This is the title of the web page
This is the title of the web page

ಮಹಿಳಾ ಸಾಧಕಿಯರನ್ನು ಮಹಿಳೆಯರೇ ಗುರುತಿಸುವುದು ಅತಿ ವಿರಳ: ಸಾಲು ಮರದ ತಿಮ್ಮಕ್ಕ

ಬೆಂಗಳೂರು: ಮೊದಲು ಮಹಿಳೆಯರ ಸಾಧನೆಯನ್ನು ಮಹಿಳೆಯರೇ ಗುರುತಿಸಿ ಗೌರವಿಸುವಂತಾಗಬೇಕು. ಮಹಿಳೆಯರು ಕಲಿತರೆ ಇಡೀ ಕುಟುಂಬವೇ ಕಲಿತಂತೆ, ಇಂತಹ ಮಹಿಳಾ ಸಾಧಕಿಯರನ್ನು ಗುರುತಿಸಿ ಪ್ರಶಸ್ತಿಯನ್ನು ನನ್ನಿಂದ ಕೊಡಿಸುತ್ತಿರುವುದು ನನಗೆ ಸಂತಸ ತಂದಿದೆ ಎಂದು ಪದ್ಮಶ್ರೀ ಪುರಸ್ಕೃತ ಸಾಲು ಮರದ ತಿಮ್ಮಕ್ಕನವರು ಹೇಳಿದರು.

ಮಿಸಸ್ ಯೂನಿವರ್ಸ್ 2019 ಸುಧಾ. ಎಮ್. ರವರು ಒಬ್ಬರು ಸಾಧಕಿಯರಾಗಿ ಇತರ ಸಾಧಕಿಯರನ್ನು ತಮ್ಮ ಸುಧಾ ವೆಂಚರ್ಸ್ ಮೂಲಕ ಗುರುತಿಸಿ ಪ್ರಶಸ್ತಿಯನ್ನು ನೀಡಿರುವುದಕ್ಕೆ ಸಾಲು ಮರದ ತಿಮ್ಮಕ್ಕನವರು ಸುಧಾ.ಎಮ್.ರವರನ್ನು ಅಭಿನಂದಿಸಿದರು.
ಸುಧಾ ವೆಂಚರ್ಸ್ ವತಿಯಿಂದ ಎಸ್.ವಿ. ಫಿದಾ ಶಿರೋ ಅವಾರ್ಡ್ಸ್ 2023ನ್ನು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಖಾಸಗಿ ಹೋಟೆಲ್‍ನಲ್ಲಿ ವಿವಿಧ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ 30 ಮಹಿಳಾ ಸಾಧಕಿಯರಿಗೆ ಗ್ಲೋಬಲ್ ವರ್ಲ್ಡ್ ರೆಕಾರ್ಡ್ ಅವಾರ್ಡ್ ನೀಡಿ ಗೌರವಿಸಲಾಯಿತು.

 

ಪೊಲೀಸ್ ಇಲಾಖೆ, ಸಿನಿಮಾ ಕ್ಷೇತ್ರ, ಸಾಮಾಜಿಕ ಕ್ಷೇತ್ರ, ಔದ್ಯೋಗಿಕ ಕ್ಷೇತ್ರ ಮತ್ತು ಹಲವಾರು ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ಸಾಧಕಿಯರನ್ನು ಗುರುತಿಸಿ ಪ್ರಶಸ್ತಿ ನೀಡಲಾಯಿತು.ಪದ್ಮಶ್ರೀ ಪುರಸ್ಕೃತ ಸಾಲು ಮರದ ತಿಮ್ಮಕ್ಕನ ವರು ಭಾಗವಹಿಸಿ ಅಧ್ಯಕ್ಷತೆಯನ್ನು ವಹಿಸಿ, ಎಲ್ಲಾ ಸಾಧಕಿಯರಿಗೆ ಆಶೀರ್ವದಿಸಿ ಪ್ರಶಸ್ತಿ ಪ್ರದಾನ ಮಾಡಿದರು.

     

ಕಾರ್ಯಕ್ರಮದಲ್ಲಿ ಚಿತ್ರನಟಿ ಹರ್ಷಿತಾ ಪೂಣಚ್ಚ, ಹಿರಿಯ ನಟಿ ಭವ್ಯ, ಚಿತ್ರನಟ ಹಾಗೂ ಮೆಜಿಷಿಯನ್ ಎಮ್.ಡಿ.ಕೌಶಿಕ್, ಅಬಕಾರಿ ಇಲಾಖೆ ಉಪ ಆಯುಕ್ತ ಡಾ. ಬಿ.ಆರ್. ಹಿರೇಮಠ್, ಇಂದುಸಂಜೆ ಪತ್ರಿಕೆ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ. ಪದ್ಮನಾಗರಾಜು, ಸಮಾಜ ಶಾಸ್ತ್ರಜ್ಞರಾದ ಪ್ರೊ. ಸಮತಾ ಬಿ. ದೇಶಮಾನೆ, ಕೈಗಾರಿಕಾ ಉದ್ಯೋಗ ಸಂಸ್ಥೆಯ ಆಯುಕ್ತರಾದ ಕೆ. ಜ್ಯೋತಿ, ಆರಕ್ಷಕ ಅಧಿಕ್ಷಕ ಜಿ.ಕೆ. ರಶ್ಮಿ, ಹಿರಿಯ ಸೌಂದರ್ಯವರ್ಧಕರಾದ ಮಾಲಾಶೆಟ್ಟಿ, ಡ್ರೀಮ್‍ರೋನ್ ವ್ಯವಹಾರ ಮುಖ್ಯಸ್ಥರಾದ ಮಧು ಟಿ.ಎಂ. ಗೌಡ ಮುಂತಾದವರು ಭಾಗವಹಿಸಿದ್ದರು. ಪಾರ್ಥರವರು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.