ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಸರಣಿಯಲ್ಲಿ ಭಾರತ 2-1ರಿಂದ ಮುನ್ನಡೆ ಸಾಧಿಸಿದೆ. ಇದೀಗ ರಾಂಚಿಯಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಬೆನ್ ಸ್ಟೋಕ್ಸ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು.
ತಂಡಕ್ಕೆ ಜೋ ರೂಟ್ ಆಸರೆಯಾಗುವ ಮೂಲಕ ಮೊದಲ ಇನ್ನಿಂಗ್ಸ್ ನಲ್ಲಿ ಉತ್ತಮ ಮೊತ್ತ ಕಲೆಹಾಕುವಲ್ಲಿ ಸಹಾಯಕರಾದರು. ಈ ಮೂಲಕ ಆಲೌಟ್ ಆಗಿರುವ ಆಂಗ್ಲರು ತಮ್ಮ ಮೊದಲ ಇನ್ನಿಂಗ್ಸ್ನಲ್ಲಿ 104.5 ಓವರ್ಗೆ 353 ರನ್ ಗಳಿಸಿದೆ. ಇತ್ತ ಭಾರತದ ಪರ 2ನೇ ದಿನದಾಟದ ಆರಂಭದಿಂದಲೇ ಜಡೇಜಾ ಭರ್ಜರಿ ಬೌಲಿಂಗ್ ಮಾಡಿ ಮಿಂಚಿದರು.
ಜಡೇಜಾ ಭರ್ಜರಿ ಬೌಲಿಂಗ್: ಇನ್ನು, ಎರಡನೇ ದಿನದಾಟದ ಆರಂಭದಲ್ಲಿಯೇ ರವೀಂದ್ರ ಜಡೇಜಾ ತಮ್ಮ ಸ್ಪಿನ್ ಮೂಲಕ ಆಂಗ್ಲರ ಭೇಟೆಯಾಡಿದರು. ಅವರು 32.5 ಓವರ್ ಬೌಲ್ ಮಾಡಿ 4 ವಿಕೆಟ್ ಕಬಳಿಸಿದರು. ಅಲ್ಲದೇ ವೇಗಿ ಆಕಾಶ್ ದೀಪ್ ಈ ಸರಣಿಯಲ್ಲಿ ಪಾದಾರ್ಪಣೆ ಮಾಡಿದ 4 ಭಾರತೀಯ ಕ್ರಿಕೆಟಿಗರಾಗಿದ್ದಾರೆ. 27ರ ಹರೆಯದ ಆಕಾಶ್ ದೀಪ್ ಆಂಗ್ಲರ ವಿರುದ್ಧ ಭರ್ಜರಿ ಬೌಲಿಂಗ್ ಮಾಡಿದ್ದಾರೆ. ನಾಲ್ಕನೇ ಟೆಸ್ಟ್ ಪಂದ್ಯಕ್ಕಾಗಿ ಭಾರತ ತಂಡ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಿದೆ. ಅವರ ಸ್ಥಾನವನ್ನು ಆಕಾಶದೀಪ್ ಅವರಿಗೆ ನೀಡಲಾಗಿದೆ. ಆಕಾಶ್ 3 ವಿಕೆಟ್, ಮೊಹಮ್ಮದ್ ಸಿರಾಜ್ 2 ವಿಕೆಟ್ ಪಡೆದು ಮಿಂಚಿದರು. ಅಶ್ವಿನ್ 1 ವಿಕೆಟ್ ಪಡೆದರು.
ರೂಟ್ ಭರ್ಜರಿ ಶತಕ; ರಾಬಿನ್ಸನ್ ಉತ್ತಮ ಜೊತೆಯಾಟ:
ಇಂಗ್ಲೆಂಡ್ ವಿರುದ್ಧದ ರಾಂಚಿ ಟೆಸ್ಟ್ನೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಭಾರತದ ವೇಗದ ಬೌಲರ್ ಆಕಾಶ್ ದೀಪ್, ಪಂದ್ಯದಲ್ಲಿ ಭಾರತವನ್ನು ಮುನ್ನಡೆಸಲು ಮೂರು ಆರಂಭಿಕ ಹೊಡೆತಗಳನ್ನು ನೀಡಿದರು. ಇಂಗ್ಲೆಂಡ್ ತಂಡ 112 ರನ್ ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡಿತ್ತು. ಇಲ್ಲಿಂದ ಜೋ ರೂಟ್ ತಮ್ಮ ಅನುಭವದ ಮೂಲಕ ಭರ್ಜರಿ ಶತಕ ಸಿಡಸಿ ತಂಡಕ್ಕೆ ಆಸರೆಯಾದರು. ಅಲ್ಲದೇ 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ಓಲಿ ರಾಬಿನ್ಸನ್, ಜೋ ರೂಟ್ಗೆ ಸಂಪೂರ್ಣ ಬೆಂಬಲ ನೀಡಿದರು.
ಅವರ ಟೆಸ್ಟ್ ವೃತ್ತಿಜೀವನದ ಅತಿದೊಡ್ಡ ಇನ್ನಿಂಗ್ಸ್ಗಳನ್ನು ಆಡಿದರು. 96 ಎಸೆತಗಳಲ್ಲಿ 9 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 58 ರನ್ ಗಳಿಸಿ ಜೋ ರೂಟ್ 274 ಎಸೆತದಲ್ಲಿ 10 ಬೌಂಡರಿ ಮೂಲಕ 122 ರನ್ ಸಿಡಿಸಿದರು. ಉಳಿದಂತೆ ಆರಂಭಿಕರಾಗಿ ಕಣಕ್ಕಿಳಿದ ಬೆನ್ ಡಕೆಟ್ 11 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ಓಲಿ ಪೋಪ್ ಶೂನ್ಯಕ್ಕೆ ಪವೆಲಿಯನ್ ಸೇರಿದರು. ಅತ್ತ ಜಾಕ್ ಕ್ರಾವೆಲ್ 42 ರನ್ ಗಳಿಸಿ ಆಕಾಶ್ ಗೆ ವಿಕೆಟ್ ನೀಡಿದರು. ಜಾನಿ ಬೇರ್ಸ್ಟೋ 38 ರನ್, ನಾಯಕ ಬೆನ್ ಸ್ಟೋಕ್ಸ್ 3 ರನ್, ಟಾಮ್ ಹಾರ್ಟ್ಲಿ 26 ರನ್, ಫೋಕ್ಸ್ 126 ಎಸೆತದಲ್ಲಿ 47 ರನ್ ಗಳಿಸಿ ಮಿಂಚಿದರು. ಅಂತಯಿಮವಾಗಿ ತಂಡ 353 ರನ್ಗೆ ಆಲೌಟ್ ಆಗುವ ಮೂಲಕ ಮೊದಲ ಇನ್ನಿಂಗ್ಸ್ ಮುಗಿಸಿದೆ.