ಸರ್ಜಾಪುರ: ಸಂವಿಧಾನವನ್ನು ನಾವು ಸರಿಯಾಗಿ ಅರಿತುಕೊಂಡಾಗ ಮಾತ್ರ ದೇಶದ ಆಡಳಿತ ಯಂತ್ರವನ್ನು ಪ್ರಗತಿಯ ಹಾದಿಯಲ್ಲಿ ಮುನ್ನಡೆಸಲು ಸಾಧ್ಯ ಎಂದು ಸರ್ಜಾಪುರ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಎಸ್.ಎಂ. ಶ್ರೀನಿವಾಸ್ ರವರು ತಿಳಿಸಿದರು.
ಅವರು ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಬೆಂಗಳೂರು ನಗರ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ವತಿಯಿಂದ ಸರ್ಜಾಪುರ ಹೋಬಳಿಯಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಜಾಗೃತಿ ಜಾಥಾ ಅಭಿಯಾನ ರಥಯಾತ್ರೆ ಚಾಲನೆ ನೀಡಿ ಮಾತನಾಡಿದರು.
ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ನಮಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಹಾಗೂ ಮತದಾನದ ಹಕ್ಕನ್ನು ಕೊಟ್ಟ ಫಲವಾಗಿ ನಾನು ಇಂದು ನಾವು ಪಂಚಾಯತಿ ಅಧ್ಯಕ್ಷರಾಗಿ ವಿವಿಧ ಹಂತಗಳಲ್ಲಿ ಜನ ಸೇವೆಯನ್ನು ಮಾಡಲು ಅವಕಾಶವನ್ನು ದೊರಕಿದೆ ಇದೇ ರೀತಿಯಲ್ಲಿ ಈ ದೇಶದಲ್ಲಿ ಅಧಿಕಾರ ಹಾಗೂ ಆಡಳಿತವನ್ನು ಕಾನೂನಿನ ಚೌಕಟ್ಟಿನೊಳಗೆ ಶಾಂತಿಯುತವಾಗಿ ಕಾರ್ಯ ನಿರ್ವಹಿಸಲು ನಮ್ಮ ಸಂವಿಧಾನವು ಕೊಡುಗೆಯಾಗಿದೆ ಹಾಗೂ ನಮ್ಮ ದೇಶ ಜಾತ್ಯಾತೀತ ದೇಶವಾಗಬೇಕು ಎಂಬ ನಿಟ್ಟಿನಲ್ಲಿ ಪ್ರತಿಯೊಬ್ಬರಿಗೂ ಒಂದೇ ಓಟು ನೀಡುವ ಮೂಲಕ ಮತದಾನದ ಹಕ್ಕನ್ನು ನೀಡಲಾಗಿದೆ. ನಿಮ್ಮ ಮತವನ್ನು ಮಾರಿಕೊಳ್ಳದೆ, ಸದೃಡ ಸಮಾಜವನ್ನು ಕಟ್ಟುವಂತಹ ನಾಯಕರನ್ನ ಆಯ್ಕೆ ಮಾಡಿ, ಉತ್ತಮ ಸಮಾಜವನ್ನು ಕಟ್ಟುವಲ್ಲಿ ನಾವೆಲ್ಲ ಮುಂದಾಗಬೇಕಿದೆ ಎಂದರು.
ಸಂವಿಧಾನವನ್ನು ಗೌರವಿಸಬೇಕು : ಸರ್ಜಾಪುರ ಗ್ರಾಮ ಪಂಚಾಯತಿ ಅಧ್ಯಕ್ಷೆ ಸುನೀತಾ ಶಶಿಧರ್ ಮಾತನಾಡಿ, ಈ ದೇಶದ ಪ್ರಜೆಗಳಾದ ನಾವು ಪ್ರತಿಯೊಬ್ಬರೂ ಸಂವಿಧಾನದ ಫಲಾನುಭವಿಗಳಾಗಿದ್ದಿವಿ ನಮ್ಮನ್ನು ಸದಾ ರಕ್ಷಣೆ ಮಾಡುತ್ತಿರುವ ಈ ದೇಶದ ಆತ್ಮದಂತೆ ಇರುವ ಈ ಸಂವಿಧಾನವನ್ನು ಭಕ್ತಿ ಭಾವದಿಂದ ಗೌರವಿಸುದರ ಜೊತೆಯಲ್ಲಿ ಇದರ ಸಂರಕ್ಷಣೆ ಮತ್ತು ಜಾರಿಗೊಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು
ಭಾರತ ರತ್ನ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ವೈ ಶ್ರೀರಾಮಲು ಮಾತನಾಡಿ, ಭಾರತದ ಸಂವಿಧಾನಕ್ಕೆ ಜಗತ್ತಿನಲ್ಲಿಯೇ ಉನ್ನತವಾದ ಸ್ಥಾನಮಾನವಿದ್ದು ಅಂಬೇಡ್ಕರ್ ರವರು ರಚಿಸಿದ ಸಂವಿಧಾನ ಯಾವುದೆ ಒಂದು ಜಾತಿ, ಧರ್ಮ, ವರ್ಗಕ್ಕೆ ಸೀಮಿತವಾಗಲ್ಲ ಬದಲಾಗಿ ಪ್ರತಿಯೊಬ್ಬ ಪ್ರಜೆಗೂ ಸಮಾನ ಹಕ್ಕು ಸಿಗುವಂತಹ ಸಂವಿಧಾನವನ್ನು ದೇಶಕ್ಕೆ ನೀಡಿದ್ದಾರೆ. ವಿಶೇಷವಾಗಿ, ಮಹಿಳೆಯರಿಗೆ, ಶೋಷಿತ ವರ್ಗಕ್ಕೆ ನೀಡಿದ ರಾಜಕೀಯ ಮೀಸಲಾತಿಯಿಂದ ಇಂದು ಎಲ್ಲರೂ ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ, ಸ್ಥಾನ ಮಾನ ಪಡೆಯಲು ಅನುಕೂಲವಾಗಿದೆ.
