ದೇವನಹಳ್ಳಿ: ವಿದ್ಯಾರ್ಥಿಗಳು ಸಹ ತಮ್ಮ ಜೀವನದಲ್ಲಿ ಭ್ರಷ್ಟಾ ಚಾರದ ವಿರುದ್ಧ ಹೋರಾಡುವ ಮನಸ್ಥಿತಿ ಬೆಳೆಸಿಕೊಳ್ಳ ಬೇಕೆಂದು ವಿಕಲಚೇತನರ ಹಾಗೂ ಹಿರಿಯ ಹಿರಿಯ ನಾಗರೀ ಕರ ಸಬಲೀಕರಣ ಇಲಾಖೆ ಉಪ ನಿರ್ದೇಶಕರಾದ ಜಗದೀಶ ಅವರು ಕರೆ ನೀಡಿದರು.
ದೇವನಹಳ್ಳಿ ತಾಲ್ಲೂಕು ಆವತಿಯಲ್ಲಿನ ವಿಕಲಚೇತನರ ಹಾಗೂ ಹಿರಿಯ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಹಾಗೂ ಸ್ವಯಂ ಸೇವಾ ಸಂಸ್ಥೆ, ಶ್ರೀ ಸಾಯಿ ಇಂಟರ್ನ್ಯಾ ಷನಲ್ ಚಾರಿಟೇಬಲ್ ಟ್ರಸ್ಟ್, ಶ್ರೀ ಸಾಯಿ ಮದ್ಯಪಾನ ಮತ್ತು ಮಾದಕ ವ್ಯಸನಿಗಳ ಪರಿವರ್ತನಾ ಕೇಂದ್ರ ಇವರುಗಳ ಸಂಯುಕ್ತ ಆಶ್ರಯದಲ್ಲಿ ನಡೆಸಿದ ವಿಶೇಷ ಓರಿಯನ್ಟೇಶನ್ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ವೃತ್ತಿಯಲ್ಲಿ ಪ್ರಾಮಾಣಿಕತೆ ಮತ್ತು ನೈತಿಕತೆ ಯನ್ನು ಅಳವಡಿಸಿಕೊಳ್ಳುವು ದರಿಂದ ದೇಶವನ್ನು ಅಭಿವೃದ್ಧಿಯ ಕಡೆ ಸಾಗಲಿದೆ. ಸಮಾಜ ಮುಖಿ ಸೇವೆಗೆ ಇಚ್ಛಾಶಕ್ತಿ ತೊರುವುದರಿಂದ ಮಾತ್ರ ದೇಶದ ಅಭಿವೃದ್ಧಿ ಹೊಂದಲಿದೆ.
ಸಮಾಜ ಕಾರ್ಯ ಪ್ರಶಿಕ್ಷಣಾರ್ಥಿಗಳು ತಮ್ಮ ಸಮಾಜ ಕಾರ್ಯ ವೃತ್ತಿ ಜೀವನದಲ್ಲಿ ಅಳವಡಿಸಿಕೊಳ್ಳ ಬೇಕಾದಂತಹ ನೈತಿಕತೆ, ಪ್ರಾಮಾಣಿಕತೆ ಸಮಯಪ್ರಜ್ಞೆ ಮತ್ತು ಮಾನವೀಯ ಮೌಲ್ಯಗಳ ಬಗ್ಗೆ ವಿವರವಾಗಿ ತಿಳಿಸುವುದರ ಜೊತೆಗೆ ವಿದ್ಯಾರ್ಥಿ ಜೀವನದಲ್ಲಿ ತಮ್ಮ ಉತ್ತಮ ಕಲೆ ಮತ್ತು ಕೌಶಲ್ಯ ಗಳೊಂದಿಗೆ ಹೇಗೆ ಅಭಿವೃದ್ದಿ ಹೊಂದಬೇಕು, ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಹೇಗೆ ಸಾಮಾಜಿಕ ನ್ಯಾಯ ದೊರಕಿಸಬೇಕು, ನೈಸರ್ಗಿಕ ವಿಪತ್ತು ಸಂದರ್ಭದಲ್ಲಿ ನಮ್ಮ ಜವಾಬ್ದಾರಿ ಹೇಗೆ ನಿರ್ವಹಣೆ ಸೇರಿದಂತೆ ಹಲವಾರು ಮಾಹಿತಿಗಳ ಬಗ್ಗೆ ಚರ್ಚೆ ನಡೆಸಲಾಯಿತು ಎಂದು ತಿಳಿಸಿದರು.
