ಹೊಸಕೋಟೆ: ಸಮಾನತೆ ಎಂದರೆ ಬುದ್ದ, ಬಸವಣ್ಣ ಹಾಗೂ ಡಾ ಅಂಬೇಡ್ಕರ್ ನೆನಪಾಗುತ್ತಾರೆ ಆದರೆ ಬಸವಣ್ಣನವರು 12ನೇ ಶತಮಾನದಲ್ಲಿ ಸಮಾನತೆಯ ಕಿಚ್ಚನ್ನು ವಚನಗಳ ಮೂಲಕ ಸಾರಿ ವಚನ ಸಂಸ್ಕಾರದ ಪಿತಾಮಹರಾಗಿ ಪ್ರಖ್ಯಾತಿ ಗಳಿಸಿದ್ದಾರೆ ಎಂದು ಕಿಯೋನಿಕ್ಸ್ ಅಧ್ಯಕ್ಷ ಹಾಗೂ ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ನಗರದ ತಾಲೂಕು ಕಚೇರಿಯಲ್ಲಿ ವಿಶ್ವ ಸಾಂಸ್ಕøತಿಕ ನಾಯಕ ಜಗಜ್ಯೋತಿ ಬಸವಣ್ಣನವರ ಭಾವಚಿತ್ರ ಅನಾವರಣ ಕಾರ್ಯಕ್ರಮದಲ್ಲಿ ಮಾತಣಾಡಿದರುಬಸವಣ್ಣನವರು 12ನೇ ಶತಮಾನದಲ್ಲಿ ಸಮಾನತೆಗೆ ಕೈಗೊಂಡ ಕ್ರಾಂತಿಕಾರಿ ಆಲೋಚನೆಗಳು ಇಂದಿಗೂ ಸಹ ಜಾರಿಗೆ ತರಲಾಗುತ್ತಿದೆ, ಸಮಾಜದಲ್ಲಿ ಅಸಮಾನತೆ ಉಂಟಾದ ಸಂದರ್ಭದಲ್ಲಿ ಇಂತಹ ಮಹಾನ್ ಪುರುಷರು ಹುಟ್ಟಿ ಸಮಾಜದಲ್ಲಿ ಸಮಾನತೆ ಮೂಡಿಸುವುದರ ಜೊತೆಗೆ ಮೌಡ್ಯತೆ ತೊಲಗಿಸುವ ಕೆಲಸ ಮಾಡುತ್ತಾರೆ ಎಂದ ಆವರು ಅಸಮಾನತೆ ದೂರ ಮಾಡಲು ಲಿಂಗಾಯತ ಧರ್ಮ ಅಥವಾ ತತ್ವವನ್ನು ಬೋಧಿಸಿ ಯಾವುದೇ ಜಾತಿ ಬೇಧಭಾವವಿಲ್ಲದೆ ಎಲ್ಲರಿಗೂ ಲಿಂಗದಾರಣೆಗೆ ಮುಂದಾಗುವ ಮೂಲಕ ನಾವೆಲ್ಲಾ ಸಮಾನರು ಎಂದು ಬಿಂಬಿಸಿದ ಮಹಾನ್ ಪುರುಷ ಎಂದರು.
ಇಂತಹ ಮಹಾನ್ ವ್ಯಕ್ತಿಯನ್ನು ರಾಜ್ಯ ಸರಕಾರ ವಿಶ್ವ ಸಾಂಸ್ಕøತಿಕ ನಾಯಕ ಎಂದು ಪರಿಗಣಿಸಿ ಎಲ್ಲಾ ಸರಕಾರಿ ಕಚೇರಿಗಳಲ್ಲೂ ಭಾವಚಿತ್ರವನ್ನು ಅಳವಡಿಸುವ ಮೂಲಕ ಗೌರವ ವ್ಯಕ್ತಪಡಿಸಿದೆ. ಸರ್ವಕಾಲಕ್ಕೂ ಅನ್ವಯಿಸುವಂತಹ ಬಸವಣ್ಣನವರ ವಚನಗಳನ್ನು ಪಾಲಿಸುವ ಮೂಲಕ ಜನರು ಗೌರವ ಸಲ್ಲಿಸಬೇಕು ಎಂದು ಹೇಳಿದರು.
