ಕುಣಿಗಲ್: ಕಾರಿನಿಂದ ಬೈಕ್ಗೆ ಗುದ್ದಿ ಯುವಕನನ್ನು ಕೊಲೆ ಮಾಡಿ ಪರಾರಿಯಾಗಿದ್ದ ಐದು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಕುಣಿಗಲ್ ಪೆÇಲೀಸರು ಯಶಸ್ವಿಯಾಗಿದ್ದಾರೆ.ತಾಲೂಕಿನ ಕೊತ್ತಗೆರೆ ಹೋಬಳಿಬಾಗೇನಹಳ್ಳಿ ಗ್ರಾಮದ ರಾಮಚಂದ್ರ (27) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊತ್ತಗೆರೆ ಪಾಳ್ಯದ ಸೀನಾ ಅಲಿಯಾಸ್ ಶ್ರೀನಿವಾಸ್ (34), ಉಮೇಶ (32), ಚನ್ನಪ್ಪಗೌಡನಪಾಳ್ಯ ಗುರುರಾಜ್ (40), ಬಿದನಗೆರೆ ಗ್ರಾಮದ ಶಿವರಾಮ್ (38), ಸೊಬಗಾನಹಳ್ಳಿ ಗ್ರಾಮದ ಲಕ್ಷ್ಮಣ (36) ಅವರನ್ನು ಕುಣಿಗಲ್ ಪೊಲೀಸರು ಬಂಧಿಸಿದ್ದಾರೆ.
ಘಟನೆ ವಿವರ : ಜೂ 10 ಸೋಮವಾರ ಬಾಗೇನಹಳ್ಳಿ ಗ್ರಾಮದ ರಾಮಚಂದ್ರ ಕೆಲಸದ ನಿಮಿತ ಕುಣಿಗಲ್ ಪಟ್ಟಣಕ್ಕೆ ಬಂದು ತನ್ನ ಗ್ರಾಮ ಬಾಗೇನಹಳ್ಳಿಗೆ ಬೈಕ್ನಲ್ಲಿ ವಾಪಸ್ಸ್ ಹೊಗುತ್ತಿದ್ದ ವೇಳೆ ರಾಜ್ಯ ಹೆದ್ದಾರಿ 33 ಕುಣಿಗಲ್, ತುಮಕೂರು ರಸ್ತೆ ಬಾಗೇನಹಳ್ಳಿ ಗೇಟ್ ಬಳಿ ಶ್ರೀನಿವಾಸ್ ಹಾಗೂ ಆತನ ಸಹಚರರು ಕಾರಿನಲ್ಲಿ ಬಂದು ರಾಮಚಂದ್ರ ಚಾಲನೆ ಮಾಡಿಕೊಂಡು ಹೋಗುತ್ತಿದ್ದ ಬೈಕ್ನ ಹಿಂಬದಿಗೆ ಡಿಕ್ಕಿ ಹೊಡೆದು, ಕೊಲೆ ಮಾಡಿ ಪರಾರಿಯಾಗಿದ್ದರು, ಆದರೆ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಅಪರಿಚಿತ ಕಾರು ಬೈಕ್ಗೆ ಡಿಕ್ಕಿ ಹೊಡೆದು, ರಾಮಚಂದ್ರ ಅವರು ಸಾವನಪ್ಪಿದ್ದಾರೆ ಎಂದು ಪ್ರಕರಣ ದಾಖಲಾಗಿತ್ತು,
ಈ ಸಂಬಂಧ ಸಂಶಯ ವ್ಯಕ್ತಪಡಿಸಿದ ಪೊಲೀಸರು, ಹೆಚ್ಚಿನ ತನಿಖೆ ನಡೆಸಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ.ವಿ.ಅಶೋಕ್, ಎಎಸ್ಪಿ ಮರಿಯಪ್ಪ, ಡಿವೈಎಸ್ಪಿ ಓಂಪ್ರಕಾಶ್ ಅವರ ಮಾರ್ಗದರ್ಶನದಲ್ಲಿ ಸಿಪಿಐ ನವೀನ್ಗೌಡ ಅವರ ನೇತೃತ್ವದ ಪೊಲೀಸ್ ತಂಡವು ಈ ಪ್ರಕರಣವನ್ನು ಭೇಧಿಸಲಾಗಿ ಹಳೇ ದ್ವೇಶದಿಂದ ರಾಮಚಂದ್ರನ್ನು ಕಾರಿನಿಂದ ಗುದ್ದಿ ಕೊಲೆ ಮಾಡಲಾಗಿದೆ ಎಂದು ಪ್ರಕರಣಕ್ಕೆ ಹೊಸ ರೂಪ ಪಡೆದು ಐದು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೊಲೆಗೆ ಹಳೇ ದ್ವೇಶ ಕಾರಣ : ಕಳೆದ ಎರಡು ವರ್ಷಗಳ ಹಿಂದೆ ಮೃತ ರಾಮಚಂದ್ರ, ಶ್ರೀನಿವಾಸನಿಗೆ ಚಾಕುವಿನಿಂದ ಹಲ್ಲೆ ಮಾಡಿದ್ದನು ಈ ಸಂಬಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ಇದಾದ ಬಳಿಕ ರಾಮಚಂದ್ರ ಹಾಗೂ ಶ್ರೀನಿವಾಸ ಇಬ್ಬರು ಯಾವುದೇ ಗಲಾಟೆಗೆ ಹೋಗದೆ ಸುಮ್ಮನಿದ್ದರು, ಬಳಿಕ ರಾಮಚಂದ್ರ ಮಧುವೆಯಾಗಿ ಸಂಸಾರಿಕ ಜೀವನ ನಡೆಸುಕೊಂಡು ಹೋಗುತ್ತಿದ್ದರು, ರಾಮಚಂದ್ರನಿಗೆ ಒಂದು ಮಗು ಸಹಾ ಇದೆ, ಈ ಮಧ್ಯೆ ರಾಮಚಂದ್ರ ಮತ್ತೆ ಶ್ರೀನಿವಾಸನನ್ನು ಕೊಲೆ ಮಾಡುತ್ತೇನೆ ಎಂದು ಅಲ್ಲಲ್ಲಿ ಹೇಳಿಕೊಂಡು ತಿರುಗಾಡುತ್ತಿದ್ದನು ಎನ್ನಲಾಗಿದ್ದು, ವಿಚಾರ ತಿಳಿದ ಶ್ರೀನಿವಾಸ ರಾಮಚಂದ್ರನನ್ನು ಮುಗಿಸಲೇ ಬೇಕೆಂದು ಹೊಂಚುಹಾಕಿ ನಾಲ್ಕು ಮಂದಿ ಸ್ನೇಹಿತರನ್ನು ಸೇರಿಕೊಂಡು ಯಾರಿಗೂ ಅನುಮಾನ ಭಾರದ ರೀತಿಯಲ್ಲಿ ರಸ್ತೆ ಅಪಘಾತವಾಗುವ ರೀತಿಯಲ್ಲಿ ರಾಮಚಂದ್ರನನ್ನು ಕೊಲೆ ಮಾಡಿದ್ದರು ಎನ್ನಲಾಗಿದೆ.