನೂರಕ್ಕೆ ನೂರರಷ್ಟು ಫಲಿತಾಂಶ ಬರಲಿದೆ.
ನೂರರಷ್ಟು ಶಿಕ್ಷಣಕ್ಕೆ ವಿದ್ಯಾರ್ಹತೆಗೆ ತಕ್ಕಂತೆ ಕೆಲಸ ಸಿಗಲಿ
ಇಂದಿನ ಜಗತ್ತು ವಿದ್ಯಾರ್ಹತೆಗೆ ತಕ್ಕಂತೆ ಕೆಲಸ ನೀಡುತ್ತಿಲ್ಲ. ಅಂದರೆ ಡಾಕ್ಟರ್, ಲಾಯರ್, ಜರ್ನಲಿಸ್ಟ್ ಆಗಬೇಕಾದರೆ ಆಯಾ ಹುದ್ದೆಯ ಸ್ನಾತಕ ಅಥವಾ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಬೇಕು ಆದರೆ ಡಾಕ್ಟರ್ ಓದಿದೆ ಇರುವರು ಕ್ಲಿನಿಕ್ ಆರಂಭಿಸಿದ್ರೆ ರೋಗಿಯ ಕಥೆ ಏನಾಗಬಹುದು. ಒಬ್ಬ ವರದಿಗಾರ ಅಕ್ರಮ ಕ್ಲಿನಿಕ್, ನಕಲಿ ವೈದ್ಯನ ಬಗ್ಗೆ ವರದಿ ಮಾಡಲು ಆರಂಭಿಸಿದ್ದ ಆ ವರದಿಗಾರ ಆ ನಕಲಿ ವೈದ್ಯನ ಪ್ರಮಾಣಪತ್ರ ಕೇಳಿದ ಆದರೆ ಆ ನಕಲಿ ವೈದ್ಯ ವರದಿಗಾರನ ಪದವಿ ಪ್ರಮಾಣಪತ್ರ ಕೇಳಿದ ಅಲ್ಲಿಗೆ ಚಾಪ್ಟರ್ ಕ್ಲೋಸ್. ಇಂತಹ ಹತ್ತು ಹನ್ನೆರಡು ಘಟನೆಗಳು ಬೆಳಕಿಗೆ ಬರುತ್ತದೆ. ಆದರೂ ಏನೂ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ನಕಲಿಗಳ ಹಾವಳಿ ಹೆಚ್ಚಾಗಿದೆ ಅಥವಾ ನಡೆಯುತ್ತಿದೆ. ಆಯಾ ಹುದ್ದೆಗೆ ತಕ್ಕಂತೆ ಆಯಾ ಆಯಾ ಸ್ನಾತಕ ಅಥವಾ ಸ್ನಾತಕೋತ್ತರ ಪದವಿಗೆ ತಕ್ಕಂತೆ ಕೆಲಸ ಸಿಗುತ್ತಿಲ್ಲ. ಕೆಲಸ ಸಿಕ್ಕರು ಕೆಲಸಕ್ಕೆ ತಕ್ಕಂತೆ ಸಂಬಳವಿಲ್ಲ. ಒಟ್ಟಿನಲ್ಲಿ ಹೇಳುವುದಾದರೆ ಉದ್ಯೋಗ ಪಡೆಯಲು ರೋಸಿ ಹೋಗುವುದು ಶತಸಿದ್ಧ. ಖಾಸಗಿ ಕೆಲಸ ಬಿಡಿ ಇನ್ನು ರಾಜ್ಯ ಸರ್ಕಾರದ ಕೆಲಸದ ಕರೆಯೋಲೆ ಬಂದ್ ಆಗಿದೆ. ಲಕ್ಷಾಂತರ ವಿದ್ಯಾರ್ಥಿಗಳು ಜಾತಕ ಪಕ್ಷಿಯಂತೆ ಇನ್ನೂ ಕಾಯುತ್ತಿದ್ದಾರೆ. ಸರ್ಕಾರ ಯಾವಾಗ ಅರ್ಜಿ ಆಹ್ವಾನಿಸಬಹುದೆಂದು ಒಟ್ಟಿನಲ್ಲಿ ನೂರಕ್ಕೆ ನೂರರಷ್ಟು ಶಿಕ್ಷಣ ಪಡೆಯುವವರು ಖಾಸಗಿ ಕೆಲಸ ಪಡೆಯಲು ಹರಸಾಹಸ ಪಡಬೇಕು ಅಷ್ಟೇ.
ದೇಶದ 22 ಭಾಷೆಗಳು ರಾಷ್ಟ್ರ ಭಾಷೆಗಳು
ಬಹಳ ಜನರಿಗೆ ಹಿಂದಿ ಭಾಷೆ ಎಂದರೆ ರಾಷ್ಟ್ರ ಭಾಷೆ ಎಂದುಕೊAಡಿದ್ದಾರೆ. ಕನ್ನಡ ಸೇರಿದಂತೆ ದೇಶದ 22 ಭಾಷೆಗಳು ರಾಷ್ಟ್ರ ಅಥವಾ ಸಂವಿಧಾನದ ಅಧಿಕೃತ ಭಾಷೆಯಾಗಿದೆ. ಕೇಂದ್ರ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಸರ್ಕಾರಿ ಕಚೇರಿಗಳು ಮಾತ್ರ ಹಿಂದಿ ಮತ್ತು ಇಂಗ್ಲೀಷ್ ಆಡಳಿತ ಭಾಷೆಯಾಗಿದೆ. ಆದರೆ ಆಯಾ ಪ್ರಾದೇಶಿಕ ಭಾಷೆಯಲ್ಲಿ ವ್ಯವಹರಿಸುವುದು ಕಡ್ಡಾಯ. ಹಿಂದಿ ಸರಳ ಭಾಷೆಯಾಗಿದ್ದು, ಅವಶ್ಯಕತೆ ಅಗತ್ಯ ಇರುವವರು ಮತ್ತು ಕಲಿಯುವ ಆಸಕ್ತಿ ಇರುವವರು ಕಲಿತೆ ಕಲಿಯುತ್ತಾರೆ. ಆ ಹಿಂದಿ ಭಾಷೆಯನ್ನು ದಕ್ಷಿಣ ಭಾರತದ ರಾಜ್ಯಗಳು ಸೇರಿದಂತೆ ಅನೇಕ ಕಡೆ ಹಿಂದಿ ಕಲಿಯಲೇಬೇಕು ಎಂಬ ತಾಕೀತು ಮಾಡುವುದು ಅಥವಾ ಹೇರಿಕೆ ಮಾಡುವುದು ಸರಿಯಲ್ಲ. ಹಿಂದಿ ಭಾಷೆ ಬಗ್ಗೆ ರಾಜ್ಯ ಸರ್ಕಾರ ತೆಗೆದುಕೊಂಡ ನಿರ್ಣಯ ಸರಿಯಾಗಿದೆ.
-ವೀರೇಶ ಧೂಪದಮಠ
ಬಿಸಿಲಿನ ತಾಪಮಾನಕ್ಕೆ ವಿದ್ಯಾರ್ಥಿಗಳು ಅಂಕ ಗಳಿಸುವುದು ಕಷ್ಟ