ಹಾಗಾಗಿ ಸಂವಿಧಾನದ ಬಗ್ಗೆ ದೇಶದ ಜನರು ಸಮಗ್ರವಾಗಿ ಅರಿತುಕೊಂಡಗ ಮಾತ್ರ ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಹೋಗಲು ಮತ್ತು ಸದೃಢ ಸಮಾಜವನ್ನು ಕಟ್ಟಲು ಸಹಕಾರಿಯಾಗುತದೆ ಎಂದರು.ಇದೇ ಸಂದರ್ಭದಲ್ಲಿ ಇನ್ನು ಕಾರ್ಯಕ್ರಮದಲ್ಲಿ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ವೈ ಶ್ರೀರಾಮಲು, ಸರ್ಜಾಪುರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಶಂಭಯ್ಯ, ಎಸ್.ಎಂ ಶ್ರೀನಿವಾಸ್, ದಲಿತ ಹೋರಾಟಗಾರರಾದ ಎಂ.ಸಿ ಹಳ್ಳಿ ವೇಣು, ಸರ್ಜಾಪುರ ಗ್ರಾಮ ಪಂಚಾ¬ತಿ ಅಧ್ಯಕ್ಷರಾದ ಸುನೀತಾ ಶಶಿಧರ್, ಉಪಾಧ್ಯ್ಷರಾದ ಎ. ಸತೀಶ್ ಕುಮಾರ್, ಪಿಡಿಓ ಸುಭಾನ್ ಖಾನ್, ಸದಸ್ಯರಾದ ಅರವಿಂದ್ ರೆಡ್ಡಿ, ಆರ್. ಶ್ರೀನಿವಾಸ್, ಲಲಿತಮ್ಮ. ರೇಣುಕಮ್ಮ, ಕಲಾವತಿ ಮೂರ್ತಿ ಕುಮಾರ್ ಅನಿಲ್ ರೆಡ್ಡಿ, ಭರತ್, ವೀಣಾ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಮಂಜುನಾಥ್, ಇಲಾಖೆಯ ರಾಜೇಶ್, ಪುನೀತಾ, ಪರಮಪ್ಪ ಪಾಷಾಗಾರ, ಲಲಿತ, ವರಲಕ್ಷ್ಮೀ, ಮಧು, ರಾಜು ಹಾಗೂ ಮತ್ತಿತ್ತರರು ಹಾಜರಿದ್ದರು.
ಸಂವಿಧಾನದ ಪೀಠಿಕೆಯ ಪ್ರತಿಜ್ಞಾವಿಧಿಯನ್ನು ಸರ್ಜಾಪುರ ಗ್ರಾಮ ಪಂಚಾ¬ತಿ ಉಪಾಧ್ಯ್ಷರಾದ ಎ. ಸತೀಶ್ ಕುಮಾರ್ ರವರು ಬೋಧಿಸಿದರು. ಕೋಲಾರದ ಜಾನಪದ ಕಲಾತಂಡದ ನಾಯಕ ಚಿಕ್ಕರೆಡ್ಡಪ್ಪ ನೇತೃತ್ವದಲ್ಲಿ ಅಂಬೇಡ್ಕರ್ ಕುರಿತಾದ ಕ್ರಾಂತಿಗೀತೆಗಳು ಕಾರ್ಯಕ್ರಮಕ್ಕೆ ಹೆಚ್ಚಿನ ಮೆರಗುತಂದಿತು.
ಕಾರ್ಯಕ್ರಮದಲ್ಲಿ ಸರ್ಜಾಪುರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಶಂಭಯ್ಯ, ಎಸ್.ಎಂ ಶ್ರೀನಿವಾಸ್, ದಲಿತ ಹೋರಾಟಗಾರರಾದ ಎಂ.ಸಿ ಹಳ್ಳಿ ವೇಣು, ಸರ್ಜಾಪುರ ಗ್ರಾಮ ಪಂಚಾ¬ತಿ ಅಧ್ಯಕ್ಷರಾದ ಸುನೀತಾ ಶಶಿಧರ್, ಉಪಾಧ್ಯ್ಷರಾದ ಎ. ಸತೀಶ್ ಕುಮಾರ್, ಪಿಡಿಓ ಸುಭಾನ್ ಖಾನ್, ಸದಸ್ಯರಾದ ಅರವಿಂದ್ ರೆಡ್ಡಿ, ಆರ್. ಶ್ರೀನಿವಾಸ್, ಲಲಿತಮ್ಮ. ರೇಣುಕಮ್ಮ, ಕಲಾವತಿ ಮೂರ್ತಿ ಕುಮಾರ್ ಅನಿಲ್ ರೆಡ್ಡಿ, ಭರತ್, ವೀಣಾ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಮಂಜುನಾಥ್, ಇಲಾಖೆಯ ರಾಜೇಶ್, ಪುನೀತಾ, ಪರಮಪ್ಪ ಪಾಷಾಗಾರ, ಲಲಿತ, ವರಲಕ್ಷ್ಮೀ, ಮಧು, ರಾಜು ಹಾಗೂ ಮತ್ತಿತ್ತರರು ಹಾಜರಿದ್ದರು.