ತಹಶೀಲ್ದಾರ್ ಎಂ. ವಿಜಯ್ ಕುಮಾರ್ ಮಾತನಾಡಿ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬಂತೆ ಬಸವಣ್ಣನವರು ಸುಮಾರು 800 ವರ್ಷಗಳ ಹಿಂದೆ ನಿರ್ಣಯಗಳನ್ನು ಎಲ್ಲಾ ಸಮುದಾಯದವರನ್ನು ಅನುಭವ ಮಂಟಪದಲ್ಲಿ ಸೇರಿಸಿ ಸಾರಿದ ಬಸವಣ್ಣ ಪ್ರಜಾಪ್ರಭುತ್ವದ ಕಲ್ಪನೆಯನ್ನು ಅಂದೇ ಜಗತ್ತಿಗೆ ನೀಡಿದ್ದರು, ಅವರ ವಚನಗಳ ಮೂಲಕ ಮೇಲು ಕೀಳನ್ನುವ ಬೇದಬಾವವನ್ನು ತೊಡೆದುಹಾಕಲು ಶ್ರಮಿಸಿದರು ಎಂದರು.
ಸಮುದಾಯದ ಮುಖಂಡ ತಾವರೆ ಕೆರೆಯ ದಯಾನಂದ ಬಾಬು ಮಾತನಾಡಿ ಬಸವಣ್ಣನವರು ನಮ್ಮ ಕರ್ನಾಟಕದಲ್ಲಿ ಹುಟ್ಟಿದ್ದು ನಮ್ಮೆಲ್ಲರ ಹೆಮ್ಮೆಯ ವಿಚಾರವಾಗಿದ್ದು ಮೌಡ್ಯಾಚಾರ, ಚಾತುರ್ವರ್ಣ ಪದ್ದತಿಗಳನ್ನು ಹೋಗಲಾಡಿಸಿ ಜಗತ್ತಿಗೆ ಸಂದೇಶ ನೀಡಿದ ಮಹಾನ್ ವ್ಯಕ್ತಿ ಬಸವಣ್ಣ ಎಂದರು.
ಈ ಸಂದರ್ಭದಲ್ಲಿ ಸಂಸ್ಕೃತಿಯ ನಾಯಕಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿದರು ಹಾಗೂ ಬಸ್ಸ್ಟಾಂಡಿನ ಬಸವೇಶ್ವರರ ಪ್ರತಿಮೆಗೂ ಮಾಲಾರ್ಪಣೆ ಮಾಡಿದರು.ಈ ಕಾರ್ಯಕ್ರಮದಲ್ಲಿ ನಗರಸಭೆ ಪೌರಾ ಯುಕ್ತ ಜಹೀರ್ ಅಬ್ಬಾಸ್, ಡಿವೈಎಸ್ಪಿ ಎಂ. ಮಲ್ಲೇಶ್, ಗ್ರೇಡ್-2 ತಹಶೀಲ್ದಾರ್ ಟಿ.ಕೆ.ಪ್ರಭಾಕರ್, ಟಿಎಪಿಸಿಎಂಎಸ್ ಅಧ್ಯಕ್ಷ ಬಾಬುರೆಡ್ಡಿ, ಮುಖಂಡರಾದ ಬಿ.ವಿ.ರಾಜಶೇಖರಗೌಡ, ಇಟ್ಟಸಂದ್ರ ಗೋಪಾಲ್, ಲಕ್ಕೊಂಡಹಳ್ಳಿ ಮಂಜುನಾಥ್, ವಿಜಯಕುಮಾರ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.