ಶ್ರೀ ಸಾಯಿ ಇಂಟರ್ನ್ಯಾಷನಲ್ ಚಾರಿಟೇ ಬಲ್ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷ ಮೂರ್ತಿ ಮಾತನಾಡಿ, ಭ್ರಷ್ಟಾಚಾರ ನಿರ್ಮೂಲನೆಗೆ ಜಾಗೃತಿ ಅರಿವು ಸಪ್ತಾಹ -2023 ಕಾರ್ಯ ಕ್ರಮದ ಜತೆಗೆ ಸಮಾಜ ಕಾರ್ಯ ಪ್ರಶಿಕ್ಷಣಾ ರ್ಥಿಗಳಿಗೆ ಪ್ರತಿಜ್ಞೆ ಭೋದಿಸಿ ದೇಶದ ಅನೇಕ ಜ್ವಲಂತ ಸಮಸ್ಯೆಗಳಿಗೆ ಭ್ರಷ್ಟಚಾರ ಮುಖ್ಯಕಾರಣ ವಾಗಿದ್ದು ಅನಿಷ್ಟ ವ್ಯವಸ್ಥೆ ಬುಡ ಸಮೇತ ಕಿತ್ತು ಸುಟ್ಟುಹಾಕಲು ಸಮಾಜ ಕಾರ್ಯ ವೃತ್ತಿಯ ಎಲ್ಲರೂ ಪ್ರಾಮಾಣಿಕವಾಗಿ ಕೆಲಸ ಮಾಡುವ ಮೂಲಕ ದೇಶದ ನಿಜವಾದ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಬೇಕು ಹಾಗೂ ಸಮಾಜ ಕಾರ್ಯ ವೃತ್ತಿಯಲ್ಲಿರುವವರು ಭ್ರಷ್ಟಾಚಾರ ವನ್ನು ಬುಡ ಸಮೇತ ತೊಡೆದು ಹಾಕಲು ಪ್ರಾಮಾಣಿಕತೆ ಯಿಂದ ಸೇವೆಸಲ್ಲಿಸಬೇಕಿದೆ, ಪ್ರತಿಯೊಬ್ಬರು ದೇಶದ ಸರ್ವಾಗೀಣ ಅಭಿವೃದ್ಧಿಗೆ ಶ್ರಮಿಸಬೇಕು.
ವಿದ್ಯಾರ್ಥಿಗಳಿಗೆ ಸರ್ಕಾರದ ಕಾರ್ಯ ಕ್ರಮಗಳನ್ನು ಜನತೆಗೆ ತಲುಪಿಸುವಲ್ಲಿ ಹೆಚ್ಚಿನ ಪ್ರಯತ್ನಗಳನ್ನ ಮಾಡಬೇಕು ಜೀವನದಲ್ಲಿ ಉತ್ತಮ ವಿಚಾರ ಗಳನ್ನು ಅಳವಡಿಸಿಕೊಳ್ಳ ಬೇಕು ಹಾಗೂ ಮುಂದೆ ಉತ್ತಮ ಸಂಸ್ಥೆಗಳನ್ನು ಪ್ರಾರಂಭ ಮಾಡಿ ಸಮಾಜಕ್ಕೆ ಹೆಚ್ಚಿನ ಸೇವೆ ಯನ್ನು ನೀಡುವುದರ ಜೊತೆಗೆ ಒಳಿತನ್ನು ಮಾಡುವುದರ ಮೂಲಕ ಪ್ರತಿಯೊಬ್ಬ ರಿಗೂ ಮಾದರಿಯಾಗಬೇಕು ಎಂದು ಎಲ್ಲಾ ಸಮಾಜ ಕಾರ್ಯ ಪ್ರಶಿಕ್ಷಣಾರ್ಥಿಗಳಿಗೆ ಹಿತನುಡಿಗಳನ್ನು ತಿಳಿಸಿದರು.
ಸಮಾಜ ಕಾರ್ಯ ಪದವಿ ಕಾಲೇಜು ಪ್ರಾದ್ಯಪಕರಾದ ನಾಗರಾಜು, ಟ್ರಸ್ಟ್ ಸಮಿತಿ ಸದಸ್ಯರಾದ ಮಹಮದ್, ಕೋಕಿಲ್, ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಜರಿದ್ದರು.